ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ನೇಮಕಾತಿ ಪ್ರಕಟಣೆ ಹೊರಡಿಸಿದೆ. ಜ್ಯೂನಿಯರ್ ಟೆಕ್ನಿಕಲ್ ಆಫೀಸರ್ ಮತ್ತು ಜ್ಯೂನಿಯರ್ ಕಂಸಲ್ಟಂಟ್ ಫೀಲ್ಡ್ ಆಫೀಸರ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು, ಅರ್ಹತೆ, ವೇತನ ಶ್ರೇಣಿ, ಹೇಗೆ ಅರ್ಜಿ ಸಲ್ಲಿಕೆ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನೇಮಕಗೊಂಡ ಅಭ್ಯರ್ಥಿಗಳು ತಿಂಗಳಿಗೆ 19,188 ರೂ ಸಂಪಾದಿಸಬಹುದು. ನವಂಬರ್ 6 ರಿಂದ 10 ರವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಿ ಹುದ್ದೆಯನ್ನ ತಮ್ಮದಾಗಿಸಿಕೊಳ್ಳಬಹುದು. ಇನ್ನು 1 ವರ್ಷದ ಗುತ್ತಿಗೆ ಆಧಾರದಲ್ಲಿ ಅಭ್ಯರ್ಥಿಗಳನ್ನ ನೇಮಕಮಾಡಿಕೊಳ್ಳಲಾಗುತ್ತದೆ.
ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
CRITERIA DETAILS Name Of The Posts ಜ್ಯೂನಿಯರ್ ಟೆಕ್ನಿಕಲ್ ಆಫೀಸರ್ ಮತ್ತು ಜ್ಯೂನಿಯರ್ ಕಂಸಲ್ಟಂಟ್ ಫೀಲ್ಡ್ ಆಫೀಸರ್ Organisation ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ Educational Qualification ಜ್ಯೂನಿಯರ್ ಟೆಕ್ನಿಕಲ್ ಆಫೀಸರ್ ಹುದ್ದೆಗೆ ಇಂಜಿನೀಯರ್ ಪದವಿ ಮತ್ತು ಜ್ಯೂನಿಯರ್ ಕಂಸಲ್ಟಂಟ್ ಫೀಲ್ಡ್ ಆಫೀಸರ್ ಹುದ್ದೆಗೆ ಐಟಿಐ Experience 2 ವರ್ಷ Skills Required ಟೆಕ್ನಿಕಲ್ ಸ್ಕಿಲ್ Job Location ನವದೆಹಲಿ, ಬೆಂಗಳೂರು, ಮುಂಬಯಿ, ಕೊಲ್ಕತ್ತಾ Industry ಇಂಜಿನೀಯರಿಂಗ್ Application Start Date November 1, 2018 Application End Date November 10, 2018
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ಸ್ಟೆಪ್ 1
ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2
ಹೋಮ್‌ಪೇಜ್‌ನಲ್ಲಿ ಇರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3
ವಾಕ್ ಇಂಟರ್ವ್ಯೂ ಸೆಲೆಕ್ಟ್ ಮಾಡಿ
ಸ್ಟೆಪ್ 4
ADVT for Written Test / Walk-in-interview ಅಡಿಯಲ್ಲಿ ಬರುವ select View Application ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5
ಅರ್ಜಿಯು ತೆರೆದುಕೊಳ್ಳುತ್ತದೆ. ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
ಸ್ಟೆಪ್ 6
ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ ಹಾಗೂ ಸಂದರ್ಶನ ವೇಳೆ ಸಂಬಂಧಪಟ್ಟ ಇನ್ನಿತ್ತರ ದಾಖಲೆಗಳ ಜತೆ ಪ್ರಸ್ತುತಪಡಿಸಿ
ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಡೀಟೆಲ್ಸ್ ಗೆ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











