IDBI Recruitment 2022 : 1044 ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಸ್ಟ್ರಿಯಲ್ ಡೆವಲಪ್ಮೆಂಟ್‌ ಬ್ಯಾಂಕ್ ಆಫ್ ಇಂಡಿಯಾ (ಐಡಿಬಿಐ) ನಲ್ಲಿಅವಶ್ಯವಿರುವ 1044 ಎಕ್ಸಿಕ್ಯೂಟಿವ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಐಡಿಬಿಐ ನಲ್ಲಿ 1044 ಎಕ್ಸಿಕ್ಯುಟಿವ್ ಹುದ್ದೆಗಳ ನೇಮಕಾತಿ

ಭಾರತದಾದ್ಯಂತ ಇರುವ ಶಾಖೆಗಳಲ್ಲಿ ನೇಮಕಾತಿ ನಡೆಯುತ್ತಿದ್ದು, ಒಟ್ಟು 1044 ಹುದ್ದೆಗಳಿಗೆ ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಜೂನ್ 3 ರಿಂದ ಜೂನ್ 17,2022ರೊಳಗೆ ಸಲ್ಲಿಸಬಹುದು. ನೇಮಕಾತಿ ಬಗೆಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು ಮುಂದೆ ನೋಡಿ.

ವಿದ್ಯಾರ್ಹತೆ :

ವಿದ್ಯಾರ್ಹತೆ :

ಐಡಿಬಿಐ ಬ್ಯಾಂಕ್ ನೇಮಕಾತಿಯ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಯಾವುದೇ ಪದವಿಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ವಯೋಮಿತಿ :

ವಯೋಮಿತಿ :

ಏಪ್ರಿಲ್ 1,2022ರ ಅನ್ವಯ ಕನಿಷ್ಟ 20 ರಿಂದ ಗರಿಷ್ಟ 25 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು. ಪ.ಜಾ/ಪ.ಪಂ/ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ವೇತನ :

ವೇತನ :

ಐಡಿಬಿಐ ಬ್ಯಾಂಕ್ ನೇಮಕಾತಿಯ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 29,000/- ರಿಂದ 34,000/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

ಅರ್ಜಿ ಶುಲ್ಕ :

ಅರ್ಜಿ ಶುಲ್ಕ :

ಐಡಿಬಿಐ ಬ್ಯಾಂಕ್ ನೇಮಕಾತಿಯ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 1000/-ರೂ ಮತ್ತು ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳು 200/-ರೂ ಅರ್ಜಿ ಶುಲ್ಕವನ್ನು ಆನ್-ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಶುಲ್ಕ ಪಾವತಿಸಲು ಜೂನ್ 17,2022 ಕೊನೆಯ ದಿನವಾಗಿರುತ್ತದೆ.

ಆಯ್ಕೆ ವಿಧಾನ :

ಆಯ್ಕೆ ವಿಧಾನ :

ಐಡಿಬಿಐ ಬ್ಯಾಂಕ್ ನೇಮಕಾತಿಯ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆನ್-ಲೈನ್ ಪರೀಕ್ಷೆ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಆನ್‌ಲೈನ್ ಪರೀಕ್ಷೆಯನ್ನು ಜುಲೈ ೯ರಂದು ನಡೆಸಲಾಗುತ್ತಿದೆ.

ಪ್ರಮುಖ ದಿನಾಂಕಗಳು :

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಜೂನ್‌ 3,2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜೂನ್ 17,2022
ಆನ್‌ಲೈನ್ ಪರೀಕ್ಷೆ ನಡೆಯುವ ದಿನಾಂಕ : ಜುಲೈ 9,2022

ಅರ್ಜಿ ಸಲ್ಲಿಕೆ :

ಅರ್ಜಿ ಸಲ್ಲಿಕೆ :

ಐಡಿಬಿಐ ಬ್ಯಾಂಕ್ ನೇಮಕಾತಿಯ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್‌ ನಲ್ಲಿ ಅಧಿಕೃತ ವೆಬ್‌ಸೈಟ್ https://idbibank.in/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅರ್ಜಿ ಶುಲ್ಕ ಪಾವತಿಸುವ ಮೂಲಕ ಜೂನ್ 3 ರಿಂದ ಜೂನ್ 17,2022ರೊಳಗೆ ಅರ್ಜಿಯನ್ನು ಹಾಕಬಹುದು.

ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
IDBI recruitment 2022 notification has been released for 1044 executive posts. Interested candidates can apply online before June 17.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X