ಹಾವೇರಿ ಜಿಲ್ಲೆಯ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ 7 ಶೀಘ್ರಲಿಪಿಗಾರ , 18 ಆದೇಶ ಜಾರಿಕಾರರ ಮತ್ತು 26 ಜವಾನ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯ ಎಲ್ಲಾ ಅಂಕಣಗಳನ್ನು ಭರ್ತಿ ಮಾಡಿ ಅರ್ಜಿಯ ಜೊತೆಗೆ ದಾಖಲಾತಿಗಳ ಸ್ವಯಂ ದೃಢೀಕೃತ ನೆರಳಚ್ಚು ಪ್ರತಿಗಳನ್ನು ಲಗತ್ತಿಸಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಹಾವೇರಿ, ಈ ವಿಳಾಸಕ್ಕೆ ನಿಗದಿತ ಅವಧಿಯೊಳಗಾಗಿ ಸಲ್ಲಿಸತಕ್ಕದ್ದು.
ಆಸಕ್ತರು ಅರ್ಜಿಗಳನ್ನು ಕಛೇರಿಯ ವೆಬ್ ಸೈಟ್ ನಲ್ಲಿ ಪ್ರತಿ ತೆಗೆದುಕೊಂಡು ಆನ್ ಲೈನ್ ಮುಖಾಂತರ ಅರ್ಜಿಗಳನ್ನು ದಿನಾಂಕ 15.02.2019 ರ ಸಾಯಂಕಾಲ 5:45 ಘಂಟೆವರೆಗೆ ಮಾತ್ರ ಸಲ್ಲಿಸತಕ್ಕದ್ದು.
CRITERIA | DETAILS |
Name Of The Posts | ಶೀಘ್ರಲಿಪಿಗಾರ , ಆದೇಶ ಜಾರಿಕಾರ ಮತ್ತು ಜವಾನರು |
Organisation | ಜಿಲ್ಲಾ ನ್ಯಾಯಾಲಯ |
Educational Qualification | ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಅರ್ಹತೆ,7ನೇ ತರಗತಿ |
Job Location | ಹಾವೇರಿ |
Salary Scale | ಶೀಘ್ರಲಿಪಿಗಾರರಿಗೆ 27,650/- ರಿಂದ 52,650/-ರೂ, ಆದೇಶ ಜಾರಿಕಾರಿಗೆ 19,950/- ರಿಂದ 37,900/-ರೂ, ಜವಾನ ಹುದ್ದೆಗಳಿಗೆ 17,000/- ರಿಂದ 28,950/-ರೂ ಮತ್ತು ಇತರೆ ಭತ್ಯೆಗಳು |
Application End Date | February 15, 2019 |
ವಿದ್ಯಾರ್ಹತೆ:
ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.
ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ ಕರ್ನಟಕ ಸೆಕೆಂಡರಿ ಪ್ರೌಢ ಶಿಕ್ಷಣ ಪರೀಕ್ಷೆಗಳ ಮಂಡಳಿ ವತಿಯಿಂದ ನಡೆಸಲಾದ ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲಿ ಸೀನಿಯರ್ ದರ್ಜೆಯ ಬೆರಳಚ್ಚು ಮತ್ತು ಶೀಘ್ರಲಿಪಿ ಪರೀಕ್ಷೆಗಳಲ್ಲಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಉತ್ತೀರ್ಣರಾಗಿರತಕ್ಕದ್ದು.
ಅಥವಾ ಡಿಪ್ಲೋಮ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ನಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಗಳ ಪ್ರೌಢ ದಜರ್ಜೆಯ ಶೀಘ್ರಲಿಪಿ ಮತ್ತು ಪ್ರೌಢ ಬೆರಳಚ್ಚು ಪರೀಕ್ಷೆ ತೇರ್ಗಡೆ ಹೊಂದಿರಬೇಕು.
ಆದೇಶ ಜಾರಿಕಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕನ್ನಡ ಭಾಷೆ ಓದಲು ಮತ್ತು ಬರೆಯಲು ಬರಬೇಕು.
ಲಘು(LMV) ಹಾಗೂ ಭಾರಿ (HMV) ವಾಹನ ಚಾಲನಾ ಪತ್ರ ಹೊಂದಿದ್ದಲ್ಲಿ ಲಗತ್ತಿಸುವುದು.
ಜವಾನ ಹುದ್ದೆಗೆ 7 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಸ್ಪಷ್ಟವಾಗಿ ಕನ್ನಡ ಭಾಷೆ ಓದಲು ಮತ್ತು ಬರೆಯಲು ಬರಬೇಕು.
ಶೀಘ್ರಲಿಪಿಗಾರರು: 07 ಹುದ್ದೆಗಳು
ಹುದ್ದೆಗಳ ವರ್ಗೀಕರಣ:
ಹಿಂಬಾಕಿ ಹುದ್ದೆಗಳು : 04
ಮೀಸಲಾತಿ | ಮಹಿಳಾ ಅಭ್ಯರ್ಥಿ | ಯೋಜನಾ ನಿರಾಶ್ರಿತ ಅಭ್ಯರ್ಥಿ | ಅಂಗವಿಕಲ ಅಭ್ಯರ್ಥಿ | ಒಟ್ಟು |
ಸಾಮಾನ್ಯ ವರ್ಗ | - | - | 01 | 01 |
ಪರಿಶಿಷ್ಟ ಜಾತಿ | - | 01 | - | 01 |
ಪ್ರವರ್ಗ-2A | - | 01 | - | 01 |
ಪ್ರವರ್ಗ-2B | 01 | - | - | 01 |
ಒಟ್ಟು | 01 | 02 | 01 | 04 |
ಖಾಲಿ ಇರುವ ಹುದ್ದೆಗಳು: 03
ಮೀಸಲಾತಿ | ಇತರೆ | ಮಹಿಳಾ ಅಭ್ಯರ್ಥಿ | ಗ್ರಾಮೀಣ ಅಭ್ಯರ್ಥಿ | ಒಟ್ಟು |
ಸಾಮಾನ್ಯ ಅಭ್ಯರ್ಥಿ | 01 | 01 | - | 02 |
ಪರಿಶಿಷ್ಟ ಜಾತಿ | - | - | 01 | 01 |
ಒಟ್ಟು | 01 | 01 | 01 | 03 |
ಆದೇಶ ಜಾರಿಕಾರ: 18 ಹುದ್ದೆಗಳು
ಹುದ್ದೆಗಳ ವರ್ಗೀಕರಣ:
ಮೀಸಲಾತಿ | ಇತರೆ | ಮಹಿಳಾ ಅಭ್ಯರ್ಥಿ | ಗ್ರಾಮೀಣ ಅಭ್ಯರ್ಥಿ | ಮಾಜಿ ಸೈನಿಕ ಅಭ್ಯರ್ಥಿ | ಕನ್ನಡ ಮಾಧ್ಯಮ ಅಭ್ಯರ್ಥಿ | ಯೋಜನಾ ನಿರಾಶ್ರಿತ ಅಭ್ಯರ್ಥಿ | ಅಂಗವಿಕಲ ಅಭ್ಯರ್ಥಿ | ಒಟ್ಟು |
ಸಾಮಾನ್ಯ ಅಭ್ಯರ್ಥಿ | 01 | 02 | 03 | 01 | 01 | 01 | - | 09 |
ಪರಿಶಿಷ್ಟ ಜಾತಿ | 01 | - | - | 01 | - | - | - | 02 |
ಪರಿಶಿಷ್ಟ ಪಂಗಡ | - | - | 01 | - | - | - | - | 01 |
ಪ್ರವರ್ಗ-1 | - | - | 01 | - | - | - | - | 01 |
ಪ್ರವರ್ಗ-2A | 01 | - | - | 01 | - | - | 02 | |
ಪ್ರವರ್ಗ-2B | - | - | 01 | - | - | - | - | 01 |
ಪ್ರವರ್ಗ-3A | - | - | 01 | - | - | - | - | 01 |
ಪ್ರವರ್ಗ-3B | - | - | 01 | - | - | - | - | 01 |
ಒಟ್ಟು | 03 | 02 | 08 | 03 | 01 | 01 | - | 18 |
ಜವಾನ: 26 ಹುದ್ದೆಗಳು
ಹುದ್ದೆಗಳ ವರ್ಗೀಕರಣ:
ಮೀಸಲಾತಿ | ಮಹಿಳೆ | ಗ್ರಾಮೀಣ | ಮಾಜಿ ಸೈನಿಕ | ಇತರೆ | ಅಂಗವಿಕಲ ಅಭ್ಯರ್ಥಿ | ಒಟ್ಟು |
ಸಾಮಾನ್ಯ ಅಭ್ಯರ್ಥಿ | 04 | 03 | 02 | 03 | 1(*) | 13 |
ಪರಿಶಿಷ್ಟ ಜಾತಿ | 01 | - | 01 | 02 | - | 04 |
ಪರಿಶಿಷ್ಟ ಪಂಗಡ | 01 | - | - | - | - | 01 |
ಪ್ರವರ್ಗ- 1 | - | 01 | - | - | - | 01 |
ಪ್ರವರ್ಗ-2A | 01 | - | 01 | 02 | - | 04 |
ಪ್ರವರ್ಗ-2B | - | 01 | - | - | - | 01 |
ಪ್ರವರ್ಗ- 3A | 01 | - | - | - | - | 01 |
ಪ್ರವರ್ಗ- 3B | - | 01 | - | - | - | 01 |
ಒಟ್ಟು | 08 | 06 | 04 | 07 | 01 | 26 |
ವೇತನ:
ಹುದ್ದೆಗಳಿಗೆ ಆಯ್ಕೆಯಾದ ಶೀಘ್ರಲಿಪಿಗಾರರಿಗೆ 27,650/- ರಿಂದ 52,650/-ರೂ, ಆದೇಶ ಜಾರಿಕಾರಿಗೆ 19,950/- ರಿಂದ 37,900/-ರೂ, ಜವಾನ ಹುದ್ದೆಗಳಿಗೆ 17,000/- ರಿಂದ 28,950/-ರೂ ಮತ್ತು ಇತರೆ ಭತ್ಯೆಗಳನ್ನು ನೀಡಲಾಗುವುದು.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು ಹಾಗೂ ಗರಿಷ್ಠ ವಯಸ್ಸು ಸಾಮಾನ್ಯ ವರ್ಗದವರಿಗೆ 35 ವರ್ಷ, 2A,2B,3Bವರ್ಗದವರಿಗಿ 38 ವರ್ಷ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ರ 40 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವಯೋಮಿತಿ ಸಡಿಲಿಕೆ:
ಸರ್ಕಾರಿ ಸೇವೆಯಲ್ಲಿರುವವರಿಗೆ, ವಿಧವೆಯವರಿಗೆ, ಮಾಜಿ ಸೈನಿಕರಿಗೆ ಹಾಗೂ ಅಂಗವಿಕಲರಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.
ಆಯ್ಕೆ ವಿಧಾನ:
ಶೀಘ್ರಲಿಪಿಗಾರ ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಒಂದು ನಿಮಿಷಕ್ಕೆ 120ಶಬ್ದಗಳಂತೆ 05 ನಿಮಿಷಗಳ ಉಕ್ತಲೇಖನವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ನೀಡಲಾಗುವುದು.ಅದನ್ನು ಲಿಪ್ಯಂತರಗೊಳಿಸಿ, ಬೆರಳಚ್ಚು ಮಾಡಲು 45ನಿಮಿಷಗಳ ಕಾಲಾವಕಾಶ ನೀಡಲಾಗುವುದು. ಇದಕ್ಕೆ 100 ಗರಿಷ್ಟ ಅಂಕಗಳನ್ನು ನಿಗದಿಪಡಿಸಿದ್ದು, ಸಂದರ್ಶನಕ್ಕೆ ರ್ಹತೆ ಹೊಂದಲು ಕನಿಷ್ಟ 50 ಅಂಕಗಳನ್ನು ಪಡೆಯಬೇಕಾಗುವುದು.
ಅಭ್ಯರ್ಥಿಯು ಹುದ್ದೆಗೆ ನಿಗದಿಪಡಿಸಲಾದ ಕನಿಷ್ಟ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳು, ಹಾಗೂ ನೇಮಕಾತಿ ಪ್ರಾಧಿಕಾರವು ನಡೆಸುವ ಕನ್ನಡ ಮತ್ತು ಆಂಗ್ಲ ಶೀಘ್ರಲಿಪಿ ಹಾಗೂ ಬೆರಳಚ್ಚು ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಆದೇಶ ಜಾರಿಕಾರ ಹುದ್ದೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗಳಿಸಿರುವ ಗರಿಷ್ಟ ಅಂಕಗಳ ಅರ್ಹತೆಯ ಆಧಾರದ ಮೇಲೆ 1:25 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನದ ಪ್ರಕ್ರಿಯೆಗೆ ತೊಡಗಿಸಲಾಗುವುದು ಹಾಗೂ ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಜವಾನ ಹುದ್ದೆಗೆ 7ನೇ ತರಗತಿಯ ಪರೀಕ್ಷೆಯಲ್ಲಿ ಗಳಿಸಿರುವ ಗರಿಷ್ಟ ಅಂಕಗಳ ಅರ್ಹತೆಯ ಆಧಾರದ ಮೇಲೆ 1:10 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಲ್ಲಿ, ಮಹಿಳಾ ಅಭ್ಯರ್ಥಿಗಳು, ಮಾಜಿ ಸೈನಿಕ ಅಭ್ಯರ್ಥಿಗಳು, ಯೋಜನಾ ನಿರಾಶ್ರಿತ ಅಭ್ಯರ್ಥಿಗಳು, ಗ್ರಾಮೀಣ ಅಭ್ಯರ್ಥಿಗಳು ಹಾಗೂ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಮೀಸಲಾತಿಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಿರದೇ ಇದ್ದ ಪಕ್ಷದಲ್ಲಿ , ಆ ಹುದ್ದೆಗಳನ್ನು ಆಯಾ ಪಂಗಡಗಳ ಇತರೆ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ:
ಅಧಿಸೂಚನೆಯ ಪ್ರತಿಯನ್ನು ಹಾಗೂ ನಿಗದಿತ ಅರ್ಜಿ ನಮೂನೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಹಾವೇರಿಯ ಅಂತರ್ಜಾಲದ ವಿಳಾಸ http://ecourts.gov.in/haveri/recruitment ದಿಂದ ಪಡೆದು, ತಮಗೆ ಅನ್ವಯಿಸುವ ಎಲ್ಲಾ ಅಂಕಣಗಳನ್ನು ಭರ್ತಿ ಮಾಡುವುದು, ಅಭ್ಯರ್ಥಿಯು ತಮ್ಮ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಅರ್ಜಿ ನಮೂನೆಯಲ್ಲಿ ನಿಗದಿಪಡಿಸಿರುವ ಸ್ಥಳದಲ್ಲಿ ಅಂಟಿಸಿ, ಅದರ ಮೇಲೆ ಸಹಿ ಮಾಡುವುದು ಹಾಗೂ ಅರ್ಜಿ ನಮೂನೆಯ ಕೊನೆಯಲ್ಲಿ ಘೋಷಣೆಯ ನಂತರ ಸಹಿ ಮಾಡುವುದು. ಹುದ್ದೆಗೆ ಸಂಬಂಧಿಸಿದ ವಿದ್ಯಾರ್ಹತೆ, ವಯಸ್ಸು ಮತ್ತು ಕೋರಿರುವ ಮೀಸಲಾತಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರಗಳನ್ನು ಅಧಿಕೃತ ಅಧಿಕಾರಿಗಳಿಂದ ಪಡೆದು, ಅವುಗಳ ನೆರಳಚ್ಚು ಪ್ರತಿಗಳನ್ನು ಸ್ವಯಂ ದೃಢೀಕರಿಸಿ ಅರ್ಜಿಯೊಂದಿಗೆ ಲಗತ್ತಿಸಿ ಸದರಿ ಅರ್ಜಿಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಹಾವೇರಿ ಇವರಿಗೆ ದಿನಾಂಕ ೧೫-೨-೨೦೧೯ ಸಂಜೆ ೩:೪೫ ಘಂಟೆಯ ಒಳಗೆ ತಲುಪುವಂತೆ ಕಳುಹಿಸುವುದು. ಅರ್ಜಿಯನ್ನು ಕಳುಹಿಸುವ ಲಕೋಟೆಯ ಮೇಲೆ ಅಭ್ಯರ್ಥಿಯು ಹುದ್ದೆಯ ಹೆಸರನ್ನು ತಪ್ಪದೇ ನಮೂದಿಸುವುದು.
ಸ್ಟೆನೋಗ್ರಾಫರ್ ಹುದ್ದೆಗಳ ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಆದೇಶ ಜಾರಿ ಕಾರರ ಹುದ್ದೆಗಳ ಬಗೆಗೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಜವಾನ ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ