ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (ಇಐಎಲ್) ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು.
ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಏಪ್ರಿಲ್ 19,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

ಶೈಕ್ಷಣಿಕ ವಿದ್ಯಾರ್ಹತೆ:
ಇಐಎಲ್ ನೇಮಕಾತಿಯ ಮ್ಯಾನೇಜರ್ ಹುದ್ದೆಗಳಿಗೆ ಬಿಇ/ಬಿ.ಟೆಕ್ /ಎಂ.ಟೆಕ್ ನಲ್ಲಿ ಶೇ.60%ರಷ್ಟು ಅಂಕಗಳೊಂದಿಗೆ ಮಾನ್ಯತೆ ಪಡೆದ ಸಂಸ್ಥೆ/ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವಯೋಮಿತಿ:
ಇಐಎಲ್ ನೇಮಕಾತಿ 2020ರ ನಿಯಮಾನುಸಾರ 36 ರಿಂದ ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಓಬಿಸಿ-ಎನ್‌ಸಿಎಲ್ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಸರ್ಕಾರದ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
ವೇತನದ ವಿವರ:
ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 80,000/- ರಿಂದ 2,20,000/-ರೂ ವೇತನವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿದಾರರ ಕಿರುಪಟ್ಟಿಯನ್ನು ಮಾಡಿ ನೇರ ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಅರ್ಜಿದಾರರು ಅರ್ಜಿ ಶುಲ್ಕದ ಬಗೆಗೆ ತಿಳಿಯಲು ಅಧಿಸೂಚನೆಯನ್ನು ಓದತಕ್ಕದ್ದು.
ಅರ್ಜಿ ಸಲ್ಲಿಸುವುದು ಹೇಗೆ:
ಮ್ಯಾನೇಜರ್ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಆನ್ಲೈನ್ನಲ್ಲಿ ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (ಇಐಎಲ್) ನ ಅಧಿಕೃತ ವೆಬ್ಸೈಟ್ https://recruitment.eil.co.in/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಏಪ್ರಿಲ್ 19,2020ರ ರಾತ್ರಿ 11:59ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











