ಕರ್ನಾಟಕ ಅರಣ್ಯ ಇಲಾಖೆಯಲ್ಲಿ 68 ವಲಯ ಅರಣ್ಯಾಧಿಕಾರಿ ಹುದ್ದೆಗಳು ಹಾಗೂ 5 ಬ್ಯಾಕ್ಲಾಗ್ ವಲಯ ಅರಣ್ಯಾಧಿಕಾರಿ ಹುದ್ದೆಗಳು ಸೇರಿದಂತೆ ಒಟ್ಟು 73 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲು ಅರ್ಹ ಬಿಎಸ್ಸಿ ಅರಣ್ಯ ಶಾಸ್ತ್ರ, ವಿಜ್ಞಾನ, ಇಂಜಿನಿಯರಿಂಗ್ ಪದವೀಧದರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಮೇ 8, 2018 ಕೊನೆಯ ದಿನಾಂಕ.
ಹುದ್ದೆಗಳ ವರ್ಗೀಕರಣ :
ಬಿಎಸ್ಸಿ ಅರಣ್ಯಶಾಸ್ತ್ರ ಪದವೀಧರರಿಗೆ | 51 |
ವಿಜ್ಞಾನ ಮತ್ತು ಇಂಜಿನಿಯರಿಂಗ್ ಪದವೀಧರರಿಗೆ | 17 |
ಒಟ್ಟು | 68 |
ಬ್ಯಾಕ್ ಲಾಗ್ ಹುದ್ದೆಗಳ ವಿವ:
ಬಿಎಸ್ಸಿ ಈಅರಣ್ಯಶಾಸ್ತ್ರ ಪದವೀಧರರಿಗೆ | 5 |
ಒಟ್ಟು | 5 |
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ . 100 + ಸೇವಾ ಶುಲ್ಕ 15.00
ಪ.ಜಾತಿ, ಪಂ.ಪಂಗಡ ಮತ್ತು ಪ್ರವರ್ಗ 1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 50+ ಸೇವಾ ಶುಲ್ಕ 15
ಶೈಕ್ಷಣಿಕ ವಿದ್ಯಾರ್ಹತೆ:
- ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ (08.05.2018) ರೊಳಗೆ ಈ ಕೆಳಕಂಡ ವಿದ್ಯಾರ್ಹತೆಯನ್ನ ಅಭ್ಯರ್ಥಿಯು ಹೊಂದಿರಬೇಕು
- ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಯದಲ್ಲಿ ಅರಣ್ಯ ವಿಷಯದಲ್ಲಿ ಪದವಿ ಪಡೆದಿರಬೇಕು
- ಅಥವಾ ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಯದಲ್ಲಿ ಕೃಷಿ, ತೋಟಗಾರಿಕೆ, ಪಶುವಿಜ್ಞಾನ ವಿಷಯದಲ್ಲಿ ಪದವಿ ಪಡೆದಿರಬೇಕು
- ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರಬೇಕು
- ಮೇಲಿನ ಪದವಿ ಪರೀಕ್ಷೆಗಳಲ್ಲಿ ನಿಗದಿಪಡಿಸಿದ ಗರಿಷ್ಟ ಅಂಕಗಳಿಗೆ ಶೇ.50ಕ್ಕಿಂತ ಕಡಿಮೆ ಇಲ್ಲದ ಅಂಕ ಪಡೆದು ತೇರ್ಗಡೆಯಾಗಿರಬೇಕು
ವಯೋಮಿತಿ:
ಅರ್ಜಿಯನ್ನ ಆಹ್ವಾನಿಸಿ ಜಾರಿ ಮಾಡಲಾಗಿರುವ ಈ ಅಧಿಸೂಚನೆಯ ದಿನಾಂಕಕ್ಕೆ ಅಭ್ಯರ್ಥಿಯು 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು. ಮತ್ತು ಈ ಕೆಳಗಿನ ವಯೋಮಿತಿ ಮೀರಿರಬಾರದು.
ಪ.ಜಾತಿ, ಪಂ.ಪಂಗಡ ಮತ್ತು ಪ್ರವರ್ಗ 1 | 32 ವರ್ಷ |
2ಎ, 2ಬಿ,3ಎ, 3ಬಿ ಪ್ರವರ್ಗ | 30 ವರ್ಷ |
ಇತರರು | 27 ವರ್ಷ |
- ಅರ್ಜಿಯನ್ನು ಆನ್ಲೈನ್ ಮುಖಾಂತರ ಅಭ್ಯರ್ಥಿಗಳು ಸಲ್ಲಿಸತಕ್ಕದ್ದು, ಇದನ್ನು ಹೊರತುಪಡಿಸಿ ಯಾವುದೇ ವಿಧದಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶವಿರುವುದಿಲ್ಲ
- ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನ ಸಲ್ಲಿಸಬಾರದು
- ಅಭ್ಯರ್ಥಿಗಳು ತಮ್ಮ ಮಾಹಿತಿಗಾಗಿ ಭರ್ತಿ ಮಾಡಿದ ಅರ್ಜಿಯ ಒಂದು ಪ್ರತಿಯನ್ನ ತಮ್ಮ ಬಳಿ ಇರಿಸಿಕೊಳ್ಳ ತಕ್ಕದ್ದು
- ಮೂಲ ದಾಖಲೆಗಳ ಪರಿಶೀಲನೆ, ಪೂರ್ವಭಾವಿ ಪರೀಕ್ಷೆ ದಿನಾಂಕ, ಪರೀಕ್ಷೆ ನಡೆಯುವ ಸ್ಥಳ ಮತ್ತೆ ವೇಳಾಪಟ್ಟಿಯನ್ನ ಇಲಾಖಾ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು
- ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ
For Quick Alerts
For Daily Alerts