Exim Bank: 22 ವ್ಯವಸ್ಥಾಪಕ ಮತ್ತು ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ... ಅರ್ಜಿ ಸಲ್ಲಿಕೆಗೆ ಫೆ.22 ಕೊನೆಯ ದಿನ

ಎಕ್ಸ್‌ಪೋರ್ಟ್ ಇಂಪೋರ್ಟ್ (ಇಎಕ್ಸ್ಐಎಂ) ಬ್ಯಾಂಕ್ ಆಫ್ ಇಂಡಿಯಾ ಒಟ್ಟು 22 ವ್ಯವಸ್ಥಾಪಕ ಮತ್ತು ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು.

 

ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಫೆಬ್ರವರಿ 22,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

ಎಕ್ಸಿಂ ಬ್ಯಾಂಕ್‌ ನೇಮಕಾತಿ..ಫೆ.22ರೊಳಗೆ ಅರ್ಜಿ ಹಾಕಿ

ಎಕ್ಸ್‌ಪೋರ್ಟ್ ಇಂಪೋರ್ಟ್ (ಇಎಕ್ಸ್ಐಎಂ) ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ವ್ಯವಸ್ಥಾಪಕ ಮತ್ತು ಅಧಿಕಾರಿ
Organisation ಎಕ್ಸ್‌ಪೋರ್ಟ್ ಇಂಪೋರ್ಟ್ (ಇಎಕ್ಸ್ಐಎಂ) ಬ್ಯಾಂಕ್ ಆಫ್ ಇಂಡಿಯಾ
Educational Qualification ಬಿಇ/ಬಿ.ಟೆಕ್/ಎಂ.ಟೆಕ್,ಕಾನೂನು ಪದವಿ,ಸ್ನಾತಕೋತ್ತರ ಪದವಿ,ಪದವಿ
Job Location ಭಾರತದೆಲ್ಲೆಡೆ
Salary Scale ಮುಖ್ಯ ವ್ಯವಸ್ಥಾಪಕ -ತಿಂಗಳಿಗೆ 42,020/-ರಿಂದ 51,490/-ರೂ,ವ್ಯವಸ್ಥಾಪಕ- ತಿಂಗಳಿಗೆ 31,705/-ರಿಂದ 45,950/-ರೂ,ಉಪ ವ್ಯವಸ್ಥಾಪಕ ಮತ್ತು ಆಡಳಿತಾಧಿಕಾರಿ -ತಿಂಗಳಿಗೆ 23,700/- ರಿಂದ 42,020/-ರೂ,ಅಧಿಕಾರಿಗಳು (ಕಾಂಟ್ರಾಕ್ಟ್ ಮೂಲಕ)- ಐಟಿ- ವರ್ಷಕ್ಕೆ 14,00,000/-ರೂ

ಹುದ್ದೆಗಳ ವಿವರ:

ಮುಖ್ಯ ವ್ಯವಸ್ಥಾಪಕ -2 ಹುದ್ದೆಗಳು
ವ್ಯವಸ್ಥಾಪಕ- 8 ಹುದ್ದೆಗಳು
ಉಪ ವ್ಯವಸ್ಥಾಪಕ - 5 ಹುದ್ದೆಗಳು
ಆಡಳಿತಾಧಿಕಾರಿಗಳು- 4 ಹುದ್ದೆಗಳು
ಅಧಿಕಾರಿಗಳು (ಕಾಂಟ್ರಾಕ್ಟ್ ಮೂಲಕ)- ಐಟಿ- 3 ಹುದ್ದೆಗಳು
ಒಟ್ಟು- 22 ಹುದ್ದೆಗಳು

ವಿದ್ಯಾರ್ಹತೆ:

ವ್ಯವಸ್ಥಾಪಕ ಮತ್ತು ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ / ಬೋರ್ಡ್‌/ ವಿಶ್ವವಿದ್ಯಾಲಯದಿಂದ ಬಿಇ / ಬಿ.ಟೆಕ್/ಎಂ.ಟೆಕ್,ಕಾನೂನು ಪದವಿ, ಸ್ನಾತಕೋತ್ತರ ಪದವಿ ಮತ್ತು ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

 

ವಯೋಮಿತಿ:

ಫೆಬ್ರವರಿ 1,2020ರ ಅನ್ವಯ ಕನಿಷ್ಟ 27 ರಿಂದ ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ. ಅಧಿಸೂಚನೆಯಲ್ಲಿ ತಿಳಿಸಿರುವಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ವೇತನದ ವಿವರ:

ಮುಖ್ಯ ವ್ಯವಸ್ಥಾಪಕ ಹುದ್ದೆಗಳಿಗೆ ತಿಂಗಳಿಗೆ 42,020/-ರಿಂದ 51,490/-ರೂ,ವ್ಯವಸ್ಥಾಪಕ ಹುದ್ದೆಗಳಿಗೆ ತಿಂಗಳಿಗೆ 31,705/-ರಿಂದ 45,950/-ರೂ, ಉಪ ವ್ಯವಸ್ಥಾಪಕ ಮತ್ತು ಆಡಳಿತಾಧಿಕಾರಿ ಹುದ್ದೆಗಳಿಗೆ ತಿಂಗಳಿಗೆ 23,700/- ರಿಂದ 42,020/-ರೂ ಮತ್ತು ಅಧಿಕಾರಿಗಳು (ಕಾಂಟ್ರಾಕ್ಟ್ ಮೂಲಕ)- ಐಟಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವರ್ಷಕ್ಕೆ 14,00,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, ಸಾಮಾನ್ಯ / ಓಬಿಸಿ ಅಥವಾ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು 600/-ರೂ ಮತ್ತು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಅಂಗವಿಕಲ ಅಭ್ಯರ್ಥಿಗಳು 100/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ:

ಆಸಕ್ತ ಅರ್ಹ ಅಭ್ಯರ್ಥಿಗಳು ಎಕ್ಸಿಂ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ https://www.eximbankindia.in/ ಗೆ ಹೋಗಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಫೆಬ್ರವರಿ 22,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Exim bank recruitment 2020 notification has been released on official website for the recruitment of 22 manager and officer posts. Interested candidates can apply through online before 22nd February 2020.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X