ನ್ಯಾಷನಲ್ ಅಲ್ಯುಮಿನಿಯಂ ಕಂಪನಿ ಲಿಮಿಟೆಡ್ ( ಎನ್‌ಎಎಲ್ ಸಿಒ) , ಭಾರತದಲ್ಲಿ ಇರುವ ನವರತ್ನ ಕಂಪನಿಗಳಲ್ಲಿ ಇದು ಕೂಡಾ ಒಂದಾಗಿದೆ. ಇದೀಗ ಈ ಕಂಪನಿ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಪದವಿ ಮುಗಿಸಿರುವ ಇಂಜೀನಿಯರ್ಸ್ ನಿಂದ ಅರ್ಜಿ ಆಹ್ವಾನಿಸಿದೆ. ಗ್ರ್ಯಾಜುಯೆಟ್ ಇಂಜಿನೀಯರ್ಸ್ ಟ್ರೈನೀಸ್ ಹುದ್ದೆಗೆ ಅರ್ಜೀ ಆಹ್ವಾನಿಸಿದ್ದು, ಈಗಷ್ಟೇ ಇಂಜಿನಿಯರ್ ಪದವಿ ಮುಗಿಸಿರುವ ಅಭ್ಯರ್ಥಿಗಳು ಅಪ್ಲೈ ಮಾಡಬಹುದು.
ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ ಬಳಿಕ, ಒಂದು ವರ್ಷ ಟ್ರೈನಿಂಗ್ ನೀಡಲಾಗುವುದು. ಈ ವೇಳೆ ಪ್ರತಿ ತಿಂಗಳಿಗೆ ವೇತನವಾಗಿ ರೂ. 40,000 ನೀಡಲಾಗುವುದು. ಒಂದು ವರ್ಷ ಟ್ರೈನಿಂಗ್ ಯಾರು ಸಕ್ಸಸ್ ಆಗಿ ಮುಗಿಸ್ತಾರೋ ಅವರಿಗೆ ಜ್ಯೂ.ಮ್ಯಾನೇಜರ್ ಹುದ್ದೆ ನೀಡಲಾಗುವುದು ಜತೆಗೆ ರೂ 60,000 ರಿಂದ 180000 ವೇತನ ನೀಡಲಾಗುವುದು.
ಅಂತಿಮ ವರ್ಷದ ಇಂಜಿನಿಯರ್ ವಿದ್ಯಾರ್ಥಿಗಳು ಸೇರಿದಂತೆ ಈಗಷ್ಟೇ ಪದವಿ ಮುಗಿಸಿರು ಇಂಜೀನಿಯರ್ ವಿದ್ಯಾರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮೇ 22, 2018 ಕೊನೆಯ ದಿನಾಂಕ.
ಹುದ್ದೆಯ ಡೀಟೆಲ್ಸ್ ಹೀಗಿದೆ
| ವರ್ಗ | ಡೀಟೆಲ್ಸ್ |
| ಹುದ್ದೆ ಸಂಖ್ಯೆ | 115 ( ಮ್ಯಾಕಾನಿಕಲ್ -54, ಎಲೆಕ್ಟ್ರಿಕಲ್ -32, ಮೆಟಲುರ್ಗಿ-18, ಎಲೆಕ್ಟ್ರೋನಿಕ್ -05, ಇಂಸ್ಟ್ರುಮೆಂಟೇಶನ್ -06) |
| ವಿದ್ಯಾರ್ಹತೆ | ಇಂಜಿನಿಯರಿಂಗ್ ಅಥವಾ ಟೆಕ್ನಾಲಾಜಿಯಲ್ಲಿ ಪದವಿ ಪಡೆದಿರಬೇಕು |
| ಕನಿಷ್ಟ ಶೇಕಡಾ ಅಂಕ | 65% |
| ಗರಿಷ್ಠ ವಯೋಮಿತಿ | 30 ವರ್ಷ |
| ಅರ್ಜಿ ಶುಲ್ಕ | ರೂ.500 ಹಾಗೂ ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ -100 ರೂ |
| ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಮೇ.22, 2018 |
ಅಭ್ಯರ್ಥಿ ಆಯ್ಕೆ ಹೇಗೆ:
GATE 2018 ಪರೀಕ್ಷೆಯಲ್ಲಿ ಗಳಿಸಿದ ಸ್ಕೋರ್ ಆಧಾರದ ಮೇಲೆ ಅಭ್ಯರ್ಥಿಗಳನ್ನ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನ ಸಂದರ್ಶನಕ್ಕೆ ಕರೆಯಲಾಗುತ್ತದೆ
ಅರ್ಜಿ ಸಲ್ಲಿಕೆ ಹೇಗೆ:
ಪದವಿ ಇಂಜಿನಿಯರ್ಸ್ ಹುದ್ದೆಗೆ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿ. ಅರ್ಜಿ ಜತೆ ಅಭ್ಯರ್ಥಿಗಳು ಪಾಸ್‌ಪೋರ್ಟ್ ಸೈಜ್ ನ ಫೋಟೋ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು. GATE ಪರೀಕ್ಷೆಯ ಅಂಕ ಸರಿಯಾಗಿ ನೀಡದೇ ಇದ್ದಲ್ಲಿ ಅಂತಹ ಅಭ್ಯರ್ಥಿಗಳ ಅರ್ಜಿಯನ್ನ ರದ್ದು ಗೊಳಿಸಲಾಗುದು.
ಅಫೀಶಿಯಲ್ ಣೋಟಿಫಿಕೇಶನ್ ಗೆ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











