DHFWS Mysore Recruitment 2020: ಗ್ರೂಪ್ ಡಿ, ಸ್ಪೆಷಲಿಸ್ಟ್ ಮತ್ತು ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ

ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿ ಬರುವ ಜಿಲ್ಲಾ ಕೋವಿಡ್ ಆಸ್ಪತ್ರೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಇವರ ಅಧೀನ ಕೋವಿಡ್ ಕೇರ್ ಕೇಂದ್ರ ಮತ್ತು ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಲು ತಜ್ಞರು, ವೈದ್ಯಾಧಿಕಾರಿಗಳು, ಶುಶ್ರೂಷಕರು, ಗ್ರೂಪ್ ಡಿ ಹುದ್ದೆಗಳಿಗೆ ಕೋವಿಡ್-19 ಕರ್ತವ್ಯಕ್ಕಾಗಿ ನೇರ ಸಂದರ್ಶನ ನಡೆಸಲಾಗುತ್ತಿದೆ.

ಒಟ್ಟು 136 ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದ್ದು, ಆಸಕ್ತರು ಅಕ್ಟೋಬರ್ 13,2020ರಂದು ನಡೆಯುವ ನೇರ ಸಂದರ್ಶನ ದಲ್ಲಿ ಪಾಲ್ಗೊಳ್ಳಬಹುದು.

ಜಿಲ್ಲಾ ಆರೋಗ್ಯ ಮತ್ತು ಕು.ಕ. ಸಂಘ ಮೈಸೂರು ಇಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಹುದ್ದೆಗಳ ವಿವರ:

ತಜ್ಞರು - 21 ಹುದ್ದೆಗಳು
ವೈದ್ಯಾಧಿಕಾರಿಗಳು - 33 ಹುದ್ದೆಗಳು
ಶುಶ್ರೂಷಕರು - 41 ಹುದ್ದೆಗಳು
ಗ್ರೂಪ್ ಡಿ - 41 ಹುದ್ದೆಗಳು
ಒಟ್ಟು 136 ಹುದ್ದೆಗಳು

ವಿದ್ಯಾರ್ಹತೆ:

ತಜ್ಞರು - ಎಂಬಿಬಿಎಸ್ ಜೊತೆಗೆ ಪಿಜಿ
ವೈದ್ಯಾಧಿಕಾರಿಗಳು - ಎಂಬಿಬಿಎಸ್
ಶುಶ್ರೂಷಕರು - ಬಿ.ಎಸ್ಸಿ/ಜಿಎನ್ಎಂ/ಡಿಪ್ಲೋಮಾ ನರ್ಸಿಂಗ್
ಗ್ರೂಪ್ ಡಿ - ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ

ವಯೋಮಿತಿ:

ನೇಮಕಾತಿ ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ ಸಾಮಾನ್ಯ ವರ್ಗದ ಗರಿಷ್ಟ 35 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ ಗರಿಷ್ಟ 38 ವರ್ಷ ಮತ್ತು ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಪ.ಜಾ/ಪ.ಪಂಗಡ/ಪ್ರವರ್ಗ-1ರ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು.

ವೇತನ:

ತಜ್ಞರು - ತಿಂಗಳಿಗೆ 1,21,000/-ರೂ
ವೈದ್ಯಾಧಿಕಾರಿಗಳು - ತಿಂಗಳಿಗೆ 60,000/-ರೂ
ಶುಶ್ರೂಷಕರು - ತಿಂಗಳಿಗೆ 25,000/-ರೂ
ಗ್ರೂಪ್ ಡಿ - ತಿಂಗಳಿಗೆ 12,000/-ರೂ

ಸಂದರ್ಶನದ ವಿವರ:

ಸಂದರ್ಶನ ದಿನಾಂಕ: ಅಕ್ಟೋಬರ್ 13,2020ರಂದು ಬೆಳಿಗ್ಗೆ 10 ಗಂಟೆಗೆ
ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ತಮ್ಮ ಮೂಲ ಅಂಕಪಟ್ಟಿಗಳು/ಎಲ್ಲಾ ಪ್ರಮಾಣ ಪತ್ರಗಳೊಂದಿಗೆ ಅಡ್ರೆಸ್ ಪ್ರೂಫ್ ಮತ್ತು ಐಡಿ ಪ್ರೂಫ್ ನೊಂದಿಗೆ ಹಾಗೂ ಇವುಗಳ ಎರಡು ಜೆರಾಕ್ಸ್ ಪ್ರತಿಯನ್ನು ತಿಳಿಸಿರುವ ದಿನಾಂಕಗಳಲ್ಲಿ ನಿಗಧಿತ ಸಮಯದೊಳಗೆ ಸಂದರ್ಶನಕ್ಕೆ ಹಾಜರಾಗಬಹುದು.

ಕಚೇರಿ ವಿಳಾಸ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ,
ಮೈಸೂರು ಜಿಲ್ಲೆ,
ಥಿಯೋಬಾಲ್ಡ್ ರಸ್ತೆ, ನಜರ್ ಬಾದ್,
ಮೈಸೂರು - 570010

ದೂರವಾಣಿ ಸಂಖ್ಯೆ: 0821 2529205

ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.

ಜಿಲ್ಲಾ ಆರೋಗ್ಯ ಮತ್ತು ಕು.ಕ. ಸಂಘ ಮೈಸೂರು ಇಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

More News  

For Quick Alerts
ALLOW NOTIFICATIONS  
For Daily Alerts

English summary
DHFWS mysore recruitment 2020 notification has been released for 136 group D, nursing officer and specialist posts. Interested candidates can attend walk in interview on Oct 13.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+