GTTC Recruitment 2019: 8 ಅಸಿಸ್ಟೆಂಟ್ ಮ್ಯಾನೇಜರ್ & ಟೆಕ್ನೀಶಿಯನ್ ಹುದ್ದೆಗಳ ನೇಮಕಾತಿ

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ), ಬೆಂಗಳೂರು ಇಲ್ಲಿ ಖಾಲಿ ಇರುವ 8 ಅಸಿಸ್ಟೆಂಟ್ ಮ್ಯಾನೇಜರ್,ಟೆಕ್ನೀಶಿಯನ್ ಮತ್ತು ಫೋರ್‌ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನವೆಂಬರ್ 4,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆ,ವೇತನ ಮತ್ತು ಅರ್ಜಿ ಸಲ್ಲಿಸುವಿಕೆಯ ಬಗೆಗೆ ತಿಳಿಯಲು ಮುಂದೆ ಓದಿ.

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ದಲ್ಲಿ ವಿವಿಧ 8 ಹುದ್ದೆಗಳಿಗೆ ಅರ್ಜಿ ಆಹ್ವಾನ

ಹುದ್ದೆಗಳಿಗೆ ಕೇಳಲಾಗಿರುವ ವಿದ್ಯಾರ್ಹತೆ ಮತ್ತು ವೇತನದ ವಿವರ:

ಹುದ್ದೆಗಳ ಹೆಸರುವಿದ್ಯಾರ್ಹತೆವೇತನದ ವಿವರ
ಅಸಿಸ್ಟೆಂಟ್ ಮ್ಯಾನೇಜರ್ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ, ಪೋಸ್ಟ್ ಗ್ರಾಜುಯೇಶನ್ತಿಂಗಳಿಗೆ 52,650/- ರಿಂದ 97,100/-ರೂ
ಫೋರ್‌ಮ್ಯಾನ್ ಗ್ರೇಡ್ IIಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾತಿಂಗಳಿಗೆ 37,900/-ರಿಂದ 70,850/-ರೂ
ಟೆಕ್ನೀಶಿಯನ್ ಗ್ರೇಡ್ IIಡಿಪ್ಲೋಮಾತಿಂಗಳಿಗೆ 30,350/-ರಿಂದ 58,250/-ರೂ
ಟೆಕ್ನೀಶಿಯನ್ ಗ್ರೇಡ್ IIIಎನ್‌ಎಸಿ/ಡಿಪ್ಲೋಮಾತಿಂಗಳಿಗೆ 27,650/- ರಿಂದ 52,650/-ರೂ
ಟೆಕ್ನೀಶಿಯನ್ ಗ್ರೇಡ್ IVಎನ್‌ಸಿಟಿ/ಐಟಿಐತಿಂಗಳಿಗೆ 23,500/- ರಿಂದ 47,650/-ರೂ
ಅಸಿಸ್ಟೆಂಟ್ ಗ್ರೇಡ್ IIಡಿಪ್ಲೋಮಾ/ಪದವಿತಿಂಗಳಿಗೆ 27,650/- ರಿಂದ 52,650/-ರೂ

ವಯೋಮಿತಿ:

ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಗರಿಷ್ಟ 30 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಮತ್ತು ಇತರೆ ಹುದ್ದೆಗಳಿಗೆ ಗರಿಷ್ಟ 27 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1/ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕ ಪಾವತಿಸಬೇಕಿದ್ದು, ಸಾಮಾನ್ಯ ಅಭ್ಯರ್ಥಿಗಳು 500/-ರೂ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳು 250/-ರೂ ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕಿರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಅಧಿಕೃತ ವೆಬ್‌ಸೈಟ್‌ https://www.karnataka.gov.in/gttc/Pages/Home.aspx ಗೆ ಭೇಟಿ ನೀಡಿ ಅಧಿಸೂಚನೆಯನ್ನು ಓದಿಕೊಂಡು ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಕಚೇರಿಯ ವಿಳಾಸಕ್ಕೆ ನವೆಂಬರ್ 4,2019ರೊಳಗೆ ಪೋಸ್ಟ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ.

ಕಚೇರಿಯ ವಿಳಾಸ:

ವ್ಯವಸ್ಥಾಪಕ ನಿರ್ದೇಶಕ,
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ),
ರಾಜಾಜಿನಗರ ಇಂಡಸ್ಟ್ರಿಯಲ್ ಎಸ್ಟೇಟ್,
ಬೆಂಗಳೂರು-560010

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ

More News  

For Quick Alerts
ALLOW NOTIFICATIONS  
For Daily Alerts

English summary
Government tool room and training centre recruitment 2019 notification has been released on official website for the recruitment of various 8 posts. Interested candidates can apply before 4th november 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+