ಕೆನರಾಬ್ಯಾಂಕ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷ್‍ನ್ ಟೆಕ್ನಾಲಜಿ ವತಿಯಿಂದ ನಿರುದ್ಯೋಗ ಯುವಕ ಯುವತಿಯರಿಗಾಗಿ ಉಚಿತ ಕಂಪ್ಯೂಟರ್ ತರಬೇತಿ ಹಮ್ಮಿಕೊಳ್ಳಲಾಗಿದೆ.
ಕಂಪ್ಯೂಟರ್ ಆಫೀಸ್ ಅಡ್ಮಿನಿಸ್ಟ್ರೇಷನ್ ಮತ್ತು ಟ್ಯಾಲಿ ಅಥವಾ ಡಿ.ಟಿ.ಪಿ ಹಾಗು ಹಾರ್ಡ್ವೇರ್ ಮತ್ತು ನೆಟ್‍ವರ್ಕ್ ಅಡ್ಮಿನಿಸ್ಟ್ರೇಷನ್‍ನಲ್ಲಿ ಮೂರು ತಿಂಗಳ ಪೂರ್ಣಾವಧಿ ತರಬೇತಿ ನೀಡಲಾಗುವುದು.
ಈ ಕಾರ್ಯಕ್ರಮವು 1ನೇ ಅಕ್ಟೋಬರ್, 2017 ರಿಂದ, ಪ್ರಾರಂಭವಾಗಲಿದ್ದು, ಆಸಕ್ತ, ಅರ್ಹ ನಿರುದ್ಯೋಗಿ ಯುವಕ / ಯುವತಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಕಾರ್ಯಕ್ರಮದ ಪ್ರಯೋಜನ ಪಡೆದು ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಪ್ರತಿಭಾವಂತರಿಗೆ ಸಹಾಯವನ್ನು ಸಹ ನೀಡಲಾಗುವುದು ಎಂದು ತಿಳಿಸಲಾಗಿದೆ.
ಅರ್ಹತೆಗಳು
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ. ಪಾಸಾಗಿರಬೇಕು. ಪಿ.ಯು.ಸಿ, ಡಿಗ್ರಿ, ಡಿಪ್ಲೊಮಾ, ಐ.ಟಿ.ಐ ಹೊಂದಿರುವವರಿಗೆ ಆದ್ಯತೆ.
ವಯಸ್ಸು : ಕನಿಷ್ಟ 18 ವರ್ಷಗಳು, ಗರಿಷ್ಟ 27 ವರ್ಷಗಳು. ಪರಿಶಿಷ್ಟ ಜ್ಯಾತಿ / ವರ್ಗ ಗರಿಷ್ಟ 30 ವರ್ಷಗಳು.
ವರಮಾನ : ಬಿ ಪಿ ಲ್ ಪಡಿತರ ಚೀಟಿ ಹೊಂದಿರಬೇಕು ಅಥವ ಕುಟುಂಬದ ವಾರ್ಷಿಕ ಆದಾಯ ರೂ.50,000/- ಮೀರಿರಬಾರದು.

ಅಪೇಕ್ಷೆಯುಳ್ಳವರು ದಿನಪ್ರತಿ ಬೆಳಿಗ್ಗೆ 11.00 ಘಂಟೆಗೆ ನಡೆಯಲಿರುವ ಅರ್ಹತಾ ಪರೀಕ್ಷೆಗೆ ಮತ್ತು ಸಂದರ್ಶನಕ್ಕೆ ಹಾಜರಾಗತಕ್ಕದ್ದು. ಅರ್ಜಿ ಫಾರಂಗಳನ್ನು ಪರೀಕ್ಷೆಗೆ ಹಾಜರಾಗುವ ಸಮಯದಲ್ಲಿ ಪಡೆಯಬಹುದು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.
ಹೆಚ್ಚಿನ ವಿವರಗಳಿಗೆ ಕೆಳಕಂಡ ವಿಳಾಸದಲ್ಲಿ ಸಂಪರ್ಕಿಸಿ.
ನಿರ್ದೇಶಕರು
ಕೆನರಾಬ್ಯಾಂಕ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷ್‍ನ್ ಟೆಕ್ನಾಲಜಿ
3ನೇ ಮಹಡಿ, ಚಿತ್ರಾಪುರ ಭವನ, 8ನೇ ಮುಖ್ಯ ರಸ್ತೆ, 15ನೇ ಕ್ರಾಸ್
ಮಲ್ಲೇಶ್ವರಂ, ಬೆಂಗಳೂರು 560 055
ಫೋನ್ : 080 23440036 / 23463580 / 94485 38107


Click it and Unblock the Notifications











