ಜಿಲ್ಲಾ ಆಯುಷ್ ಕಚೇರಿ ನೇಮಕಾತಿ 16 ತಜ್ಞವೈದ್ಯರು / ಅರೆ ವೈದ್ಯಕೀಯ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಪುರಸ್ಕೃತ ಯೋಜನೆಯಾದ ರಾಷ್ಟ್ರೀಯ ಆಯುಷ್ ಅಭಿಯಾನದ ಅಡಿಯಲ್ಲಿ 15 ಆಸ್ಪತ್ರೆಗಳಿಗೆ ತಜ್ಞವೈದ್ಯರು / ಅರೆ ವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಸೂಚನೆಯನ್ನು ಓದಬಹುದು.

ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಆಗಸ್ಟ್ 15,2019 ರ ಸಂಜೆ 4:30ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

ಜಿಲ್ಲಾ ಆಯುಷ್ ಕಚೇರಿಯಲ್ಲಿ ಉದ್ಯೋಗಾವಕಾಶ

 

CRITERIA DETAILS
Name Of The Posts ತಜ್ಞವೈದ್ಯರು /ಅರೆವೈದ್ಯಕೀಯ
Organisation ಜಿಲ್ಲಾ ಆಯುಷ್ ಕಚೇರಿ
Educational Qualification ಸ್ನಾತಕೋತ್ತರ ಪದವಿ,ಪದವಿ,ಎಂ.ಎಸ್,ಎಂ.ಡಿ / ಸ್ನಾತಕ ಪದವಿ,ಎಸ್‌.ಎಸ್‌.ಎಲ್‌.ಸಿ/ 10ನೇ ತರಗತಿ, ಡಿಪ್ಲೋಮಾ, 7ನೇ ತರಗತಿ,
Job Location ರಾಮನಗರ (ಕರ್ನಾಟಕ)
Salary Scale ತಜ್ಞವೈದ್ಯ -ತಿಂಗಳಿಗೆ 35,000/-ರೂ,ಆಯುಷ್ ಔಷಧಿ ವಿತರಕರು - ತಿಂಗಳಿಗೆ 15,821/-ರೂ, ಮಸಾಜಿಸ್ಟ್ ,ಕ್ಷಾರ ಸೂತ್ರ ಅಟೆಂಡರ್ ಮತ್ತು ಸ್ತ್ರೀರೋಗ ಅಟೆಂಡರ್ - ತಿಂಗಳಿಗೆ 11,356/-ರೂ ಮತ್ತು ಮಲ್ಟಿಪರ್ಪಸ್ ವರ್ಕರ್ -ತಿಂಗಳಿಗೆ 10,300/-ರೂ
Application Start Date July 20, 2019
Application End Date August 15, 2019

ಶೈಕ್ಷಣಿಕ ವಿದ್ಯಾರ್ಹತೆ:

ಸ್ನಾತಕೋತ್ತರ ಪದವಿ,ಪದವಿ,ಎಂ.ಎಸ್,ಎಂ.ಡಿ / ಸ್ನಾತಕ ಪದವಿ,ಎಸ್‌.ಎಸ್‌.ಎಲ್‌.ಸಿ/ 10ನೇ ತರಗತಿ, ಡಿಪ್ಲೋಮಾ ಮತ್ತು 7ನೇ ತರಗತಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:

ಆಗಸ್ಟ್ 15,2019ರ ಅನ್ವಯ ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ವೇತನದ ವಿವರ:

ತಜ್ಞವೈದ್ಯ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 35,000/-ರೂ,ಆಯುಷ್ ಔಷಧಿ ವಿತರಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 15,821/-ರೂ, ಮಸಾಜಿಸ್ಟ್ ,ಕ್ಞಾರ ಸೂತ್ರ ಅಟೆಂಡರ್ ಮತ್ತು ಸ್ತ್ರೀರೋಗ ಅಟೆಂಡರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 11,356/-ರೂ ಮತ್ತು ಮಲ್ಟಿಪರ್ಪಸ್ ವರ್ಕರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 10,300/-ರೂ ವೇತನವನ್ನು ನೀಡಲಾಗುವುದು.

 

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್‌ http://kgamoa.com/ ಗೆ ಹೋಗಿ ಅಧಿಸೂಚನೆಯನ್ನು ಓದಬಹುದು. ಜಿಲ್ಲಾ ಆಯುಷ್‌ ಅಧಿಕಾರಿಗಳ ಕಚೇರಿ,ರಾಮನಗರದಲ್ಲಿ ಅರ್ಜಿಯನ್ನು ಜುಲೈ 20,2019 ರಿಂದ ಜುಲೈ 30,2019ರ ಸಂಜೆ 5 ಗಂಟೆಯವರೆಗೆ ವಿತರಿಸಲಾಗುವುದು. ಅಭ್ಯರ್ಥಿಗಳು ಅರ್ಜಿಯನ್ನು ಪಡೆದು ಭರ್ತಿ ಮಾಡಿ ಆಗಸ್ಟ್ 15,2019 ರ ಸಂಜೆ 4:30ರೊಳಗೆ ಕಚೇರಿಗೆ ಸಲ್ಲಿಸಬಹುದು.

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ

ಜಿಲ್ಲಾ ಆಯುಷ್ ಕಚೇರಿಯಲ್ಲಿ ಉದ್ಯೋಗಾವಕಾಶ

For Quick Alerts
ALLOW NOTIFICATIONS  
For Daily Alerts

English summary
District Ayush Office Karnataka Recruitment 2019-20:Apply for 16 Specialist & Part-Time Doctors vacancies. District Ayush Office Karnataka invited applications from eligible and interested candidates to fill up Specialist & Part-Time Doctors Posts through District Ayush Office Karnataka official notification 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X