ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ತುಮಕೂರು ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ 34 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಮಾರ್ಚ್ 23,2021ರಂದು ನೇರ ಸಂದರ್ಶನವನ್ನು ನಡೆಸಲಾಗುತ್ತಿದೆ. ನೇಮಕಾತಿ ಬಗೆಗೆ ಸಂಪೂರ್ಣ ಮಾಹಿತಿ ಪಡೆಯಲು ಮುಂದೆ ಓದಿ.

ಹುದ್ದೆಗಳ ವಿವರ:
ಅರವಳಿಕೆ ತಜ್ಞರು - 3 ಹುದ್ದೆಗಳು
ಮಕ್ಕಳ ತಜ್ಞರು - 2 ಹುದ್ದೆಗಳು
ಪ್ರಸೂತಿ ಮತ್ತು ಸ್ತ್ರೀ-ರೋಗ ತಜ್ಞರು - 3 ಹುದ್ದೆಗಳು
ಸ್ಪೆಷಲಿಸ್ಟ್ - 1 ಹುದ್ದೆ
ಫಿಸಿಷಿಯನ್ - 1 ಹುದ್ದೆ
ಸಾಮಾನ್ಯ ಕರ್ತವ್ಯ ವೈದ್ಯರು - 9 ಹುದ್ದೆಗಳು
ವೈದ್ಯಾಧಿಕಾರಿಗಳು - 7 ಹುದ್ದೆಗಳು
ಶುಶ್ರೂಷಕರು - 4 ಹುದ್ದೆಗಳು
ಆಶಾ ಮೇಲ್ಚಿಚಾರಕರು - 1 ಹುದ್ದೆ
ಹಿರಿಯ ಮಹಿಳಾ ಆರೋಗ್ಯ ಸಹಾಯಕರು - 2 ಹುದ್ದೆಗಳು
ತಾಂತ್ರಿಕ ಮೇಲ್ವಿಚಾರಕರು - 1 ಹುದ್ದೆ
ಒಟ್ಟು 34 ಹುದ್ದೆಗಳು
ವಿದ್ಯಾರ್ಹತೆ:
ಅರವಳಿಕೆ ತಜ್ಞರು - ಎಂ.ಡಿ, ಡಿ.ಎ, ಡಿಎನ್‌ಬಿ
ಮಕ್ಕಳ ತಜ್ಞರು - ಎಂ.ಡಿ, ಡಿಸಿಹೆಚ್, ಡಿಎನ್‌ಬಿ, ಡಿ.ಎಂ
ಪ್ರಸೂತಿ ಮತ್ತು ಸ್ತ್ರೀ-ರೋಗ ತಜ್ಞರು - ಎಂ.ಡಿ, ಡಿಜಿಓ, ಡಿಎನ್‌ಬಿ
ಸ್ಪೆಷಲಿಸ್ಟ್ - ಎಂ.ಡಿ
ಫಿಸಿಷಿಯನ್ - ಎಂ.ಡಿ
ಸಾಮಾನ್ಯ ಕರ್ತವ್ಯ ವೈದ್ಯರು - ಎಂಬಿಬಿಎಸ್
ವೈದ್ಯಾಧಿಕಾರಿಗಳು - ಎಂಬಿಬಿಎಸ್
ಶುಶ್ರೂಷಕರು - ಡಿಪ್ಲೋಮಾ, ಬಿ.ಎಸ್ಸಿ
ಆಶಾ ಮೇಲ್ಚಿಚಾರಕರು - ಡಿಪ್ಲೋಮಾ, ಬಿ.ಎಸ್ಸಿ, ಜಿಎನ್‌ಎಂ
ಹಿರಿಯ ಮಹಿಳಾ ಆರೋಗ್ಯ ಸಹಾಯಕರು - ಕಿ.ಮ.ಆ.ಸ ತರಬೇತಿಯನ್ನು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ಮಾತ್ರ ಪಡೆದಿರಬೇಕು ಮತ್ತು ಕರ್ನಾಟಕ ನರ್ಸಿಂಗ್ ಕಾನ್ಸಲಿಂಗ್ ನಲ್ಲಿ ನೊಂದಣಿ
ತಾಂತ್ರಿಕ ಮೇಲ್ವಿಚಾರಕರು - ಎಸ್‌ಎಸ್‌ಎಲ್.ಸಿ, ಪಿಯುಸಿ
ವಯೋಮಿತಿ:
ಹುದ್ದೆಗಳಿಗನುಸಾರ ಗರಿಷ್ಟ ೫೦ ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ವೇತನ:
ಅರವಳಿಕೆ ತಜ್ಞರು, ಮಕ್ಕಳ ತಜ್ಞರು, ಪ್ರಸೂತಿ ಮತ್ತು ಸ್ತ್ರೀ-ರೋಗ ತಜ್ಞರು,
ಸ್ಪೆಷಲಿಸ್ಟ್ ಮತ್ತು ಫಿಸಿಷಿಯನ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 1,10,000/-ರೂ
ಸಾಮಾನ್ಯ ಕರ್ತವ್ಯ ವೈದ್ಯರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 46,200/-ರೂ,
ವೈದ್ಯಾಧಿಕಾರಿಗಳು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 36,750/- ರಿಂದ 45,000/-ರೂ,
ಶುಶ್ರೂಷಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 11,500/- ರಿಂದ 14,000/-ರೂ,
ಆಶಾ ಮೇಲ್ಚಿಚಾರಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 10,000/-ರೂ,
ಹಿರಿಯ ಮಹಿಳಾ ಆರೋಗ್ಯ ಸಹಾಯಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 12,600/-ರೂ ಮತ್ತು ತಾಂತ್ರಿಕ ಮೇಲ್ವಿಚಾರಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 17,850/-ರೂ ವೇತನವನ್ನು ನೀಡಲಾಗುವುದು.
ಸಂದರ್ಶನದ ವಿವರ:
ಆಸಕ್ತ ಅಭ್ಯರ್ಥಿಗಳು ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳೊಂದಿಗೆ ಮಾರ್ಚ್ 23,2021ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಿ ಅರ್ಜಿಯನ್ನು ಸಲ್ಲಿಸಬಹುದು.
ಕಚೇರಿ ವಿಳಾಸ:
ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿಗಳ ಘಟಕ,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಛೇರಿಗಳ ಸಂಕೀರ್ಣ,
ಅಮಾನಿಕೆರೆ ಮುಂಭಾಗ,
ತುಮಕೂರು.
ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.


Click it and Unblock the Notifications











