ಹೆಚ್‌ಎಂಟಿಯಲ್ಲಿ 8 ಪ್ರಾಜೆಕ್ಟ್ ಡೆಪ್ಯುಟಿ ಇಂಜಿನಿಯರ್ ಮತ್ತು ಪ್ರಾಜೆಕ್ಟ್ ಸೀನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿ

ಹಿಂದೂಸ್ಥಾನ್ ಮೆಶಿನ್ ಟೂಲ್ಸ್ ಲಿಮಿಟೆಡ್ (ಹೆಚ್‌ಎಂಟಿ ಲಿಮಿಟೆಡ್) 8 ಪ್ರಾಜೆಕ್ಟ್ ಡೆಪ್ಯುಟಿ ಇಂಜಿನಿಯರ್ ಮತ್ತು ಪ್ರಾಜೆಕ್ಟ್ ಸೀನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಡಿಸೆಂಬರ್ 13,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

ಹೆಚ್‌ಎಂಟಿಯಲ್ಲಿ ಉದ್ಯೋಗಾವಕಾಶ….ಡಿ.13ರೊಳಗೆ ಅರ್ಜಿ ಹಾಕಿ

CRITERIA DETAILS
Name Of The Posts ಪ್ರಾಜೆಕ್ಟ್ ಡೆಪ್ಯುಟಿ ಇಂಜಿನಿಯರ್, ಪ್ರಾಜೆಕ್ಟ್ ಸೀನಿಯರ್ ಇಂಜಿನಿಯರ್
Organisation ಹಿಂದೂಸ್ಥಾನ್ ಮೆಶಿನ್ ಟೂಲ್ಸ್ ಲಿಮಿಟೆಡ್ (ಹೆಚ್‌ಎಂಟಿ ಲಿಮಿಟೆಡ್)
Educational Qualification ಇಂಜಿನಿಯರಿಂಗ್‌ ಪದವಿ
Job Location ಭಾರತದೆಲ್ಲೆಡೆ
Salary Scale ಪ್ರಾಜೆಕ್ಟ್ ಸೀನಿಯರ್ ಇಂಜಿನಿಯರ್ -ತಿಂಗಳಿಗೆ 13,000/- ರಿಂದ 18,250/-ರೂ ಮತ್ತು ಪ್ರಾಜೆಕ್ಟ್ ಡೆಪ್ಯುಟಿ ಇಂಜಿನಿಯರ್ -ತಿಂಗಳಿಗೆ 8,600/- ರಿಂದ 14,600/-ರೂ
Application Start Date November 28, 2019
Application End Date December 13, 2019

ವಿದ್ಯಾರ್ಹತೆ:

ಪ್ರಾಜೆಕ್ಟ್ ಡೆಪ್ಯುಟಿ ಇಂಜಿನಿಯರ್ ಮತ್ತು ಪ್ರಾಜೆಕ್ಟ್ ಸೀನಿಯರ್ ಇಂಜಿನಿಯರ್ ಹುದ್ದೆಗಳಿಗೆ ಇಂಜಿನಿಯರಿಂಗ್‌ನಲ್ಲಿ ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:

ನವೆಂಬರ್ 1,2019ರ ಅನ್ವಯ ಹುದ್ದೆಗಳಿಗನುಸಾರ ಗರಿಷ್ಟ 35, 40 ಮತ್ತು 50 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನದ ವಿವರ:

ಪ್ರಾಜೆಕ್ಟ್ ಸೀನಿಯರ್ ಇಂಜಿನಿಯರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 13,000/- ರಿಂದ 18,250/-ರೂ ಮತ್ತು ಪ್ರಾಜೆಕ್ಟ್ ಡೆಪ್ಯುಟಿ ಇಂಜಿನಿಯರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 8,600/- ರಿಂದ 14,600/-ರೂ ವೇತನವನ್ನು ನೀಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕ ಪಾವತಿಸಬೇಕಿದ್ದು, ಸಾಮಾನ್ಯ ಅಭ್ಯರ್ಥಿಗಳು 750/-ರೂ ಮತ್ತು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 250/-ರೂ ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕಿರುತ್ತದೆ. ಅಂಗವಿಕಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಹಿಂದೂಸ್ಥಾನ್ ಮೆಶಿನ್ ಟೂಲ್ಸ್ ಲಿಮಿಟೆಡ್ (ಹೆಚ್‌ಎಂಟಿ ಲಿಮಿಟೆಡ್)ನ ಅಧಿಕೃತ ವೆಬ್‌ಸೈಟ್‌ http://www.hmtindia.com/ ಗೆ ಹೋಗಿ ಅಧಿಸೂಚನೆಯನ್ನು ಓದಬಹುದು. ಅಭ್ಯರ್ಥಿಯು ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿದ್ದಲ್ಲಿ ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿ ಫಾರ್ಮ್ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಯ ವಿಳಾಸಕ್ಕೆ ಕಳುಹಿಸಬೇಕಿರುತ್ತದೆ ಮತ್ತು [email protected]. ವಿಳಾಸಕ್ಕೆ ಡಿಸೆಂಬರ್ 13,2019ರೊಳಗೆ ಮೇಲ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ.

ಕಚೇರಿಯ ವಿಳಾಸ :

ಡೆಪ್ಯುಟಿ ಜನರಲ್ ಮ್ಯಾನೇಜರ್ (ಎಚ್ಆರ್),
ಹಿಂದೂಸ್ಥಾನ್ ಮೆಶಿನ್ ಟೂಲ್ಸ್ ಲಿಮಿಟೆಡ್ (ಹೆಚ್‌ಎಂಟಿ ಲಿಮಿಟೆಡ್),
ಬೀವರ್ ರಸ್ತೆ,
ಅಜ್ಮೀರ್ - 305003.

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.

For Quick Alerts
ALLOW NOTIFICATIONS  
For Daily Alerts

English summary
HMT recruitment 2019 notification has been released on official website for the recruitment of 8 Project Deputy Engineer & Senior Engineer Posts. Interested candidates can apply before 13th December 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X