ಮೈಸೂರಿನ ಸಿಐಪಿಇಟಿಯಲ್ಲಿ ನಿರುದ್ಯೋಗಿ ಯುವಕರಿಗೆ ವೃತ್ತಿಪರ ತರಬೇತಿ

Posted By:

ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2017-18ನೇ ಸಾಲಿನಲ್ಲಿ ಪರಿಶಿಷ್ಟಿ ಜಾತಿಗೆ ಸೇರಿದ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಮೈಸೂರಿನ ಹೆಬ್ಬಾಳದಲ್ಲಿರುವ ಭಾರತ ಸರ್ಕಾರದ ಕೇಂದ್ರೀಯ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆಯ (ಸಿಐಪಿಇಟಿ) ಮೂಲಕ 6 ತಿಂಗಳ ವಿವಿಧ ರೀತಿಯ ವೃತ್ತಿಪರ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ತರಬೇತಿಯನ್ನು ಉಚಿತ ಊಟ ಮತ್ತು ವಸತಿಗಳೊಂದಿಗೆ ಆಯೋಜಿಸಿದ್ದು, ತರಬೇತಿ ಅವಧಿಯಲ್ಲಿ ತಿಂಗಳಿಗೆ ರೂ.500/- ಶಿಷ್ಯ ವೇತನ ನೀಡಲಾಗುವುದು. ಆದಾಯ ಮಿತಿ 2.5 ಲಕ್ಷ ವಿರುವ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ.

ನಿರುದ್ಯೋಗಿ ಯುವಕರಿಗೆ ವೃತ್ತಿಪರ ತರಬೇತಿ

ತರಬೇತಿ ವಿವರ

1. ಪ್ಲಾಸ್ಟಿಕ್ ಪ್ರೊಸೆಸಿಂಗ್ ಮಷಿನ್ ಆಪರೇಟರ್
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಪಾಸ್

2. ಮೌಲ್ಡ್ ಮೇಕಿಂಗ್ ಟೆಕ್ನಾಲಜಿ
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಪಾಸ್

3. ಇಂಜೆಕ್ಷನ್ ಮೌಲ್ಡಿಂಗ್ ಮಷಿನ್ ಆಪರೇಷನ್ ಅಂಡ್ ಮೇನ್ಟನೆನ್ಸ್
ವಿದ್ಯಾರ್ಹತೆ: ಪಿಯುಸಿ/ಪದವಿ

4. ಸಿಎನ್ಸಿ ಮಷಿನ್ ಪ್ರೋಗ್ರಾಮಿಂಗ್ ಅಂಡ್ ಆಪರೇಷನ್
ವಿದ್ಯಾರ್ಹತೆ: ಐಟಿಐ(ಫಿಟ್ಟರ್/ಟರ್ನರ್/ಮೆಕಾನಿಸ್ಟ್)

5. ಸಿಎಡಿ/ಸಿಎಎಂ ಅಪ್ಲಿಕೇಷನ್ ಇನ್ ಪ್ಲಾಸ್ಟಿಕ್ ಪ್ರಾಡಕ್ಟ್ ಅಂಡ್ ಮೌಲ್ಡ್ ಡಿಸೈನ್
ವಿದ್ಯಾರ್ಹತೆ: ಡಿಪ್ಲೊಮಾ/ಬಿಇ (ಮೆಕಾನಿಕಲ್/ಪಾಲಿಮರ್/ಐಪಿ/ಆಟೊಮೊಬೈಲ್/ಟೂಲಿಂಗ್), ಐಟಿಐ(ಡ್ರಾಫ್ಟ್ಸ್ಮನ್)

ತರಬೇತಿ ಅವಧಿ: 6 ತಿಂಗಳು

ವಯೋಮಿತಿ: 18 ರಿಂದ 35 ವರ್ಷ

ಆಯ್ಕೆ ವಿಧಾನ ಇಚ್ಛೆಯುಳ್ಳ ಅಭ್ಯರ್ಥಿಗಳು ವಿದ್ಯಾರ್ಹತೆ, ಡೇಟ್ ಆಫ್ ಬರ್ತ್ ಪ್ರೂಫ್, ಐಡಿ ಪ್ರೂಫ್ (ಆಧಾರ್ ಕಾರ್ಡ್/ವೋಟರ್ ಐಡಿ)ಗೆ ಸಂಬಂಧಿಸಿದ ಎಲ್ಲಾ ಒರಿಜಿನಲ್ ದಾಖಲೆಗಳು, 4 ಪಾಸ್ಪೋರ್ಟ್ ಅಳತೆಯ ಇತ್ತೀಚಿನ ಫೋಟೋ ಮತ್ತು ಲಗ್ಗೇಜ್ ಗಳೊಂದಿಗೆ ದಿನಾಂಕ 26 -07 -2017 ರಿಂದ 31-07-2017 ಒಳಗೆ ನೇರವಾಗಿ ಸಿಐಪಿಇಟಿ ಮೈಸೂರಿನಲ್ಲಿ ತರಬೇತಿಗೆ ನೋಂದಾಯಿಸಿಕೊಳ್ಳತಕ್ಕದ್ದು.

ತರಬೇತಿಯೊಂದಿಗೆ ಅಭ್ಯರ್ಥಿಗಳಿಗೆ ಬೇಸಿಕ್ ಕಂಪ್ಯೂಟರ್ ತರಬೇತಿ, ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡುವುದರ ಜೊತೆಗೆ ತರಬೇತಿಯ ಪ್ರಮಾಣ ಪತ್ರವನ್ನು ನೀಡಲಾಗುವುದು.

ತರಬೇತಿ ವಿಳಾಸ

ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಾಜಿ (ಸಿಐಪಿಇಟಿ) ನಂ.437/A , ಹೆಬ್ಬಾಳ್ ಇಂಡಸ್ಟ್ರಿಯಲ್ ಏರಿಯಾ, ಮೈಸೂರು-570016

ದೂರವಾಣಿ ಸಂಖ್ಯೆ: 0821 -2510619

ವೆಬ್ಸೈಟ್ ವಿಳಾಸ್: www.cipet.gov.in

ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ಸ್ ಇಂಜಿನಿಯರಿಂಗ್ & ಟೆಕ್ನಾಲಜಿ (CIPET)

ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ಸ್ ಇಂಜಿನಿಯರಿಂಗ್ & ಟೆಕ್ನಾಲಜಿ (CIPET)ಯನ್ನು ಭಾರತ ಸರ್ಕಾರವು ಚೆನೈ ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್ (ಯುಎನ್ಡಿಪಿ) ನೆರವಿನಿಂದ 1968 ರಲ್ಲಿ ಸ್ಥಾಪಿಸಲಾಯಿತು.

ದೇಶದಲ್ಲಿ ಪ್ಲಾಸ್ಟಿಕ್ಸ್ ಇಂಜಿನಿಯರಿಂಗ್ ಮತ್ತು ತಂತ್ರಾಂಶದ ಕ್ಷೇತ್ರದಲ್ಲಿ ಮಾನವಶಕ್ತಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶವನ್ನು ಸಿಐಪಿಇಟಿ ಹೊಂದಿದೆ.

ಸಂಸ್ಥೆಯು ಆರಂಭದಲ್ಲಿ ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO) ಸಹಯೋಗದೊಂದಿಗೆ ಕಾರ್ಯನಿರ್ವಹಿಸಲು ಪ್ರಾರಂಭಿಸಿತು, 1968 ಮತ್ತು 1973 ರ ಅವಧಿಯಲ್ಲಿ ಸಂಸ್ಥೆಯ ಹಲವು ಯೋಜನೆಗಳು ತನ್ನ ಗುರಿಗಳನ್ನು ಮುಟ್ಟುವಲ್ಲಿ ಯಶಸ್ವಿಯಾಯಿತು. ಅಲ್ಲದೇ ಇದು ವಿಶ್ವದಾದ್ಯಂತ ಜಾರಿಗೆ ಬಂದ ಅತ್ಯಂತ ಯಶಸ್ವಿ ಯುಎನ್ಡಿಪಿ ಯೋಜನೆಗಳಲ್ಲಿ ಒಂದಾಗಿದೆ.

ಇಂದು CIPET ಸಚಿವಾಲಯ ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್, ಸರ್ಕಾರದ ಆಶ್ರಯದಲ್ಲಿ ಒಂದು ಪ್ರಮುಖ ರಾಷ್ಟ್ರೀಯ ಸಂಸ್ಥೆಯಾಗಿದೆ. ಭಾರತದ ಕೌಶಲ್ಯ ಅಭಿವೃದ್ಧಿ ಸಂಪೂರ್ಣವಾಗಿ ಮೀಸಲಾಗಿದೆ.

ತಂತ್ರಜ್ಞಾನ ಬೆಂಬಲ ಸೇವೆಗಳು, ಶೈಕ್ಷಣಿಕ ಮತ್ತು ಸಂಶೋಧನೆಗಾಗಿ ದೇಶಾದ್ಯಂತ - CIPET 28 ಕೇಂದ್ರಗಳಿಂದ ಇದು ಕಾರ್ಯ ನಿರ್ವಹಿಸುತ್ತಿದ್ದು, 5 ಉನ್ನತ ಕಲಿಕೆ ಕೇಂದ್ರಗಳು, 12 ಇತರೆ ಕಲಿಕೆ ಕೇಂದ್ರಗಳು, 3 ವಿಶೇಷ ಕೇಂದ್ರಗಳು, 2 ಆರ್ & ಡಿ ವಿಂಗ್ಸ್, 5 ವೊಕೇಶನಲ್ ತರಬೇತಿ ಕೇಂದ್ರ, 1 ಪೆಟ್ರೋರಾಸಾಯನಿಕ ಡೇಟಾ ಸೇವೆಗಳೊಂದಿಗೆ ಪಾಲಿಮರ್ ಅಗತ್ಯಗಳನ್ನು ಪೂರೈಸುತ್ತಿದ್ದು ಇನ್ನು 11 ಕೇಂದ್ರಗಳು ಪ್ರಕ್ರಿಯೆಯ್ಲಿವೆ.

English summary
SKILL DEVELOPMENT TRAINING PROGRAMME BY KARNATAKA GOVERNMENT AND CIPET FOR UNEMPLOYED YOUTHS. INTERESTED CANDIDATES SHOULD ATTEND THE INTERVIEW ON BEFORE JULY 31
Please Wait while comments are loading...