ಎಫ್ ಸಿಐ 2019 ಜ್ಯೂನಿಯರ್ ಇಂಜಿನಿಯರ್ ಮತ್ತು ಅಸಿಸ್ಟೆಂಟ್ ಗ್ರೇಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಆಹಾರ ನಿಗಮವು (ಎಫ್ ಸಿಐ) ಆಹಾರ ಧಾನ್ಯ ಪೂರೈಕೆ ನಿರ್ವಹಣೆಯೊಂದಿಗೆ ವ್ಯವಹರಿಸುವ ಒಂದು ಬೃಹತ್ ಸಾರ್ವಜನಿಕ ವಲಯದ ಉದ್ಯಮವಾಗಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯದಡಿ ಬರುವ ಆಹಾರ ಮತ್ತು ಸಾರ್ವಜನಿಕ ವಿತರಣೆ (ಆಹಾರ ನಿಗಮಗಳ ಕಾಯ್ದೆ 1964ಯಡಿ ಸ್ಥಾಪಿಸಲ್ಪಟ್ಟಿದ್ದು)ಯಡಿ ಭಾರತದೆಲ್ಲೆಡೆ ಡಿಪೋಗಳು ಮತ್ತು ಕಛೇರಿಗಳಿಗೆ ಖಾಲಿ ಇರುವ ಜ್ಯೂನಿಯರ್ ಇಂಜಿನಿಯರ್ (JE) (ಸಿವಿಲ್ ಇಂಜಿನಿಯರಿಂಗ್/ಇಲೆಕ್ಟ್ರಿಕಲ್ ಮೆಕ್ಯಾನಿಕಲ್ ಇಂಜಿನಿಯರಿಂಗ್), ಮತ್ತು ಅಸಿಸ್ಟೆಂಟ್ ಗ್ರೇಡ್ -|| (ಎಜಿ||) (ಹಿಂದಿ), ಸ್ಟೆನೋ ಗ್ರೇಡ್-||, ಟೈಪಿಸ್ಟ್ (ಹಿಂದಿ) ಮತ್ತು ಅಸಿಸ್ಟೆಂಟ್ ಗ್ರೇಡ್ -||| (ಎಜಿ |||) (ಜನರಲ್ / ಅಕೌಂಟ್ಸ್ /ಟೆಕ್ನಿಕಲ್ /ಡಿಪೋಟ್ ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಅನ್ನು ಒಮ್ಮೆ ಪರಿಶೀಲಿಸಿ ಕೇಳಲಾಗಿರುವ ಅರ್ಹತೆಗಳ ಬಗೆಗೆ ಓದಿಕೊಂಡು ನಂತರ ಆನ್ ಲೈನ್ ಮೂಲಕ ಮಾರ್ಚ್ 25,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಭಾರತೀಯ ಆಹಾರ ನಿಗಮದಲ್ಲಿ ಉದ್ಯೋಗಾವಕಾಶ

 

CRITERIA DETAILS
Name Of The Posts ಜ್ಯೂನಿಯರ್ ಇಂಜಿನಿಯರ್ & ಅಸಿಸ್ಟೆಂಟ್ ಗ್ರೇಡ್
Organisation ಭಾರತೀಯ ಆಹಾರ ನಿಗಮ (ಎಫ್ ಸಿಐ)
Educational Qualification ಪದವಿ, ಡಿಪ್ಲೋಮಾ
Job Location ಭಾರತದೆಲ್ಲೆಡೆ
Salary Scale ಹುದ್ದೆಗಳಿಗನುಸಾರ ಅಧಿಸೂಚನೆಯಲ್ಲಿರುವಂತೆ
Application Start Date February 28, 2019
Application End Date March 30, 2019

ವಿದ್ಯಾರ್ಹತೆ ವಿವರ:

ಹುದ್ದೆಗಳ ಹೆಸರುವಿದ್ಯಾರ್ಹತೆ
ಜ್ಯೂನಿಯರ್ ಇಂಜಿನಿಯರ್ ( ಸಿವಿಲ್ ಇಂಜಿನಿಯರಿಂಗ್)ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿ ಅಥವಾ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಜೊತೆಗೆ ಒಂದು ವರ್ಷದ ಅನುಭವವನ್ನು ಹೊಂದಿರಬೇಕು
ಜ್ಯೂನಿಯರ್ ಇಂಜಿನಿಯರ್ (ಇಲೆಕ್ಟ್ರಿಕಲ್ ಇಂಜಿನಿಯರಿಂಗ್)ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಅಥವಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಅಥವಾ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಅಥವಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಜೊತೆಗೆ ಒಂದು ವರ್ಷದ ಅನುಭವವನ್ನು ಹೊಂದಿರಬೇಕು (ಡಿಪ್ಲೋಮಾ ಮಾಡಿರುವ ಅಭ್ಯರ್ಥಿಗಳಿಗೆ ಮಾತ್ರ)
ಸ್ಟೆನೋ. ಗ್ರೇಡ್ -||ಪದವಿಯನ್ನು ಹೊಂದಿರುವುದರ ಜೊತೆಗೆ ಶೀಘ್ರಲಿಪಿ ಮತ್ತು ಬೆರಳಚ್ಚು ಬಲ್ಲವರಾಗಿರಬೇಕು ಅಥವಾ ಕಂಪ್ಯೂಟರ್ ಸೈನ್ಸ್ /ಕಂಪ್ಯೂಟರ್ ಅಪ್ಲಿಕೇಶನ್ ಮಾಡಿರುವ ಅಭ್ಯರ್ಥಿಗಳು ಒಂದು ನಿಮಿಷಕ್ಕೆ 40 ಪದಗಳು ಮತ್ತು ಒಂದು ನಿಮಿಷಕ್ಕೆ 80 ಪದಗಳನ್ನು ಟೈಪಿಂಗ್ ಮತ್ತು ಶೀಘ್ರಲಿಪಿಯಲ್ಲಿ ಬಲ್ಲವರಾಗಿರಬೇಕು
ಎಜಿ-|| (ಹಿಂದಿ)ಹಿಂದಿಯನ್ನು ಪ್ರಮುಖ ಭಾಷೆಯನ್ನಾಗಿ ತೆಗೆದುಕೊಂಡು ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ ಮಾಡಿರಬೇಕು. ಇಂಗ್ಲೀಷ್ ಪ್ರಾವೀಣ್ಯತೆಯನ್ನು ಹೊಂದಿರಬೇಕು. ಇಂಗ್ಲೀಷ್ ನಿಂದ ಹಿಂದಿಗೆ ಅನುವಾದ ಮಾಡುವಲ್ಲಿ ಮತ್ತು ಹಿಂದಿ ಭಾಷೆಯಿಂದ ಇಂಗ್ಲೀಷ್ ಭಾಷೆಗೆ ಅನುವಾದ ಮಾಡುವಲ್ಲಿ ಒಂದು ವರ್ಷದ ಅನುಭವವನ್ನು ಹೊಂದಿರಬೇಕು.

 

ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಹೊಂದಿದ ಅಭ್ಯರ್ಥಿಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು.

ಟೈಪಿಸ್ಟ್ (ಹಿಂದಿ)ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಒಂದು ನಿಮಿಷಕ್ಕೆ 30 ಪದವನ್ನು ಟೈಪ್ ಮಾಡಲು ಬರಬೇಕು. ಇಂಗ್ಲೀಷ್ ಭಾಷೆ ಮತ್ತು ಕನ್ನಡ ಭಾಷೆಯಲ್ಲಿ ಟೈಪಿಂಗ್ ಮಾಡುವುದು ಮತ್ತು ಕಂಪ್ಯೂಟರ್ ಜ್ಞಾನ ಇರುವವರಿಗೆ ಹೆಚ್ಚು ಆದ್ಯತೆ ನೀಡಲಾಗುವುದು.
ಎಜಿ -||| (ಜನರಲ್)ಗ್ರಾಜುಯೇಟ್ ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ ಮಾಡಿರುವುದರ ಜೊತೆಗೆ ಕಂಪ್ಯೂಟರ್ ಬಳಕೆಯ ಬಗೆಗೆ ಹೆಚ್ಚು ಜ್ಞಾನವಿರಬೇಕು.
ಎಜಿ-||| (ಅಕೌಂಟ್ಸ್)ಕಾಮರ್ಸ್ ನಲ್ಲಿ ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಮಾಡಿರುವುದರ ಜೊತೆಗೆ ಕಂಪ್ಯೂಟರ್ ಬಳಕೆಯ ಬಗೆಗೆ ಜ್ಞಾನವಿರಬೇಕು.
ಎಜಿ-||| (ಟೆಕ್ನಿಕಲ್)ಅಗ್ರಿಕಲ್ಚರ್ ನಲ್ಲಿ ಬಿಎಸ್ಸಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ ಮಾಡಿರಬೇಕು

ಅಥವಾ

ಬಿಎಸ್ಸಿಯನ್ನು ಸಸ್ಯಶಾಸ್ತ್ರ/ಪ್ರಾಣಿಶಾಸ್ತ್ರ/ಬಯೋ-ಟೆಕ್ನಾಲಜಿ/ಬಯೋ-ಕೆಮಿಸ್ಟ್ರಿ/ಮೈಕ್ರೋಬಯಾಲಜಿ/ಫುಡ್ ಸೈನ್ಸ್ ನಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ ಮಾಡಿರಬೇಕು

ಅಥವಾ

ಬಿ.ಟೆಕ್, ಬಿಇ ಯನ್ನು ಫುಡ್ ಸೈನ್ಸ್ / ಫುಡ್ ಸೈನ್ಸ್ ಮತ್ತು ಟೆಕ್ನಾಲಜಿ/ ಅಗ್ರಿಕಲ್ಚರಲ್ ಇಂಜಿನಿಯರಿಂಗ್/ ಬಯೋ-ಟೆಕ್ನಾಲಜಿ ಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ ಎಐಸಿಟಿಇ ಇಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಮಾಡಿರಬೇಕು

ಕಂಪ್ಯೂಟರ್ ಬಳಕೆಯಲ್ಲಿ ಹೆಚ್ಚು ಜ್ಞಾನವನ್ನು ಹೊಂದಿರಬೇಕು

ಎಜಿ -||| (ಡಿಪೋಟ್) ಯಾವುದೇ ವಿಭಾಗದಲ್ಲಿ ಗ್ರಾಜುಯೇಟ್ ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ ಮಾಡಿರುವುದರ ಜೊತೆಗೆ ಕಂಪ್ಯೂಟರ್ ಬಳಕೆಯ ಬಗೆಗೆ ಜ್ಞಾನವನ್ನು ಹೊಂದಿರಬೇಕು.

ವಯೋಮಿತಿ:

ಈ ಹುದ್ದೆಗಳಿಗೆ ಗರಿಷ್ಟ 30 ವರ್ಷ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕು. ಸಾಮಾನ್ಯ ಓಬಿಸಿ ಅಭ್ಯರ್ಥಿಗಳಿಗೆ 500/-ರೂ ಶುಲ್ಕವಿದ್ದು, ಮಹಿಳಾ ಮತ್ತು ಕಾಯ್ದಿರಿಸಿರುವ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ನಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಮಾರ್ಚ್ 25,2019 ರೊಳಗೆ ಪಾವತಿಸುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಈ ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಹೆಚ್ಚಿನ ವಿವರಗಳ ಅಪ್ ಡೇಟ್ಸ್ ಗಾಗಿ ಅಧಿಕೃತ ವೆಬ್ ಸೈಟ್ ಫಾಲೋ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Food Corporation Of India recruitment 2019 notification has been released on official website for the posts of junior engineer and assistant grade. Interested candidates can apply through online before 25th march 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X