HMT Recruitment 2020: 5 ವ್ಯವಸ್ಥಾಪಕ ಮತ್ತು ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹಿಂದೂಸ್ಥಾನ್ ಮೆಶಿನ್ ಟೂಲ್ಸ್ ಲಿಮಿಟೆಡ್ (ಹೆಚ್‌ಎಂಟಿ ಲಿಮಿಟೆಡ್) 5 ಜನರಲ್ ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್ ಮತ್ತು ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು.

ಹೆಚ್‌ಎಂಟಿಯಲ್ಲಿ ಉದ್ಯೋಗಾವಕಾಶ….ಮಾ.10ರೊಳಗೆ ಅರ್ಜಿ ಹಾಕಿ

ಅರ್ಹ ಅಭ್ಯರ್ಥಿಗಳು ಮಾರ್ಚ್ 10,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

CRITERIA DETAILS
Name Of The Posts ಜನರಲ್ ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್ ಮತ್ತು ಅಧಿಕಾರಿ
Organisation ಹಿಂದೂಸ್ಥಾನ್ ಮೆಶಿನ್ ಟೂಲ್ಸ್ ಲಿಮಿಟೆಡ್ (ಹೆಚ್‌ಎಂಟಿ ಲಿಮಿಟೆಡ್)
Educational Qualification ಸ್ನಾತಕೋತ್ತರ ಪದವಿ,ಸಿಎ/ಸಿಎಂಎ/ಐಸಿಡಬ್ಲ್ಯೂಎ ಮತ್ತು ಬಿ.ಇ ಜೊತೆಗೆ ಎಂಬಿಎ
Job Location ಭಾರತದೆಲ್ಲೆಡೆ
Salary Scale ಜನರಲ್ ಮ್ಯಾನೇಜರ್ -ತಿಂಗಳಿಗೆ 51,300/-ರಿಂದ 73,000/-ರೂ,ಡೆಪ್ಯುಟಿ ಮ್ಯಾನೇಜರ್ -ತಿಂಗಳಿಗೆ 20,600/-ರಿಂದ 46,500/-ರೂ ಮತ್ತು ಅಧಿಕಾರಿ -ತಿಂಗಳಿಗೆ 16,400/-ರಿಂದ 40,500/-ರೂ
Application Start Date February 18, 2020
Application End Date March 10, 2020

ವಿದ್ಯಾರ್ಹತೆ:

ಜನರಲ್ ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್ ಮತ್ತು ಅಧಿಕಾರಿ ಹುದ್ದೆಗಳಿಗೆ ಸ್ನಾತಕೋತ್ತರ ಪದವಿ,ಸಿಎ/ಸಿಎಂಎ/ಐಸಿಡಬ್ಲ್ಯೂಎ ಮತ್ತು ಬಿ.ಇ ಜೊತೆಗೆ ಎಂಬಿಎ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ /ಬೋರ್ಡ್/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:

ಫೆಬ್ರವರಿ 1,2020ರ ಅನ್ವಯ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ 47 ರಿಂದ 52 ವರ್ಷ, ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿಗೆ ಗರಿಷ್ಟ 32 ವರ್ಷ ಮತ್ತು ಅಧಿಕಾರಿ ಹುದ್ದೆಗಳಿಗೆ ಗರಿಷ್ಟ 30 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನದ ವಿವರ:

ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 51,300/-ರಿಂದ 73,000/-ರೂ,ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 20,600/-ರಿಂದ 46,500/-ರೂ ಮತ್ತು ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 16,400/-ರಿಂದ 40,500/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅರ್ಜಿದಾರರ ಕಿರುಪಟ್ಟಿಯನ್ನು ಮಾಡಿ ಸಂದರ್ಶನಕ್ಕೆ ಕರೆಯಲಾಗವುದು.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕ ಪಾವತಿಸಬೇಕಿದ್ದು, ಸಾಮಾನ್ಯ/ಓಬಿಸಿ/ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು 750/-ರೂ ಮತ್ತು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 250/-ರೂ ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕಿರುತ್ತದೆ. ಅಂಗವಿಕಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಹಿಂದೂಸ್ಥಾನ್ ಮೆಶಿನ್ ಟೂಲ್ಸ್ ಲಿಮಿಟೆಡ್ (ಹೆಚ್‌ಎಂಟಿ ಲಿಮಿಟೆಡ್)ನ ಅಧಿಕೃತ ವೆಬ್‌ಸೈಟ್‌ http://www.hmtindia.com/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಯ ವಿಳಾಸಕ್ಕೆ ಮಾರ್ಚ್ 10,2020ರೊಳಗೆ ಪೋಸ್ಟ್/ಕೊರಿಯರ್ ಮೂಲಕ ತಲುಪಿಸಬೇಕಿರುತ್ತದೆ.

ಕಚೇರಿಯ ವಿಳಾಸ :

ದಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಸಿಎಚ್ಆರ್),
ಹಿಂದೂಸ್ಥಾನ್ ಮೆಶಿನ್ ಟೂಲ್ಸ್ ಲಿಮಿಟೆಡ್ (ಹೆಚ್‌ಎಂಟಿ ಲಿಮಿಟೆಡ್),
ಹೆಚ್‌ಎಂಟಿ ಭವನ್,
ನಂ.59, ಬಳ್ಳಾರಿ ರಸ್ತೆ,
ಬೆಂಗಳೂರು-560032.

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
HMT recruitment 2020 notification has been released on official website for the recruitment of 5 Manager And Officer Posts. Interested candidates can apply before 10th March 2020.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+