ದಿ ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಆಸ್ಪತ್ರೆಯಲ್ಲಿ 21 ಹುದ್ದೆಗಳ ನೇಮಕಾತಿ

ದಿ ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿಯ ಆಸ್ಪತ್ರೆಯಲ್ಲಿ ಖಾಲಿ ಇರುವ 21 ಸ್ಟಾಫ್ ನರ್ಸ್ ಮತ್ತು ಎಕ್ಸ್-ರೇ ಟೆಕ್ನಿಷೀಯನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಡಿಸೆಂಬರ್ 6,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

21  ಸ್ಟಾಫ್ ನರ್ಸ್ ಮತ್ತು ಎಕ್ಸ್-ರೇ ಟೆಕ್ನಿಷೀಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

CRITERIA DETAILS
Name Of The Posts ಸ್ಟಾಫ್ ನರ್ಸ್, ಎಕ್ಸ್-ರೇ ಟೆಕ್ನಿಷೀಯನ್
Organisation ದಿ ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್
Educational Qualification ಬಿ.ಎಸ್ಸಿ. ನರ್ಸಿಂಗ್/ ಪಿಯುಸಿ ಜೊತೆಗೆ ಡಿಪ್ಲೋಮಾ ಇನ್ ಜನರಲ್ ನರ್ಸಿಂಗ್,ಎಸ್‌.ಎಸ್‌.ಎಲ್‌.ಸಿ /ಪಿ.ಯು.ಸಿ ಜೊತೆಗೆ ಡಿಪ್ಲೋಮಾ-ಇನ್ ಎಕ್ಸ್- ರೇ ಟೆಕ್ನಷೀಯನ್
Job Location ರಾಯಚೂರು (ಕರ್ನಾಟಕ)
Salary Scale ಸ್ಟಾಫ್ ನರ್ಸ್ - ತಿಂಗಳಿಗೆ 14,520/- ರಿಂದ 27,170/-ರೂ ,ಎಕ್ಸ್-ರೇ ಟೆಕ್ನಿಷೀಯನ್ -ತಿಂಗಳಿಗೆ 12,130/-ರಿಂದ 24,850/-ರೂ
Application Start Date November 7, 2019
Application End Date December 6, 2019

ವಿದ್ಯಾರ್ಹತೆ:

ಸ್ಟಾಫ್ ನರ್ಸ್ ಹುದ್ದೆಗಳಿಗೆ ಬಿ.ಎಸ್ಸಿ. ನರ್ಸಿಂಗ್/ ಪಿಯುಸಿ ಜೊತೆಗೆ ಡಿಪ್ಲೋಮಾ ಇನ್ ಜನರಲ್ ನರ್ಸಿಂಗ್ ಮತ್ತು ಮಿಡ್ ವೈಫರಿ ಪರೀಕ್ಷೆಯನ್ನು ಸಾಮಾನ್ಯ ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆಯಿಂದ ಉತ್ತೀರ್ಣರಾಗಿದ್ದು ಜೊತೆಗೆ ಕನಿಷ್ಟ 3 ವರ್ಷಗಳ ಎಕ್ಸ್-ರೇ ಟೆಕ್ನಿ‍ಷೀಯನ್ ಆಗಿ ಸೇವೆ ಸಲ್ಲಿಸಿದ ಅನುಭವ ಕಡ್ಡಾಯವಾಗಿ ಹೊಂದಿರಬೇಕು. ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್‌ನಿಂದ ಪ್ರಮಾಣ ಪತ್ರವನ್ನು ನವೀಕರಿಸಿರಬೇಕು.

ಎಕ್ಸ್-ರೇ ಟೆಕ್ನಿಷೀಯನ್ ಹುದ್ದೆಗಳಿಗೆ ಎಸ್‌.ಎಸ್‌.ಎಲ್‌.ಸಿ /ಪಿ.ಯು.ಸಿ ಜೊತೆಗೆ ಡಿಪ್ಲೋಮಾ-ಇನ್ ಎಕ್ಸ್- ರೇ ಟೆಕ್ನಷೀಯನ್ ಪರೀಕ್ಷೆಯನ್ನು ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆಯಿಂದ ಪಾಸಾಗಿರಬೇಕು ಜೊತೆಗೆ ಕನಿಷ್ಟ 3 ವರ್ಷಗಳ ಎಕ್ಸ್-ರೇ ಟೆಕ್ನಿಷೀಯನ್ ಆಗಿ ಸೇವೆ ಸಲ್ಲಿಸಿದ ಅನುಭವ ಕಡ್ಡಾಯವಾಗಿ ಹೊಂದಿರಬೇಕು.

ವಯೋಮಿತಿ:

ಡಿಸೆಂಬರ್ 6,2019ರ ಅನ್ವಯ ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪ್ರವರ್ಗ-Iರ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ-2ಎ/2ಬಿ/3ಎ ಮತ್ತು3ಬಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ. ಅಭ್ಯರ್ಥಿಯು ಮಾಜಿ ಸೈನಿಕ/ವಿಧವೆಯಾಗಿದ್ದಲ್ಲಿ ಕರ್ನಾಟಕ ಸರ್ಕಾರದ ನೇಮಕಾತಿ ಆದೇಶದಂತೆ,ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ವೇತನದ ವಿವರ:

ಸ್ಟಾಫ್ ನರ್ಸ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 14,520/- ರಿಂದ 27,170/-ರೂ ಮತ್ತು ಎಕ್ಸ್-ರೇ ಟೆಕ್ನಿಷೀಯನ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 12,130/-ರಿಂದ 24,850/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, ಸಾಮಾನ್ಯ ಅಭ್ಯರ್ಥಿಗಳು 250/-ರೂ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-Iರ ಅಭ್ಯರ್ಥಿಗಳು 100/-ರೂ ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕಿರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ:

ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್‌ http://www.huttigold.co.in/ ಗೆ ಭೇಟಿ ನೀಡಿ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಯ ವಿಳಾಸಕ್ಕೆ ಡಿಸೆಂಬರ್ 6,2019ರೊಳಗೆ ಪೋಸ್ಟ್ ಮೂಲಕ ತಲುಪಿಸಬೇಕಿರುತ್ತದೆ.

ಕಚೇರಿಯ ವಿಳಾಸ:

ಮಾನ್ಯ ಪ್ರಭಾರಿ ಕಾರ್ಯನಿರ್ವಾಹಕ ನಿರ್ದೇಶಕರು,
ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ,
ಹಟ್ಟಿ-584115,
ರಾಯಚೂರು ಜಿಲ್ಲೆ,
ಕರ್ನಾಟಕ.

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.

More News  

For Quick Alerts
ALLOW NOTIFICATIONS  
For Daily Alerts

English summary
Hutti Gold Mines Company Limited (HGML) recruitment 2019 notification has been released in official website for the recruitment of 21 staff nurse and x ray technician posts. Interested candidates can apply before 6th december 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+