ಡಿಆರ್‌ಡಿಓ ನೇಮಕಾತಿ ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ನೇಮಕಾತಿ ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳ ಬಗೆಗೆ ತಿಳಿಯಲು ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು.

ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅಗತ್ಯ ಮಾಹಿತಿಯನ್ನು ಜೂನ್ 7 ರೊಳಗೆ ಮೇಲ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮಾತ್ರ ಜೂನ್ 25 ರಂದು ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹುದ್ದೆಗಳಿಗೆ ನೀಡಲಾಗುವ ವೇತನ ಮತ್ತು ಸಂದರ್ಶನ ನಡೆಯುವ ಸ್ಥಳದ ಬಗೆಗೆ ತಿಳಿಯಲು ಮುಂದೆ ಓದಿ.

 ಡಿಆರ್‌ಡಿಓ ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ

CRITERIA DETAILS
Name Of The Posts ಗ್ರಾಜುಯೇಟ್ ಅಪ್ರೆಂಟಿಸ್
Organisation ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ)
Educational Qualification ಬಿ.ಇ / ಬಿ.ಟೆಕ್
Job Location ಬೆಂಗಳೂರು (ಕರ್ನಾಟಕ)
Salary Scale ತಿಂಗಳಿಗೆ 4,984/-ರೂ ಸ್ಟೈಫೆಂಡ್
Application Start Date May 8, 2019
Application End Date June 7, 2019

ಶೈಕ್ಷಣಿಕ ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಬಿ.ಇ / ಬಿ.ಟೆಕ್ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:

ಸಂಸ್ಥೆಯ ನಿಯಮಾನುಸಾರ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನದ ವಿವರ:

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 4,984/-ರೂ ಸ್ಟೈಫೆಂಡ್ ನೀಡಲಾಗುವುದು

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು

ಅರ್ಜಿ ಶುಲ್ಕ:

ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ https://www.drdo.gov.in/drdo/English/index.jsp?pg=homebody.jsp ನಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಅಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ [email protected] ವಿಳಾಸಕ್ಕೆ ಜೂನ್ 7,2019 ರೊಳಗೆ ಮೇಲ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮಾತ್ರ ಜೂನ್ 25 ರಂದು ನಡೆಯುವ ವಾಕ್‌-ಇನ್ ಇಂಟರ್ವ್ಯೂ ನಲ್ಲಿ ಪಾಲ್ಗೊಳ್ಳಲು ಅರ್ಹರು.

ಸಂದರ್ಶನ ನಡೆಯುವ ದಿನಾಂಕ: ಜೂನ್ 25,2019 ರಂದು

ಸಂದರ್ಶನ ನಡೆಯುವ ಸ್ಥಳ:

ಡಿಇಬಿಇಎಲ್‌ ಕಾಂಪೌಂಡ್,
ಡಿಆರ್‌ಡಿಓ, ಎಡಿಇ ಕ್ಯಾಂಪಸ್,
ಸಿವಿ ರಾಮನ್ ನಗರ,
ಸುರಂಜನ್ ದಾಸ್ ರೋಡ್,
ಬೆಂಗಳೂರು-560093

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
DRDO Recruitment 2019-20:Apply for 10 Graduate Apprentice Vacancies. Defence Research & Development Organization (DRDO) invited Online applications from eligible and interested candidates to fill up Graduate Apprentice Posts through DRDO official notification 2019. Job seekers who are looking for a career in Bangalore – Karnataka Government can make use of this opportunity. Apply online for these DRDO Graduate Apprentice jobs before 07th June 2019. Official website of DRDO is www.drdo.gov.in Recruitment 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X