ಭಾರತೀಯ ಅನೀಲ ಪ್ರಾಧಿಕಾರ ನಿಗಮವು 27 ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಮಾರ್ಚ್ 13,2019 ರೊಳಗೆ ಅರ್ಜಿ ಸಲ್ಲಿಸಬಹುದು.

| CRITERIA | DETAILS |
| Name Of The Posts | ಎಕ್ಸಿಕ್ಯೂಟಿವ್ ಟ್ರೈನಿ |
| Organisation | ಭಾರತೀಯ ಅನೀಲ ಪ್ರಾಧಿಕಾರ |
| Educational Qualification | ಇಂಜಿನಿಯರಿಂಗ್ ಪದವಿ |
| Job Location | ಭಾರತದೆಲ್ಲೆಡೆ |
| Salary Scale | 60,000/- ರಿಂದ 1,80,000/-ರೂ |
| Application Start Date | February 12, 2019 |
| Application End Date | March 13, 2019 |
ಶೈಕ್ಷಣಿಕ ವಿದ್ಯಾರ್ಹತೆ:
ಎಕ್ಸಿಕ್ಯೂಟಿವ್ ಟ್ರೈನಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಕೆಮಿಕಲ್ / ಪೆಟ್ರೋಕೆಮಿಕಲ್/ ಕೆಮಿಕಲ್ ಟೆಕ್ನಾಲಜಿ/ ಪೆಟ್ರೋಕೆಮಿಕಲ್ ಟೆಕ್ನಾಲಜಿ ಯಲ್ಲಿ ಇಂಜಿನಿಯರಿಂಗ್ ಪದವಿಯನ್ನು ಶೇ65% ರಷ್ಟು ಅಂಕಗಳೊಂದಿಗೆ ಪಡೆದಿರಬೇಕು.
ಎಕ್ಸಿಕ್ಯೂಟಿವ್ ಟ್ರೈನಿ (ಇನ್ಸ್ಟ್ರುಮೆಂಟೇಶನ್): ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇನ್ಸ್ಟ್ರುಮೆಂಟೇಶನ್/ ಇನ್ಸ್ಟ್ರುಮೆಂಟೇಶನ್ ಮತ್ತು ಕಂಟ್ರೋಲ್/ ಇಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ / ಇಲೆಕ್ಟ್ರಾನಿಕ್ಸ್ /ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಕನಿಷ್ಟ 65%ರಷ್ಟು ಅಂಕಗಳೊಂದಿಗೆ ಮಾನ್ಯತೆ ಪಡೆದ ಸಂಸ್ಥೆ / ಬೋರ್ಡ್ ನಲ್ಲಿ ಉತ್ತೀರ್ಣರಾಗಿರಬೇಕು.
ಖಾಲಿ ಹುದ್ದೆಗಳ ವಿವರ:
| ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
| ಎಕ್ಸಿಕ್ಯೂಟಿವ್ ಟ್ರೈನಿ (ಕೆಮಿಕಲ್) | 15 |
| ಎಕ್ಸಿಕ್ಯೂಟಿವ್ ಟ್ರೈನಿ (ಇನ್ಸ್ಟ್ರುಮೆಂಟೇಶನ್) | 12 |
| ಒಟ್ಟು | 27 |
ವಯೋಮಿತಿ:
ಈ ಹುದ್ದೆಗಳಿಗೆ ಮಾರ್ಚ್ 13,2019 ರ ಅನ್ವಯ 28 ವರ್ಷ ವಯೋಮಿತಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಮತ್ತು ವಯೋಮಿತಿ ಸಡಿಲಿಕೆಯ ವಿವರವನ್ನು ಅಧಿಸೂಚನೆಯಲ್ಲಿ ನೀಡಲಾಗಿರುತ್ತದೆ.
ವೇತನದ ವಿವರ:
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 60,000/- ರಿಂದ 1,80,000/-ರೂ ವೇತನವನ್ನು ಸಂಸ್ಥೆಯು ನೀಡುತ್ತದೆ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಅರ್ಜಿದಾರರು ಅರ್ಜಿ ಶುಲ್ಕದ ಬಗೆಗೆ ತಿಳಿಯಲು ಅಧಿಸೂಚನೆಯನ್ನು ಓದತಕ್ಕದ್ದು.
ಅರ್ಜಿ ಸಲ್ಲಿಸುವುದು ಹೇಗೆ:
ಈ ಹುದ್ದೆಗಳಿಗೆ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಲು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ
ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್ ಸೈಟ್ http://gailonline.com/home.html ಗೆ ಹೋಗಿ
ಸ್ಟೆಪ್ 2: ನಂತರ ಅಲ್ಲಿ Career Section ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಅಲ್ಲಿ "GAIL Recruitment 2019 For Executive Trainee Posts" ನ ಬಗೆಗೆ ಕೊಡಲಾಗಿರುವ ಮಾಹಿತಿಯನ್ನು ತೆರೆಯಿರಿ
ಸ್ಟೆಪ್ 4: ನಂತರ ಅರ್ಜಿಯನ್ನು ಭರ್ತಿ ಮಾಡಿ
ಸ್ಟೆಪ್ 5: ನಂತರ ಅರ್ಜಿ ಶುಲ್ಕವನ್ನು ಪಾವತಿಸಿ
ಸ್ಟೆಪ್ 6: ಎಲ್ಲವೂ ಪೂರ್ಣಗೊಂಡ ನಂತರ Submit Button ಮೇಲೆ ಕ್ಲಿಕ್ ಮಾಡಿ
ಅಭ್ಯರ್ಥಿಗಳು ಅರ್ಜಿಯನ್ನು ಸೇವ್ ಮಾಡಿಕೊಂಡು ನಂತರ ಒಂದು ಪ್ರಿಂಟೌಟ್ ಅನ್ನ ತೆಗೆದುಕೊಳ್ಳಿ
ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











