ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(HAL) ನೇಮಕಾತಿ 2 ವಿಸಿಟಿಂಗ್ ಕನ್ಸಲ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ https://hal-india.co.in/ ನಲ್ಲಿ ಈ ಹುದ್ದೆಳ ಬಗೆಗೆ ಮಾಹಿತಿಯನ್ನು ಓದಿಕೊಂಡು ನಂತರ ಅರ್ಜಿಯನ್ನು ನಮೂನೆಯ ನಿಗದಿತ ರೀತಿಯಲ್ಲಿ ಕಚೇರಿಗೆ ಪೋಸ್ಟ್ ಮೂಲಕ ಫೇಬ್ರವರಿ 28,2019 ರೊಳಗೆ ಕಳುಹಿಸಿ ಸಂದರ್ಶನದಲ್ಲಿಭಾಗವಹಿಸಬಹುದು.

| CRITERIA | DETAILS |
| Name Of The Posts | ವಿಸಿಟಿಂಗ್ ಕನ್ಸಲ್ಟೆಂಟ್ |
| Organisation | ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(HAL) |
| Educational Qualification | MBBS with DM/DNB,MDS |
| Job Location | ಬೆಂಗಳೂರು (ಕರ್ನಾಟಕ) |
| Application End Date | February 28, 2019 |
ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಎಂಬಿಬಿಎಸ್ ಜೊತೆಗೆ ಡಿಎಂ/ಡಿಎನ್ ಟಿ ಮತ್ತುಎಂಡಿಎಸ್ ವಿದ್ಯಾರ್ಹತೆಯನ್ನು ಹೊಂದಿರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಫೆಬ್ರವರಿ 28,2019 ರ ಅನ್ವಯ ಗರಿಷ್ಟ 65 ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ನೇರ ನೇಮಕಾತಿಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
ಅರ್ಜಿ ಸಲ್ಲಿಸುವ ಮತ್ತು ಸಂದರ್ಶನ ನಡೆಯುವ ಸ್ಥಳ:
ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ನಿಗದಿತ ನಮೂನೆಯ ರೀತಿಯಲ್ಲಿ ಅರ್ಜಿಗಳನ್ನು ಈ ಕೆಳಗಿನ ವಿಳಾಸಕ್ಕೆ ಫೆಬ್ರವರಿ 28,2019ರೊಳಗೆ ಪೋಸ್ಟ್ ಮೂಲಕ ಕಳುಹಿಸಬೇಕು ಮತ್ತು ಸಂದರ್ಶನಕ್ಕೆ ಕೆಳಗಿನ ವಿಳಾಸದಲ್ಲಿ ಫೆಬ್ರವರಿ 28,2019ರಂದು ಭಾಗವಹಿಸಬೇಕು.
ಸ್ಥಳ:
ಮ್ಯಾನೇಜರ್, ಮೆಡಿಕಲ್ ಮತ್ತು ಹೆಲ್ತ್ ಯುನಿಟ್, ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಬೆಂಗಳೂರು ಕಾಂಪ್ಲೆಕ್ಸ್), ಸುರಂಜನ್ ದಾಸ್ ರೋಡ್,(ಓಲ್ಡ್ ಏರ್ ಪೋರ್ಟ್ ರೋಡ್), ಬೆಂಗಳೂರು-560017.
ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











