ಜಿಲ್ಲಾ ನ್ಯಾಯಾಲಯ ಘಟಕ ಬೆಂಗಳೂರು ಬೆರಳಚ್ಚುಗಾರರು, ಬೆರಳಚ್ಚು ನಕಲುಗಾರರು ಮತ್ತು ಜವಾನ ಹುದ್ದೆಗಳಿಗೆ ಅರ್ಜಿ ಅಹ್ವಾನ

ಬೆಂಗಳೂರು, ಲಘು ವ್ಯವಹಾರಗಳ ನ್ಯಾಯಾಲಯದ ಘಟಕದಲ್ಲಿ ಖಾಲಿ ಇರುವ ಬೆರಳಚ್ಚುಗಾರರು, ಬೆರಳಚ್ಚು ನಕಲುಗಾರರು ಮತ್ತು ಜವಾನರು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಫೆಬ್ರವರಿ 4.2019 ರ ಸಂಜೆ 5:30 ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು.

ಬೆಂಗಳೂರು ಜಿಲ್ಲಾ ನ್ಯಾಯಾಲಯ ಘಟಕದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ

 

CRITERIA DETAILS
Name Of The Posts ಬೆರಳಚ್ಚುಗಾರರು, ಬೆರಳಚ್ಚು ನಕಲುಗಾರರು & ಜವಾನರು
Organisation ಬೆಂಗಳೂರು ಜಿಲ್ಲಾ ಲಘು ವ್ಯವಹಾರಗಳ ನ್ಯಾಯಾಲಯ ಘಟಕ
Educational Qualification SSLC, 7th
Job Location ಬೆಂಗಳೂರು
Salary Scale ಬೆರಳಚ್ಚುಗಾರರು,ಬೆರಳಚ್ಚು ನಕಲುಗಾರರು (ರೂ.21,400/- ರಿಂದ 42,000/- ರೂ ವೇತನ) & ಜವಾನರು(17,000/-ರೂ ರಿಂದ 28,950/-ರೂ ವೇತನ)
Application End Date February 4, 2019

ವಿದ್ಯಾರ್ಹತೆ:

ಬೆರಳಚ್ಚುಗಾರರುಮತ್ತು ಬೆರಳಚ್ಚು ನಕಲುಗಾರರು ಹುದ್ದಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.ಬೆರಳಚ್ಚುಗಾರರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದಲ್ಲಿ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ನೀಡಲ್ಪಟ್ಟ ಐಚ್ಛಿಕ ವಿಷಯಗಳಂತೆ ಕನ್ನಡ ಅಥವಾ ಇಂಗ್ಲೀಷ್ ಬೆರಳಚ್ಚು ಪರೀಕ್ಷೆಯಲ್ಲಿ ಹಿರಿಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಬೆರಳಚ್ಚು ಯಂತ್ರದೊಂದಿಗೆ ಕಾರ್ಯದರ್ಶಿ ಅಭ್ಯಾಸದಲ್ಲಿ ಡಿಪ್ಲೊಮವನ್ನು ಹೊಂದಿರುವವರು ಅಥವಾ ಸಮಾನ ಅರ್ಹತೆಯನ್ನು ಪಡೆದುಕೊಂಡಿರಬೇಕು.

ಬೆರಳಚ್ಚು ನಕಲುಗಾರರು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕರ್ನಾಟಕದಲ್ಲಿ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ನೀಡಲ್ಪಟ್ಟ ಐಚ್ಛಿಕ ವಿಷಯಗಳಂತೆ ಕನ್ನಡ ಅಥವಾ ಇಂಗ್ಲೀಷ್ ಬೆರಳಚ್ಚು ಪರೀಕ್ಷೆಯಲ್ಲಿ ಕಿರಿಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಬೆರಳಚ್ಚು ಯಂತ್ರದೊಂದಿಗೆ ಕಾರ್ಯದರ್ಶಿ ಅಭ್ಯಾಸದಲ್ಲಿ ಡಿಪ್ಲೊಮವನ್ನು ಹೊಂದಿರುವವರು ಅಥವಾ ಸಮಾನ ಅರ್ಹತೆಯನ್ನು

ಪಡೆದುಕೊಂಡಿರಬೇಕು

ಜವಾನರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 7ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಕನ್ನಡ ಓದಲು ಮತ್ತು ಬರೆಯಲು ಬರಬೇಕು.

 

ಬೆರಳಚ್ಚುಗಾರರು: 9 ಹುದ್ದೆಗಳು

ಖಾಲಿ ಹುದ್ದೆಗಳ ವಿವರ:

ಮೀಸಲಾತಿಇತರೆಮಹಿಳೆಗ್ರಾಮೀಣಅಂಗವಿಕಲಮಾಜಿ ಸೈನಿಕಕನ್ನಡ ಮಾಧ್ಯಮ ಯೋಜನಾ ನಿರಾಶ್ರಿತರು ಒಟ್ಟು
ಪರಿಶಿಷ್ಟ ಜಾತಿ-- 1- - - - 1
ಪರಿಶಿಷ್ಟ ಪಂಗಡ - - ------
ಪ್ರವರ್ಗ-1- - - 1*- --1
ಪ್ರವರ್ಗ- 2A- - - - - - --
ಪ್ರವರ್ಗ-2B - -- - - - - -
ಪ್ರವರ್ಗ-3A- - - - - - - -
ಪ್ರವರ್ಗ-3B- - - 1*- --1
ಸಾಮಾನ್ಯ2 -- - 1- - 3
ಒಟ್ಟು2 -12*1- -6

ಸೂಚನೆ: * ದೃಷ್ಟಿಮಾಂಧ್ಯತೆಯುಳ್ಳ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ.

ಹೈದರಾಬಾದ್ ಕರ್ನಾಟಕ ಪ್ರಾಂತ್ಯಕ್ಕೆ ಸೇರಿದ ಸ್ಥಳೀಯ ವೃಂದದ ಹುದ್ದೆಗಳು - 3

ಮೀಸಲಾತಿಇತರೆಮಹಿಳೆಒಟ್ಟು
ಪರಿಶಿಷ್ಟ ಜಾತಿ1 (ಬ್ಯಾಕ್ ಲಾಗ್) -1 (ಬ್ಯಾಕ್ ಲಾಗ್)
ಪರಿಶಿಷ್ಟ ಪಂಗಡ1 (ಬ್ಯಾಕ್ ಲಾಗ್) -1 (ಬ್ಯಾಕ್ ಲಾಗ್)
ಸಾಮಾನ್ಯ -11
ಒಟ್ಟು2 -3

ಬೆರಳಚ್ಚು ನಕಲುಗಾರರು: 15 ಹುದ್ದೆಗಳು

ಖಾಲಿ ಹುದ್ದೆಗಳ ವಿವರ:

ಮೀಸಲಾತಿಇತರೆಮಹಿಳೆ ಗ್ರಾಮೀಣಅಂಗವಿಕಲಮಾಜಿ ಸೈನಿಕ ಕನ್ನಡ ಮಾಧ್ಯಮ ಯೋಜನಾ ನಿರಾಶ್ರಿತಒಟ್ಟು
ಪರಿಶಿಷ್ಟ ಜಾತಿ11-----2
ಪರಿಶಿಷ್ಟ ಪಂಗಡ-1-----1
ಪ್ರವರ್ಗ-1--------
ಪ್ರವರ್ಗ-2A1------1
ಪ್ರವರ್ಗ-2B---- ----
ಪ್ರವರ್ಗ-3A-1-----1
ಪ್ರವರ್ಗ- 3B-1-----1
ಸಾಮಾನ್ಯ ಅಭ್ಯರ್ಥಿ--11*1--7
ಒಟ್ಟು--11*1--13

ಸೂಚನೆ: * ದೃಷ್ಟಿಮಾಂಧ್ಯತೆಯುಳ್ಳ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ.

ಹೈದರಾಬಾದ್ ಕರ್ನಾಟಕ ಪ್ರಾಂತ್ಯಕ್ಕೆ ಸೇರಿದ ಸ್ಥಳೀಯ ವೃಂದದ ಹುದ್ದೆಗಳು - 2

ಮೀಸಲಾತಿಇತರೆಮಹಿಳೆಒಟ್ಟು
ಪರಿಶಿಷ್ಟ ಜಾತಿ1 (ಬ್ಯಾಕ್ ಲಾಗ್) -1 (ಬ್ಯಾಕ್ ಲಾಗ್)
ಸಾಮಾನ್ಯ -11
ಒಟ್ಟು112

ಜವಾನರು ಹುದ್ದೆಗಳು: 8 ಹುದ್ದೆಗಳು

ಖಾಲಿ ಹುದ್ದೆಗಳ ವಿವರ:

ಮೀಸಲಾತಿಇತರೆಮಹಿಳೆಗ್ರಾಮೀಣಅಂಗವಿಕಲ ಮಾಜಿ ಸೈನಿಕ ಕನ್ನಡ ಮಾಧ್ಯಮಯೋಜನಾ ನಿರಾಶ್ರಿತ ಒಟ್ಟು
ಪರಿಶಿಷ್ಟ ಜಾತಿ--1----1
ಪರಿಶಿಷ್ಟ ಪಂಗಡ---1*- --1
ಪ್ರವರ್ಗ-1-1-----1
ಪ್ರವರ್ಗ-2A--------
ಪ್ರವರ್ಗ-2B--------
ಪ್ರವರ್ಗ-3A--------
ಪ್ರವರ್ಗ- 3B--------
ಸಾಮಾನ್ಯ ಅಭ್ಯರ್ಥಿ- 21-1--4
ಟ್ಟು-321*1--7
ಸೂಚನೆ: * ದೃಷ್ಟಿಮಾಂಧ್ಯತೆಯುಳ್ಳ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ.

ಹೈದರಾಬಾದ್ ಕರ್ನಾಟಕ ಪ್ರಾಂತ್ಯಕ್ಕೆ ಸೇರಿದ ಸ್ಥಳೀಯ ವೃಂದದ ಹುದ್ದೆಗಳು-1

ಮೀಸಲಾತಿಇತರೆ
ಪರಿಶಿಷ್ಟ ಪಂಗಡ1 (ಬ್ಯಾಕ್ ಲಾಗ್)
ಒಟ್ಟು1 (ಬ್ಯಾಕ್ ಲಾಗ್)

ವೇತನ ಶ್ರೇಣಿ:

ಬೆರಳಚ್ಚುಗಾರರು ಮತ್ತು ಬೆರಳಚ್ಚು ನಕಲುಗಾರರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.21,400/- ರಿಂದ 42,000/- ರೂ ಜೊತೆಗೆ ಇನ್ನಿತರೆ ಭತ್ಯೆಗಳು. ಜವಾನರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 17,000/-ರೂ ರಿಂದ 28,950/-ರೂ ವೇತನ ನೀಡಲಾಗುತ್ತದೆ.

ವಯೋಮಿತಿ:

ಅಭ್ಯರ್ಥಿಯು ದಿನಾಂಕ ಫೆಬ್ರವರಿ 4.2019 ಕ್ಕೆ 18 ವರ್ಷ ಪೂರೈಸಿರಬೇಕು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷ ಮೀರಿರಬಾರದು. ಪ್ರವರ್ಗ-2A ಯಿಂದ 3Bನ ಅಭ್ಯರ್ಥಿಗಳಿಗೆ 38 ವರ್ಷ ಮೀರಿರಬಾರದು. ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ ಮೀರಿರಬಾರದು. ವಯಸ್ಸಿನ ಮಿತಿಯನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯ/ಕೇಂದ್ರ ಸರ್ಕಾರಿ ನೌಕರರು/ ಮಾಜಿ ಸೈನಿಕರು/ ಅಂಗವಿಕಲ ಅಭ್ಯರ್ಥಿಗಳು ಹಾಗೂ ವಿಧವೆಯರಿಗೆ ಸಡಿಲಿಕೆಯನ್ನು ನೀಡಲಾಗಿದೆ.

ನೇಮಕಾತಿ ವಿಧಾನ:

ಬೆರಳಚ್ಚುಗಾರರು ಮತ್ತು ಬೆರಳಚ್ಚು ನಕಲುಗಾರರು ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಕೌಶಲ್ಯ ಪರೀಕ್ಷೆಯನ್ನು ನೀಡಲಾಗುತ್ತದೆ . ಈ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದ ಅಭ್ಯರ್ಥಿಗಳಿಗೆ ಸಂದರ್ಶವನ್ನು ಮಾಡಲಾಗುತ್ತದೆ.

ಜವಾನರು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನಿಯಮಾನುಸಾರ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನದ ಮುಖಾಂತರ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಪ್ರಕ್ರಿಯೆ:

ಅರ್ಜಿ ನಮೂನೆಯನ್ನು ಲಘು ವ್ಯವಹಾರಗಳ ನ್ಯಾಯಾಲಯದ ಕಛೇರಿಯಲ್ಲಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ವಿಲೇಖನಾಧಿಕಾರಿಗಳು, ಲಘು ವ್ಯವಹಾರಗಳ ನ್ಯಾಯಾಲಯ, ನಗರ ಸಿವಿಲ್ ನ್ಯಾಯಾಲಯಗಳ ಸಂಕೀರ್ಣ, ಬೆಂಗಳೂರು-560009 ಇವರಿಗೆ ಸಲ್ಲಿಸಲು ಕೊನೆಯ ದಿನಾಂಕ 4.2.2019 ಸಂಜೆ 5:30 ರೊಳಗೆ ಸಲ್ಲಿಸಬೇಕು.

ಅಭ್ಯರ್ಥಿಗಳು ಅರ್ಜಿಯೊಂದಿಗೆ ಭಾರತೀಯ ಪೋಸ್ಟಲ್ ಆರ್ಡರ್ಗಳನ್ನು ಮಾತ್ರ ವಿಲೇಖನಾಧಿಕಾರಿಗಳು, ಲಘು ವ್ಯವಹಾರಗಳ ನ್ಯಾಯಾಲಯ, ಬೆಂಗಳೂರು ಇವರ ಹೆಸರಿಗೆ ಪಡೆದು ಸಲ್ಲಿಸಬೇಕು. (ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳು 50/-ರೂಪಾಯಿಗಳ ಪೋಸ್ಟಲ್ ಆರ್ಡರನ್ನು) ಹಾಗೂ ಇತರೆ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳು 200/-ರೂಗಳ ಪೋಸ್ಟಲ್ ಆರ್ಡರ್ ಗಳನ್ನು ಸಲ್ಲಿಸಬೇಕು.

ಈ ಹುದ್ದೆಗಳ ನೇಮಕಾತಿಯು ತಾತ್ಕಾಲಿಕವಾಗಿದ್ದು 2ವರ್ಷದ ಖಾಯಂಪೂರ್ವ ಅವಧಿಯನ್ನು ಪೂರ್ಣಗೊಳಿಸಬೆಕಾಗಿರುತ್ತದೆ.

ಬೆರಳಚ್ಚುಗಾರರು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಬೆರಳಚ್ಚು ನಕಲುಗಾರರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಇಲ್ಲಿ ಕ್ಲಿಕ್ ಮಾಡಿ ಜವಾನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Court of small causes, Bangalore Invited from the eligible candidates for the post of typist, copy-typist and peon.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X