ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಇನ್ನೂರ ಮೂವತ್ಮೂರು (233) ತಾಂತ್ರಿಕ ಅಧಿಕಾರಿ, ಆಹಾರ ವಿಶ್ಲೇಷಕ, ಕೇಂದ್ರ ಆಹಾರ ಸುರಕ್ಷತಾ ಅಧಿಕಾರಿ (CFSO), ವೈಯಕ್ತಿಕ ಸಹಾಯಕ, ಸಹಾಯಕ ವ್ಯವಸ್ಥಾಪಕ, ಸಹಾಯಕ, ಹಿಂದಿ ಅನುವಾದಕ, ಐಟಿ ಸಹಾಯಕ ಮತ್ತು ಕಿರಿಯ ಸಹಾಯಕ ಗ್ರೇಡ್-I
ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಮತ್ತು ಅನುಭವಿ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಬಹುದು.

ಎಫ್‌ಎಸ್‌ಎಸ್‌ಎಐ ನವದೆಹಲಿಯಲ್ಲಿ ಮತ್ತು ಭಾರತದಲ್ಲಿ ಎಲ್ಲಿಯಾದರೂ ಪೂರ್ಣ ಸಮಯದ ಆಧಾರದ ಮೇಲೆ ಕೆಲಸ ಮಾಡಲು ಸಿದ್ದರಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಕಮ್ ನೋಂದಣಿ ಪ್ರಕ್ರಿಯೆಯು ಅಕ್ಟೋಬರ್ 13,2021 ರಿಂದ ಪ್ರಾರಂಭವಾಗಿ ನವೆಂಬರ್ 12,2021 ರಂದು ಕೊನೆಗೊಳ್ಳುತ್ತದೆ.
FSSAI ನೇಮಕಾತಿ 2021 ವಿದ್ಯಾರ್ಹತೆ ಮತ್ತು ಅನುಭವ :
FSSAI ನೇಮಕಾತಿ 2021ರ ಮೂಲಕ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ, ಪಿಜಿ ಡಿಪ್ಲೋಮಾ, ಬಿ.ಇ/ಬಿ.ಟೆಕ್, ಪದವಿ, 12ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹೊಂದಿರುವುದರ ಜೊತೆಗೆ ಎಫ್‌ಎಸ್‌ಎಸ್‌ಎಐ ಅಧಿಸೂಚನೆ 2021 ರಲ್ಲಿ ನಿರ್ದಿಷ್ಟಪಡಿಸಿದಂತೆ ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
ಎಫ್‌ಎಸ್‌ಎಸ್‌ಎಐ ನೇಮಕಾತಿ 2021 ವಯೋಮಿತಿ :
ಎಫ್‌ಎಸ್‌ಎಸ್‌ಎಐ ನೇಮಕಾತಿ 2021 ರ ಮೂಲಕ ಎಫ್‌ಎಸ್‌ಎಸ್‌ಎಐ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ವೇಳೆಗೆ ಕನಿಷ್ಟ 25 ರಿಂದ ಗರಿಷ್ಟ 35 ವರ್ಷ ವಯೋಮಿತಿಯೊಳಗಿರಬೇಕು. FSSAI ಅಧಿಸೂಚನೆ 2021 ರಲ್ಲಿ ನಿರ್ದಿಷ್ಟಪಡಿಸಿದಂತೆ ಕ್ರಮವಾಗಿ 3 ವರ್ಷಗಳವರೆಗೆ (OBC-NCL), 5 ವರ್ಷಗಳು (SC/ST) ಮತ್ತು 10 ವರ್ಷಗಳು (PWBD)ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
FSSAI ನೇಮಕಾತಿ 2021 ವೇತನ :
ಎಫ್‌ಎಸ್‌ಎಸ್‌ಎಐ ನೇಮಕಾತಿ 2021 ರ ಮೂಲಕ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಎಫ್‌ಎಸ್‌ಎಸ್‌ಎಐ ಅಧಿಸೂಚನೆ 2021 ರಲ್ಲಿ ಸೂಚಿಸಿರುವಂತೆ ವೇತನವನ್ನು ನೀಡಲಾಗುತ್ತದೆ.
FSSAI ನೇಮಕಾತಿ 2021 ಆಯ್ಕೆ ಪ್ರಕ್ರಿಯೆ :
FSSAI ನೇಮಕಾತಿ 2021ರ ಮೂಲಕ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಯ್ಕೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (ಹಂತ I/ಹಂತ II)/ಲಿಖಿತ ಪರೀಕ್ಷೆ + ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಎಫ್‌ಎಸ್‌ಎಸ್‌ಎಐ ನೇಮಕಾತಿ 2021 ಅರ್ಜಿ ಶುಲ್ಕ :
ಎಫ್‌ಎಸ್‌ಎಸ್‌ಎಐ ನೇಮಕಾತಿ 2021 ರ ಮೂಲಕ ಎಫ್‌ಎಸ್‌ಎಸ್‌ಎಐ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಿರುವಂತೆ ನಿಗದಿತ ಮೊತ್ತ 1,500/-ರೂ (ಜನ್/ಒಬಿಸಿ) ಮತ್ತು ರೂ. 500/- (SC/ST/ಮಹಿಳೆಯರು/Ex -SM/PwBD/EWS - ಸೂಚನೆ ಶುಲ್ಕಗಳು ಮಾತ್ರ) ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಬಹುದು.
FSSAI ನೇಮಕಾತಿ 2021 ಅರ್ಜಿ ಸಲ್ಲಿಕೆ :
ಎಫ್‌ಎಸ್‌ಎಸ್‌ಎಐ ನೇಮಕಾತಿ 2021 ರ ಮೂಲಕ ಎಫ್‌ಎಸ್‌ಎಸ್‌ಎಐ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://www.fssai.gov.in/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ನವೆಂಬರ್ 12,2021ರೊಳಗೆ ಅರ್ಜಿಯನ್ನು ಹಾಕಬಹುದು.
ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.


Click it and Unblock the Notifications











