HAL Recruitment 2021 : 11 ಸ್ಟಾಫ್ ನರ್ಸ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ನಲ್ಲಿ 11 ಸ್ಟಾಫ್ ನರ್ಸ್, ಫಿಸಿಯೋಥೆರಪಿಸ್ಟ್, ಫಾರ್ಮಾಸಿಸ್ಟ್ ಮತ್ತು ಡ್ರೆಸರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು.

ಬೆಂಗಳೂರಿನಲ್ಲಿ ಕೆಲಸ ಮಾಡಲು ಸಿದ್ದರಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ನವೆಂಬರ್ 24,2021 ರಿಂದ ಪ್ರಾರಂಭವಾಗಿ ಡಿಸೆಂಬರ್ 14,2021 ರಂದು ಕೊನೆಗೊಳ್ಳುತ್ತದೆ.

ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ ಉದ್ಯೋಗಾವಕಾಶ

ಹೆಚ್‌ಎಎಲ್ ನೇಮಕಾತಿ 2021 ಖಾಲಿ ಹುದ್ದೆಗಳ ವಿವರ:

ಸ್ಟಾಫ್ ನರ್ಸ್ - 7 ಹುದ್ದೆಗಳು
ಫಿಸಿಯೋಥೆರಪಿಸ್ಟ್ - 1 ಹುದ್ದೆ
ಫಾರ್ಮಾಸಿಸ್ಟ್ - 1 ಹುದ್ದೆ
ಡ್ರೆಸರ್ - 2 ಹುದ್ದೆಗಳು
ಒಟ್ಟು 11 ಹುದ್ದೆಗಳು

ಹೆಚ್‌ಎಎಲ್ ನೇಮಕಾತಿ 2021 ವಿದ್ಯಾರ್ಹತೆ ಮತ್ತು ಅನುಭವ :

ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ನೇಮಕಾತಿಯ ಸ್ಟಾಫ್ ನರ್ಸ್, ಫಿಸಿಯೋಥೆರಪಿಸ್ಟ್, ಫಾರ್ಮಾಸಿಸ್ಟ್ ಮತ್ತು ಡ್ರೆಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಜೊತೆಗೆ ಡಿಪ್ಲೋಮಾ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹೊಂದಿರಬೇಕು ಎಂದು ನೇಮಕಾತಿ ಅಧಿಸೂಚನೆ 2021ರಲ್ಲಿ ಸೂಚಿಸಲಾಗಿದೆ.

ಹೆಚ್‌ಎಎಲ್ ನೇಮಕಾತಿ 2021 ವಯೋಮಿತಿ :

ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ನೇಮಕಾತಿಯ ಸ್ಟಾಫ್ ನರ್ಸ್, ಫಿಸಿಯೋಥೆರಪಿಸ್ಟ್, ಫಾರ್ಮಾಸಿಸ್ಟ್ ಮತ್ತು ಡ್ರೆಸರ್ ಹುದ್ದೆಗಳಿಗೆ ಸೆಪ್ಟೆಂಬರ್ 1,2020ರ ಅನ್ವಯ ಗರಿಷ್ಟ 28 ವರ್ಷ ವಯಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಹೆಚ್‌ಎಎಲ್ ನೇಮಕಾತಿ 2021 ಆಯ್ಕೆ ಪ್ರಕ್ರಿಯೆ :

ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ನೇಮಕಾತಿಯ ಸ್ಟಾಫ್ ನರ್ಸ್, ಫಿಸಿಯೋಥೆರಪಿಸ್ಟ್, ಫಾರ್ಮಾಸಿಸ್ಟ್ ಮತ್ತು ಡ್ರೆಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನೀಡಲಾಗುವುದು. ಮೆರಿಟ್ ಆಧಾರದ ಮೇಲೆ ದಾಖಲೆ ಪರಿಶೀಲನೆಗೆ ಕರೆಯಲಾಗುವುದು ಈ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಹೆಚ್‌ಎಎಲ್ ನೇಮಕಾತಿ 2021 ವೇತನ :

ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ನೇಮಕಾತಿಯ ಸ್ಟಾಫ್ ನರ್ಸ್, ಫಿಸಿಯೋಥೆರಪಿಸ್ಟ್, ಫಾರ್ಮಾಸಿಸ್ಟ್ ಮತ್ತು ಡ್ರೆಸರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 35,555/- ರಿಂದ 37,383/-ರೂಗಳ ವರೆಗೆ ವೇತನವನ್ನು ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಹೆಚ್‌ಎಎಲ್ ನೇಮಕಾತಿ 2021 ಅರ್ಜಿ ಶುಲ್ಕ :

ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ನೇಮಕಾತಿಯ ಸ್ಟಾಫ್ ನರ್ಸ್, ಫಿಸಿಯೋಥೆರಪಿಸ್ಟ್, ಫಾರ್ಮಾಸಿಸ್ಟ್ ಮತ್ತು ಡ್ರೆಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 200/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

ಹೆಚ್‌ಎಎಲ್ ನೇಮಕಾತಿ 2021 ಅರ್ಜಿ ಸಲ್ಲಿಕೆ :

ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ನೇಮಕಾತಿಯ ಸ್ಟಾಫ್ ನರ್ಸ್, ಫಿಸಿಯೋಥೆರಪಿಸ್ಟ್, ಫಾರ್ಮಾಸಿಸ್ಟ್ ಮತ್ತು ಡ್ರೆಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ http://www.hal-india.co.in/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ನವೆಂಬರ್ 24,2021 ರಿಂದ ಡಿಸೆಂಬರ್ 14,2021ರ ರಾತ್ರಿ 12 ಗಂಟೆಯೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
HAL recruitment 2021 notification has been released for 11 staff nurse and various posts. Interested candidates can apply through online before December 14.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X