ದಿ ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿಯ ಆಸ್ಪತ್ರೆಯಲ್ಲಿ ಖಾಲಿ ಇರುವ 7 ಸ್ಟಾಫ್ ನರ್ಸ್ ಮತ್ತು ಎಕ್ಸ್-ರೇ ಟೆಕ್ನಿಷೀಯನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಡಿಸೆಂಬರ್ 7,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

| CRITERIA | DETAILS |
| Name Of The Posts | ಸ್ಟಾಫ್ ನರ್ಸ್,ಎಕ್ಸ್-ರೇ ಟೆಕ್ನಿಷೀಯನ್ |
| Organisation | ದಿ ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ |
| Educational Qualification | ಬಿ.ಎಸ್ಸಿ.ನರ್ಸಿಂಗ್/ ಪಿಯುಸಿ ಜೊತೆಗೆ ಡಿಪ್ಲೋಮಾ ಇನ್ ಜನರಲ್ ನರ್ಸಿಂಗ್,ಎಸ್.ಎಸ್.ಎಲ್.ಸಿ /ಪಿ.ಯು.ಸಿ ಜೊತೆಗೆ ಡಿಪ್ಲೋಮಾ-ಇನ್ ಎಕ್ಸ್-ರೇ ಟೆಕ್ನಷೀಯನ್ |
| Job Location | ರಾಯಚೂರು (ಕರ್ನಾಟಕ) |
| Salary Scale | ಸ್ಟಾಫ್ ನರ್ಸ್ - ತಿಂಗಳಿಗೆ 14,520/- ರಿಂದ 27,170/-ರೂ ,ಎಕ್ಸ್-ರೇ ಟೆಕ್ನಿಷೀಯನ್ -ತಿಂಗಳಿಗೆ 12,130/-ರಿಂದ 24,850/-ರೂ |
| Application Start Date | November 8, 2019 |
| Application End Date | December 7, 2019 |
ವಿದ್ಯಾರ್ಹತೆ:
ಸ್ಟಾಫ್ ನರ್ಸ್ ಹುದ್ದೆಗಳಿಗೆ ಬಿ.ಎಸ್ಸಿ. ನರ್ಸಿಂಗ್/ ಪಿಯುಸಿ ಜೊತೆಗೆ ಡಿಪ್ಲೋಮಾ ಇನ್ ಜನರಲ್ ನರ್ಸಿಂಗ್ ಮತ್ತು ಮಿಡ್ ವೈಫರಿ ಪರೀಕ್ಷೆಯನ್ನು ಸಾಮಾನ್ಯ ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆಯಿಂದ ಉತ್ತೀರ್ಣರಾಗಿದ್ದು ಜೊತೆಗೆ ಕನಿಷ್ಟ 3 ವರ್ಷಗಳ
ಎಕ್ಸ್-ರೇ ಟೆಕ್ನಿಷೀಯನ್ ಆಗಿ ಸೇವೆ ಸಲ್ಲಿಸಿದ ಅನುಭವ ಕಡ್ಡಾಯವಾಗಿ ಹೊಂದಿರಬೇಕು. ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್‌ನಿಂದ ಪ್ರಮಾಣ ಪತ್ರವನ್ನು ನವೀಕರಿಸಿರಬೇಕು.
ಎಕ್ಸ್-ರೇ ಟೆಕ್ನಿಷೀಯನ್ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ/ಪಿ.ಯು.ಸಿ ಜೊತೆಗೆ ಡಿಪ್ಲೋಮಾ-ಇನ್ ಎಕ್ಸ್- ರೇ ಟೆಕ್ನಷೀಯನ್
ಪರೀಕ್ಷೆಯನ್ನು ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆಯಿಂದ ಪಾಸಾಗಿರಬೇಕು ಜೊತೆಗೆ ಕನಿಷ್ಟ 3 ವರ್ಷಗಳ ಎಕ್ಸ್-ರೇ ಟೆಕ್ನಿಷೀಯನ್ ಆಗಿ ಸೇವೆ ಸಲ್ಲಿಸಿದ ಅನುಭವ ಕಡ್ಡಾಯವಾಗಿ ಹೊಂದಿರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 7,2019ರ ಅನ್ವಯ ಸಾಮಾನ್ಯ ಅಭ್ಯರ್ಥಿಗೆ 35 ವರ್ಷ, ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ, ಪ್ರವರ್ಗ-3ಬಿ ಗೆ ಗರಿಷ್ಟ 38 ವರ್ಷಗಳು ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ಕ್ಕೆ ಗರಿಷ್ಟ 40ವರ್ಷಗಳ ವಯೋಮಿತಿಯನ್ನು ಮೀರಿರಬಾರದು.
ಅಭ್ಯರ್ಥಿಯು ಮಾಜಿ ಸೈನಿಕ/ವಿಧವೆಯಾಗಿದ್ದಲ್ಲಿ ಕರ್ನಾಟಕ ಸರ್ಕಾರದ ನೇಮಕಾತಿ ಆದೇಶದಂತೆ, ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆಯನ್ನು ನೀಡಲಾಗಿರುತ್ತದೆ.
ವೇತನದ ವಿವರ:
ಸ್ಟಾಫ್ ನರ್ಸ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 14,520/- ರಿಂದ 27,170/-ರೂ ಮತ್ತು ಎಕ್ಸ್-ರೇ ಟೆಕ್ನಿಷೀಯನ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 12,130/-ರಿಂದ 24,850/-ರೂ ವೇತನವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, ಸಾಮಾನ್ಯ ಅಭ್ಯರ್ಥಿಗಳು 250/-ರೂ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1ರ ಅಭ್ಯರ್ಥಿಗಳು 100/-ರೂ ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕಿರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್ http://www.huttigold.co.in/ ಗೆ ಭೇಟಿ ನೀಡಿ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಯ ವಿಳಾಸಕ್ಕೆ ಡಿಸೆಂಬರ್ 7,2019ರೊಳಗೆ ಪೋಸ್ಟ್ ಮೂಲಕ ತಲುಪಿಸಬೇಕಿರುತ್ತದೆ.
ಕಚೇರಿಯ ವಿಳಾಸ:
ಮಾನ್ಯ ಪ್ರಭಾರಿ ಕಾರ್ಯನಿರ್ವಾಹಕ ನಿರ್ದೇಶಕರು,
ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ,
ಹಟ್ಟಿ-584115,
ರಾಯಚೂರು ಜಿಲ್ಲೆ,
ಕರ್ನಾಟಕ.
ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.


Click it and Unblock the Notifications











