ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಫೆಸಿಲಿಟಿ ಮ್ಯಾನೇಜರ್ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಮಾರ್ಚ್ 1,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ನೇಮಕಾತಿ ಬಗೆಗೆ ಸಂಪೂರ್ಣ ಮಾಹಿತಿ ಪಡೆಯಲು ಮುಂದೆ ಓದಿ.

ವಿದ್ಯಾರ್ಹತೆ:
ಎಂ.ಇ ಅಥವಾ ಪಿಹೆಚ್.ಡಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
ವಯೋಮಿತಿ:
ಮಾರ್ಚ್ 1,2021ರ ಅನ್ವಯ ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
ವೇತನ:
ಫೆಸಿಲಿಟಿ ಮ್ಯಾನೇಜರ್ ಹುದ್ದೆಗಳಿಗೆ ಅಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 1,00,000/- ರಿಂದ 2,00,000/-ರೂ ವೇತನವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಅರ್ಜಿದಾರರ ಕಿರುಪಟ್ಟಿಯನ್ನು ಮಾಡಿ ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಅಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
ಅರ್ಜಿ ಸಲ್ಲಿಕೆ:
ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ [email protected] ವಿಳಾಸಕ್ಕೆ ಮೇಲ್ ಮಾಡುವ ಮೂಲಕ ಮಾರ್ಚ್ 1,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಅಭ್ಯರ್ಥಿಗಳು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಧಿಕೃತ ವೆಬ್‌ಸೈಟ್ ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ ಮತ್ತು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications











