ಬಾಗಲಕೋಟೆ ಜಿಲ್ಲಾ ನ್ಯಾಯಾಲಯ ಬೆರಳಚ್ಚುಗಾರರು, ಬೆರಳಚ್ಚು ನಕಲುಗಾರರು, ಜವಾನ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾ

ಬಾಗಲಕೋಟೆ ಜಿಲ್ಲೆಯ ಅಧೀನ ನ್ಯಾಯಾಲಯಗಳಲ್ಲಿ ಪ್ರಸ್ತುತ ಖಾಲಿ ಇರುವ "ಬೆರಳಚ್ಚುಗಾರರ, ಬೆರಳಚ್ಚು ನಕಲುಗಾರರ ಮತ್ತು ಜವಾನ" ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಬಾಗಲಕೋಟೆ ಜಿಲ್ಲಾ ನ್ಯಾಯಾಲಯದ ವೆಬ್ ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸತಕ್ಕದ್ದು.

ಬಾಗಲಕೋಟೆ ಜಿಲ್ಲಾ ನ್ಯಾಯಾಲಯದ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ

ಕನಿಷ್ಟ ಶೈಕ್ಷಣಿಕ ವಿದ್ಯಾರ್ಹತೆ:

ಕ್ರ.ಸಂಖ್ಯೆಹುದ್ದೆಕನಿಷ್ಟ ಶೈಕ್ಷಣಿಕ ವಿದ್ಯಾರ್ಹತೆ
1ಬೆರಳಚ್ಚುಗಾರ1 ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ.

2 ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆಸಲಾದ ಹಿರಿಯ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ.

2ಬೆರಳಚ್ಚು ನಕಲುಗಾರ1 ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ.

2 ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆಸಲಾದ ಕಿರಿಯ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ.

3ಜವಾನ1 ಏಳನೇ ತರಗತಿಯಲ್ಲಿ ಉತ್ತೀರ್ಣತೆ.

2 ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.

ಹುದ್ದೆಗಳ ವಗೀಕರಣ:

ಬೆರಳಚ್ಚುಗಾರರ ಹುದ್ದೆಗಳು: 12

ಮೀಸಲಾತಿಇತರೆ ಗ್ರಾಮೀಣಮಹಿಳೆಅಂಗವಿಕಲ ಕನ್ನಡ ಮಾಧ್ಯಮಯೋಜನಾ ನಿರಾಶ್ರಿತ ಒಟ್ಟು
ಸಾಮಾನ್ಯ ಅಭ್ಯರ್ಥಿ-22-116
ಪರಿಶಿಷ್ಟ ಜಾತಿ1-1---2
ಪರಿಶಿಷ್ಟ ಪಂಗಡ-1-
---1
ಪ್ರವರ್ಗ-2A1-----1
ಪ್ರವರ್ಗ-3A-1----1
ಪ್ರವರ್ಗ-3B-1-
---1
ಒಟ್ಟು-53- 1112

ಬೆರಳಚ್ಚು- ನಕಲುಗಾರರ ಹುದ್ದೆಗಳು -03

ಮೀಸಲಾತಿಇತರೆಗ್ರಾಮೀಣಮಹಿಳೆಅಂಗವಿಕಲಕನ್ನಡ ಮಾಧ್ಯಮಯೋಜನಾ ನಿರಾಶ್ರಿತಒಟ್ಟು
ಸಾಮಾನ್ಯ ಅಭ್ಯರ್ಥಿ1 - -1* - -2
ಪ್ರವರ್ಗ-3B--1---1
ಒಟ್ಟು1-11--3

* ಶ್ರವಣದೋಷವುಳ್ಳವರಿಗೆ ಮಾತ್ರ

ಜವಾನ ಹುದ್ದೆಗಳು: 13

ಮೀಸಲಾತಿಇತರೆ ಗ್ರಾಮೀಣಮಹಿಳೆಅಂಗವಿಕಲಮಾಜಿ ಸೈನಿಕ ಯೋಜನಾ ನಿರಾಶ್ರಿತ ಒಟ್ಟು
ಸಾಮಾನ್ಯ ಅಭ್ಯರ್ಥಿ2111*117
ಪರಿಶಿಷ್ಟ ಜಾತಿ-11---2
ಪ್ರವರ್ಗ-1---1--1
ಪ್ರವರ್ಗ-2A--1---1
ಪ್ರವರ್ಗ-3A-1----1
ಪ್ರವರ್ಗ-3B---1--1
ಒಟ್ಟು23331113

* ಕುಷ್ಟರೋಗದಿಂದ ಗುಣಮುಖರಾದ ಅಂಗವಿಕಲರಿಗೆ/ಬುದ್ದಿಮಾಂಧ್ಯತೆ/ಮಾನಸಿಕ ಅಸ್ವಸ್ಥತೆ ಹೊಂದಿದವರಿಗೆ ಮಾತ್ರ

ವೇತನದ ವಿವರ:

ಈ ಹುದ್ದೆಗಳಿಗೆ ಆಯ್ಜೆಯಾದ ಬೆರಳಚ್ಚುಗಾರರು ಹುದ್ದೆಗಳಿಗೆ ವೇತನ ಶ್ರೇಣಿ= 21,400/- ರಿಂದ 42,000/- ರೂ ಇರುತ್ತದೆ.

ಬೆರಳಚ್ಚು ನಕಲುಗಾರರು ಹುದ್ದೆಗಳಿಗೆ ವೇತನ ಶ್ರೇಣಿ- 21,400/-- ರಿಂದ 42,0000/-ರೂ ಇರುತ್ತದೆ. ಜವಾನ ಹುದ್ದೆಗಳಿಗೆ

ವೇತನ ಶ್ರೇಣಿ- 17,000/- ರಿಂದ 28,950/- ರೂ ಇರುತ್ತದೆ.

ವಯೋಮಿತಿ:

ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಈ ಕೆಳಕಂಡ ವಯೋಮಿತಿಯನ್ನು ಹೊಂದಿರತಕ್ಕದ್ದು.

ಕ್ರ.ಸಂಖ್ಯೆ.ಅಭ್ಯರ್ಥಿಯ ಪ್ರವರ್ಗ ಕನಿಷ್ಠ ವಯೋಮಿತಿಗರಿಷ್ಠ ವಯೋಮಿತಿ
1ಸಾಮಾನ್ಯ ವರ್ಗ18 ವರ್ಷಗಳು35 ವರ್ಷಗಳು
2ಪ್ರವರ್ಗ18 ವರ್ಷಗಳು38 ವರ್ಷಗಳು
3ಪರಿಶಿಷ್ಟ ಜಾತಿ: ಪರಿಶಿಷ್ಟ ಪಂಗಡ: ಪ್ರವರ್ಗ-118 ವರ್ಷಗಳು40 ವರ್ಷಗಳು

ಸರಕಾರಿ ಸೇವೆಯಲ್ಲಿರುವವರಿಗೆ, ವಿಧವೆಯರಿಗೆ, ಮಾಜಿ ಸೈನಿಕರಿಗೆ ಮತ್ತು ಅಂಗವಿಕಲರಿಗೆ ನಿಯಮಗಳ ಅನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

ಆಯ್ಕೆಯ ವಿಧಾನ:

ಬೆರಳಚ್ಚುಗಾರರ ಹುದ್ದೆಗಳಿಗೆ ಬೆರಳಚ್ಚು ಮಾಡಲು ಉಕ್ತ ಲೇಖನವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ನೀಡಲಾಗುವುದು. ಇದಕ್ಕೆ 100 ಗರಿಷ್ಟ ಅಂಕಗಳನ್ನು ನಿಗದಿಪಡಿಸಿದ್ದು, ಅರ್ಹತೆ ಹೊಂದಲು ಕನಿಷ್ಟ 50 ಅಂಕಗಳನ್ನು ಪಡೆಯಬೇಕು. ಅಭ್ಯರ್ಥಿಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ, ಹಿರಿಯ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪರೀಕ್ಷೆಗಳಲ್ಲಿ ಹಾಗೂ ಈ ಪ್ರಾಧಿಕಾರ ನಡೆಸಲಾದ ಬೆರಳಚ್ಚು ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಸರಾಸರಿ ಆಧಾರದ ಮೇಲೆ ಒಂದು ಹುದ್ದೆಗೆ 1:5 ಅನುಪಾತದಂತೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಅಭ್ಯರ್ಥಿಯು ಹುದ್ದೆಗೆ ನಿಗದಿಪಡಿಸಲಾದ ಕನಿಷ್ಟ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳು, ಈ ಪ್ರಾಧಿಕಾರವು ನಡೆಸಲಾದ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪರೀಕ್ಷೆಯಲ್ಲಿ ಪಡೆದ ಅಂಕಗಳು ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳ ಸರಾಸರಿ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗುವುದು.

ಬೆರಳಚ್ಚು ನಕಲುಗಾರರ ಹುದ್ದೆಗಳಿಗೆ ಬೆರಳಚ್ಚು ಮಾಡಲು ಉಕ್ತ ಲೇಖನವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ನೀಡಲಾಗುವುದು. ಇದಕ್ಕೆ 100 ಗರಿಷ್ಟ ಅಂಕಗಳನ್ನು ನಿಗದಿಪಡಿಸಿದ್ದು, ಅರ್ಹತೆ ಹೊಂದಲು ಕನಿಷ್ಟ 50 ಅಂಕಗಳನ್ನು ಪಡೆಯಬೇಕು. ಅಭ್ಯರ್ಥಿಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ, ಕಿರಿಯ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪರೀಕ್ಷೆಗಳಲ್ಲಿ ಹಾಗೂ ಈ ಪ್ರಾಧಿಕಾರ ನಡೆಸಲಾದ ಬೆರಳಚ್ಚು ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಸರಾಸರಿ ಆಧಾರದ ಮೇಲೆ ಒಂದು ಹುದ್ದೆಗೆ 1:5 ಅನುಪಾತದಂತೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಅಭ್ಯರ್ಥಿಯು ಹುದ್ದೆಗೆ ನಿಗದಿಪಡಿಸಲಾದ ಕನಿಷ್ಟ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳು ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳ ಸರಾಸರಿ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗುವುದು.

ಜವಾನ ಹುದ್ದೆಗಳಿಗೆ ಅಭ್ಯರ್ಥಿಗಳು 7ನೇ ತರಗತಿಯಲ್ಲಿ ಪಡೆದ ಸರಾಸರಿ ಅಂಕಗಳ ಆಧಾರದ ಮೇಲೆ ಒಂದು ಹುದ್ದೆಗೆ 1:10 ಅನುಪಾತದಂತೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ

ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು 7 ನೇ ತರಗತಿಯಲ್ಲಿ ಪಡೆದ ಅಂಕಗಳನ್ನು ಸಂದರ್ಶನಕ್ಕೆ ಕರೆಯಲು ಮಾತ್ರ ಪರಿಗಣಿಸಲಾಗುವುದು.

ಆಯ್ಕೆಯಾದ ಅಭ್ಯರ್ಥಿಗಳು ನೇಮಕಾತಿ ನಿಯಮಗಳಂತೆ ಎರಡು ವರ್ಷಗಳ ಕಾಲ ಪರಿವೀಕ್ಷಣಾ ಅವಧಿಯನ್ನು ಪೂರೈಸಬೇಕಾಗುವುದು.

ನಿಗದಿಪಡಿಸಿದ ಅರ್ಜಿ ಶುಲ್ಕ:

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆರೂ.300/-
ಪವ್ರರ್ಗ2A , 3A ಮತ್ತು 3B ಸೇರಿದ ಅಭ್ಯರ್ಥಿಗಳಿಗೆರೂ.150/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆಶುಲ್ಕ ವಿನಾಯಿತಿ ಇರುತ್ತದೆ.

ನಿಗದಿತ ಶುಲ್ಕವನ್ನು ನ್ಯಾಯಾಲಯದ ಜಾಲತಾಣ https://districts.ecourts.gov.in/bagalkot ರಲ್ಲಿ ನೀಡಲಾದ ಲಿಂಕ್ ಮೂಲಕ ಭಾರತೀಯ ಸ್ಟೇಟ್ ಬ್ಯಾಂಕ್ ನ ಸ್ಟೇಟ್ ಬ್ಯಾಂಕ್ ಕಲೆಕ್ಟ್ ಮೂಲಕ ಆನ್ ಲೈನ್ ಪೇಮೆಂಟ್ ಅನ್ನು ನೆಟ್ ಬ್ಯಾಂಕಿಂಗ್/ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್/ಚಲನ್ ಡೌನ್ ಲೋಡ್ ಸೌಲಭ್ಯದ ಮೂಲಕ ಪಾವತಿಸತಕ್ಕದ್ದು. ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿ ಮಾಡಲು ಇಚ್ಚಿಸದ ಅಭ್ಯರ್ಥಿಗಳು ಚಲನ್ ಪ್ರತಿಯನ್ನು ಅಧಿಕೃತ ಜಾಲತಾಣದಿಂದ ಡೌನ್ ಲೋಡ್ ಮಾಡಿಕೊಂಡು ಅದರ ಮುದ್ರಿತ ಪ್ರತಿಯನ್ನು ಪಡೆದುಕೊಂಡು ಭಾರತೀಯ ಸ್ಟೇಟ್ ಬ್ಯಾಂಕ್ ನ ಯಾವುದೇ ಶಾಖೆಗೆ ಹಾಜರುಪಡಿಸಿ ಶುಲ್ಕವನ್ನು ಪಾವತಿಸತಕ್ಕದ್ದು. ಇದನ್ನು ಹೊರತುಪಡಿಸಿ ಯಾವುದೇ ಡಿಮ್ಯಾಂಡ್ ಡ್ರಾಫ್ಟ್ /ಪೋಸ್ಟಲ್ ಆರ್ಡರ್ / ಮನಿ ಆರ್ಡರ್ ಇವುಗಳನ್ನು ಸ್ವೀಕರಿಸಲಾಗುವುದಿಲ್ಲ, ಶುಲ್ಕ ಪಾವತಿಸದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅಭ್ಯರ್ಥಿಗಳು ನಿಗದಿಪಡಿಸಿದ ಶುಲ್ಕವನ್ನು ಚಲನ್ ಮುಖಾಂತರ ಪಾವತಿಸಲು ದಿನಾಂಕ:14.2.2019ಕೊನೆಯ ದಿನವಾಗಿದ್ದು, ನಿಗದಿತ ಅವಧಿಯೊಳಗಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ನ ಯಾವುದೇ ಶಾಖೆಯ ವ್ಯವಹಾರದ ವೇಳೆಯಲ್ಲಿ ಪಾವತಿಸತಕ್ಕದ್ದು.

ಈ ಹುದ್ದೆಗಳ ಬಗೆಗೆ ಇನ್ನಷ್ಟು ಸೂಚನೆಯನ್ನು ಓದಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
District court of bagalkot has invited application for the post of Typist, Copy-typist and Soldier, Interested candidates can apply through online.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X