ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಜಮ್ಮುವಿನಲ್ಲಿ ರಿಜಿಸ್ಟ್ರಾರ್, ಜ್ಯೂನಿಯರ್ ಅಸಿಸ್ಟೆಂಟ್,ಜ್ಯೂನಿಯರ್ ಇಂಜಿನಿಯರ್ ಮತ್ತು ಇತರೆ 52 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ನಲ್ಲಿ ನೇಮಕಾತಿಯ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಫೆಬ್ರವರಿ25,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

| CRITERIA | DETAILS |
| Name Of The Posts | ಜ್ಯೂನಿಯರ್ ಇಂಜಿನಿಯರ್,ರಿಜಿಸ್ಟ್ರಾರ್,ಜ್ಯೂನಿಯರ್ ಅಸಿಸ್ಟೆಂಟ್ ಮತ್ತು ಇತರೆ ಹುದ್ದೆಗಳು |
| Organisation | ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ |
| Educational Qualification | ಬಿ.ಇ/ಬಿ.ಟೆಕ್ |
| Job Location | ಜಮ್ಮು |
| Application Start Date | February 18, 2019 |
| Application End Date | February 25, 2019 |
ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಇ/ಬಿ.ಟೆಕ್ ಅನ್ನು ಇಲೆಕ್ಟ್ರಿಕಲ್ / ಮೆಕ್ಯಾನಿಕಲ್ /ಸಿವಿಲ್ /ಇಲೆಕ್ಟ್ರಾನಿಕ್ಸ್ / ಇನ್ಸ್ಟ್ರುಮೆಂಟೇಶನ್ ನಲ್ಲಿ ಕನಿಷ್ಟ 65%ರಷ್ಟು ಅಂಕಗಳೊಂದಿಗೆ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ:
ರಿಜಿಸ್ಟ್ರಾರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 55 ವರ್ಷ, ಸೀನಿಯರ್ ಟೆಕ್ನಿಕಲ್ ಆಫೀಸರ್/ ಸೈಂಟಿಫಿಕ್ ಆಫೀಸರ್ ಗೆ 45 ವರ್ಷ, ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ (ಸಿವಿಲ್) ಹುದ್ದೆಗಳಿಗೆ 45 ವರ್ಷ, ಸ್ಟೂಡೆಂಟ್ ಕೌನ್ಸೆಲರ್ ಮತ್ತು ಸ್ಟೂಡೆಂಟ್ಸ್ ಔಟ್‌ರೀಚ್ ಕೋ-ಆರ್ಡಿನೇಟರ್ 40 ವರ್ಷ, ಅಸಿಸ್ಟೆಂಟ್ ರಿಜಿಸ್ಟ್ರಾರ್ (ಆಡ್ಮಿನ./ಅಕೌಂಟ್ಸ್/ಆಡಿಟ್) 40 ವರ್ಷ, ಟೆಕ್ನಿಕಲ್ ಆಫೀಸರ್ ಹುದ್ದೆಗಳಿಗೆ 40 ವರ್ಷ, ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ಆಫೀಸರ್ ಹುದ್ದೆಗಳಿಗೆ 40 ವರ್ಷ, ಅಸಿಸ್ಟೆಂಟ್ ಇಂಜಿನಿಯರ್ (ಸಿವಿಲ್/ಇಲೆಕ್ಟ್ರಿಕಲ್) ಹುದ್ದೆಗಳಿಗೆ 40 ವರ್ಷ, ಜ್ಯೂನಿಯರ್ ಸೂಪರಿಂಟೆಂಡೆಂಟ್ 35 ವರ್ಷಗಳು , ಜ್ಯೂನಿಯರ್ ಟೆಕ್ನಿಕಲ್ ಸೂಪರಿಂಟೆಂಡೆಂಟ್ (JTS) ಹುದ್ದೆಗಳಿಗೆ 35 ವರ್ಷಗಳು, ಜ್ಯೂನಿಯರ್ ಇಂಜಿನಿಯರ್ (ಸಿವಿಲ್/ಇಲೆಕ್ಟ್ರಿಕಲ್) 35 ವರ್ಷಗಳು,ಕೇರ್ ಟೇಕರ್-ಕಮ್-ಮ್ಯಾನೇಜರ್ ಹುದ್ದೆಗಳಿಗೆ 35 ವರ್ಷಗಳು,ಸೀನಿಯರ್ ಲ್ಯಾಬೋರೇಟರಿ/ಅಸಿಸ್ಟೆಂಟ್/ಸೀನಿಯರ್ ಮೆಕ್ಯಾನಿಕ್ 33 ವರ್ಷಗಳು, ಸೀನಿಯರ್ ಅಸಿಸ್ಟೆಂಟ್ 33 ವರ್ಷಗಳು,ಲೈಬ್ರರಿ ಅಸಿಸ್ಟೆಂಟ್ (ಅಡ್ಮಿನಿಸ್ಟ್ರೇಷನ್),ಜ್ಯೂನಿಯರ್ ಅಸಿಸ್ಟೆಂಟ್ (ಅಕೌಂಟ್ಸ್) ಮತ್ತು ಜ್ಯೂನಿಯರ್ ಅಸಿಸ್ಟೆಂಟ್ (ಕೇರ್‌ಟೇಕರ್) ಹುದ್ದೆಗಳಿಗೆ 30 ವರ್ಷ ವಯೋಮಿತಿಯೊಳಗಿನವರಾಗಿರಬೇಕು.
ವೇತನದ ವಿವರ:
ಹುದ್ದೆಗಳಿಗೆ ನೀಡಲಾಗುವ ವೇತನದ ವಿವರವನ್ನು ತಿಳಿಯಲು ಅಧಿಕೃತ ಮಾಹಿತಿಯನ್ನು ಓದಿ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಟ್ರೇಡ್ ಪರೀಕ್ಷೆ ಮತ್ತು ಕಂಪ್ಯೂಟರ್ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು ಗ್ರೂಪ್ A ಹುದ್ದೆಗಳಿಗೆ ರೂ.200/-, ಗ್ರೂಪ್ B&C ಹುದ್ದೆಗಳಿಗೆ ರೂ.100/- ಶುಲ್ಕವನ್ನು ಐಸಿಐಸಿಐ ಕಲೆಕ್ಟ್ ಮೂಲಕ ಪಾವತಿಸಬಹುದು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.
ಅರ್ಜಿಯನ್ನು ಸಲ್ಲಿಸುವುದು ಹೇಗೆ:
ಸ್ಟೆಪ್ 1:ಅಭ್ಯರ್ಥಿಗಳು ಐಐಟಿಯ ಅಧಿಕೃತ ವೆಬ್‌ಸೈಟ್ http://iitjammu.ac.in/ ಗೆ ಲಾಗಿನ್ ಆಗಿ.
ಸ್ಟೆಪ್2:ನಂತರ Career Page ಗೆ ಹೋಗಿ.
ಸ್ಟೆಪ್3:ನಂತರ ಹುದ್ದೆಗಳ ಬಗೆಗಿನ ಅಡ್ವರ್‌ಟೈಸ್ಮೆಂಟ್ ಮೇಲೆ ಕ್ಲಿಕ್ ಮಾಡಿ,
ಸ್ಟೆಪ್4:ನಂತರ ಅಧಿಕೃತ ಮಾಹಿತಿಯನ್ನು ಓದಿ ನಂತರ "Click here to Apply" ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್5: ಅರ್ಜಿಯನ್ನು ಭರ್ತಿ ಮಾಡಿ. ಅರ್ಜಿಯಲ್ಲಿ ಕೇಳಲಾಗಿರುವ ದಾಖಲೆಗಳನ್ನು,ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
ಸ್ಟೆಪ್6: ನಂತರ ಅರ್ಜಿ ಶುಲ್ಕವನ್ನು ಪಾವತಿಸಿ ನಂತರ ಅರ್ಜಿಯನ್ನು ಸಲ್ಲಿಸಿ.
ಅರ್ಜಿಯ ಒಂದು ಪ್ರಿಂಟೌಟ್ ಅನ್ನು ತೆಗೆದುಕೊಳ್ಳಿ.
ಈ ಹುದ್ದೆಗಳ ಬಗೆಗೆ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











