ಕಲಬುರಗಿ ಜಿಲ್ಲಾ ನ್ಯಾಯಾಲಯ ನೇಮಕಾತಿ : 8 ಶೀಘ್ರಲಿಪಿಗಾರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

By Kavya

ಕಲಬುರಗಿ ಜಿಲ್ಲಾ ಮತ್ತು ಸತ್ರ ನ್ಯಾಯಲಯ ಘಟಕದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ 8 ಹಿಂಬಾಕಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಮಾರ್ಚ್20,2019 ರೊಳಗಾಗಿ ಸಲ್ಲಿಸತಕ್ಕದ್ದು.

ಹುದ್ದೆಗಳ ವೇತನ, ವರ್ಗೀಕರಣ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿಯಲು ಮುಂದೆ ಓದಿ

ಶೀಘ್ರಲಿಪಿಗಾರರ ಹುದ್ದೆಗಳಿಗೆ ಅರ್ಜಿ ಆಹ್ವಾನ

CRITERIA DETAILS
Name Of The Posts ಶೀಘ್ರಲಿಪಿಗಾರರು (Stenographers)
Organisation ಜಿಲ್ಲಾ ನ್ಯಾಯಾಲಯ
Educational Qualification SSLC/ ತತ್ಸಮಾನ ವಿದ್ಯಾರ್ಹತೆ
Job Location ಕಲಬುರಗಿ
Salary Scale 27,650/- ರಿಂದ 52,650/-ರೂ
Application Start Date February 18, 2019
Application End Date March 20, 2019

ಶೈಕ್ಷಣಿಕ ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಎಸ್ .ಎಸ್ .ಎಲ್ .ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲೂ ಹಿರಿಯ ಶ್ರೇಣಿ ಬೆರಳಚ್ಚು ಮತ್ತು ಶೀಘ್ರಲಿಪಿ ಹಾಗೂ ತತ್ಸಮಾನ ಪರೀಕ್ಷೆಯಲ್ಲಿ ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕಡೆಯ ದಿನಾಂಕದೊಳಗೆ ಉತ್ತೀರ್ಣರಾಗಿರಬೇಕು.

ಹುದ್ದೆಗಳ ವರ್ಗೀಕರಣ:

ವರ್ಗೀಕರಣಇತರೆ ಮಹಿಳೆ ಗ್ರಾಮೀಣ ಮಾಜಿ ಸೈನಿಕರು ಕನ್ನಡ ಮಾಧ್ಯಮ ಅಂಗವಿಕಲರು ಒಟ್ಟು
ಪರಿಶಿಷ್ಟ ಜಾತಿ 1# 1
ಪ್ರವರ್ಗ-1 1* 1
ಪ್ರವರ್ಗ-2A 1* 1
ಪ್ರವರ್ಗ-2B 1* 1
ಸಾಮಾನ್ಯ ವರ್ಗ 1* 1* 1* 1* 4
ಒಟ್ಟು 2* 2*1* 1* 1* 1* 8

ವಿಶೇ‍ಷ ಸೂಚನೆ: (*) ಹಿಂಬಾಕಿ ಹುದ್ದೆಗಳು
(#) ಅಂಗವಿಕಲರಿಗೆ ಮೀಸಲಿರಿಸಿದ ಹುದ್ದೆಯು ದೃಷ್ಟಿ ಮಾಂದ್ಯವುಳ್ಳ ಅಭ್ಯರ್ಥಿಗೆ ಮೀಸಲಾಗಿದೆ ಹಾಗೂ ಇದು ಹಿಂಬಾಕಿ ಹುದ್ದೆಯಾಗಿದೆ.

ವಯೋಮಿತಿ:

* ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಟ -18 ವ‍ರ್ಷ ವಯಸ್ಸನ್ನು ಪೂರೈಸಿರತಕ್ಕದ್ದು,

ಗರಿಷ್ಠ ವಯೋಮಿತಿ:

ಸಾಮಾನ್ಯ ವರ್ಗ:35ವರ್ಷಗಳು
2A, 2B, 3A ಮತ್ತು 3B : 38ವರ್ಷಗಳು
ಪರಿಶಿಷ್ಟ ಜಾತಿ: ಪರಿಶಿಷ್ಟ ಪಂಗಡ: ಪ್ರವರ್ಗ -1: 40ವರ್ಷಗಳು

ಮಾಜಿ ಸೈನಿಕರಿಗೆ ಗರಿಷ್ಟ ವಯೋಮಿತಿ ಅವರ ಸಶಸ್ತ್ರ ದಳಗಳಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿರುವರೋ ಅಷ್ಟು ವರ್ಷಗಳಿಗೆ ಮೂರು ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳ ಸಡಿಲಿಕೆ ಮತ್ತು ವಿಧವೆಯವರಿಗೆ ಮತ್ತು ಅಂಗವಿಕಲರಿಗೆ 1 0ವರ್ಷಗಳ ಸಡಿಲಿಕೆ.

ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳಿಗೆ ಎಷ್ಟು ವ‍ರ್ಷ ಸೇವೆ ಸಲ್ಲಿಸಿರುವರೋ ಅಷ್ಟು ವರ್ಷಗಳು ಅಥವಾ 10 ವರ್ಷಗಳು, ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳ ಸಡಿಲಿಕೆ.

ವೇತನದ ವಿವರ:

ಶೀಘ್ರಲಿಪಿಗಾರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 27,650/- ರಿಂದ 52,650/-ರೂ ವೇತನವನ್ನು ನೀಡಲಾಗುವುದು.

ಆಯ್ಕೆಯ ವಿಧಾನ:

ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಉಕ್ತಲೇಖನವನ್ನು ಕೊಟ್ಟು ಕಂಪ್ಯೂಟರ್ ನಲ್ಲಿ ಬೆರಳಚ್ಚು ಮಾಡಿಸಿ ಅರ್ಹತಾ ಪರೀಕ್ಷೆ ನಡೆಸಲಾಗುವುದು.

ಅರ್ಜಿ ಸಲ್ಲಿಸುವ ವಿಳಾಸ:

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಕಲಬುರಗಿ- 585102.ಅರ್ಜಿ ನಮೂನೆಯ ಬೆರಳಚ್ಚು ಪ್ರತಿ / ಗಣಕೀಕೃತ ಪ್ರತಿಯಲ್ಲಿಯೇ ಅಭ್ಯರ್ಥಿಗಳು ತಮ್ಮ ಸ್ವಂತ ಕೈಬರಹದಿಂದ ಎಲ್ಲಾ ಅಂಕಣಗಳನ್ನು ಜಾಗರೂಕತೆಯಿಂದ ಭರ್ತಿ ಮಾಡಿ ದಿನಾಂಕ 20.3.2019 ರ ಸಂಜೆ 5:00 ಗಂಟೆಯೊಳಗೆ ಈ ಕಚೇರಿಗೆ ಸಲ್ಲಿಸತಕ್ಕದ್ದು.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಸಂಬಂಧಿತ ಹುದ್ದೆಯ ಲಕೋಟೆಯ ಮೇಲೆ ಕಡ್ಡಾಯವಾಗಿ ತಾವು ಸಲ್ಲಿಸಲಿಚ್ಛಿಸುವ ಹುದ್ದೆಯ ಹೆಸರನ್ನು ದಪ್ಪ ಅಕ್ಷರಗಳಲ್ಲಿ ತಪ್ಪದೇ ನಮೂದಿಸಬೇಕು.

ಈ ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ನ್ಯಾಯಾಲಯದ ವೆಬ್ ಸೈಟ್ http://karnatakajudiciary.kar.nic.in/districtrecruitment.asp ಅಥವಾ https://districts.ecourts.gov.in/india/karnataka/kalaburagi/recruit ನಲ್ಲಿ ವೀಕ್ಷಿಸಿ
ಈ ಹುದ್ದೆಗಳ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
District Court of Kalaburagi 2019 has invited application for the post of 8 stenographers. Interested candidates can apply for this job.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+