ಭಾರತೀಯ ಸೇನಾ ನೇಮಕಾತಿ 100 ಸೈನಿಕ ( ಮಹಿಳಾ ಮಿಲಿಟರಿ ಪೊಲೀಸ್) ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಸೇನಾ ನೇಮಕಾತಿ 100 ( ಮಹಿಳಾ ಮಿಲಿಟರಿ ಪೊಲೀಸ್) ಸೈನಿಕ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಭಾರತೀಯ ಸೇನೆಯಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಜನರಲ್ ಡ್ಯೂಟಿ ಹುದ್ದೆಗಳಿಗೆ ಭರ್ತಿ ಮಾಡಲು ಅಂಬಾಲ, ಲಕ್ನೌ,ಜಬಲ್‌ಪುರ್,ಬೆಂಗಳೂರು ಮತ್ತು ಶಿಲ್ಲಾಂಗ್ ಗಳಲ್ಲಿ ರ್ಯಾಲಿ ನಡೆಸಲಾಗುತ್ತಿದೆ. ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಲು ಆನ್‌ಲೈನ್‌ನಲ್ಲಿ ಜೂನ್ 8,2019 ರೊಳಗೆ ರಿಜಿಸ್ಟರ್ ಮಾಡಿಕೊಳ್ಳಬಹುದು.

ಭಾರತೀಯ ಸೇನೆಯಲ್ಲಿ  ಸೈನಿಕ ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

 

CRITERIA DETAILS
Name Of The Posts ಸೈನಿಕ
Organisation ಭಾರತೀಯ ಸೇನೆ
Educational Qualification ಮೆಟ್ರಿಕ್ / 10 ನೇ ತರಗತಿ ಅಥವಾ ಸಮನಾದ ವಿದ್ಯಾರ್ಹತೆ
Job Location ಭಾರತದೆಲ್ಲೆಡೆ
Application Start Date April 25, 2019
Application End Date June 8, 2019

ಶೈಕ್ಷಣಿಕ ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಮೆಟ್ರಿಕ್ / 10 ನೇ ತರಗತಿ ಅಥವಾ ಸಮನಾದ ವಿದ್ಯಾರ್ಹತೆಯನ್ನು ಶೇ45% ರಷ್ಟು ಅಂಕಗಳೊಂದಿಗೆ , ಪ್ರತಿ ವಿಷಯದಲ್ಲಿ ಕನಿಷ್ಟ 33% ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:

ಈ ಹುದ್ದೆಗಳಿಗೆ ಕನಿಷ್ಟ 17 1/2 ವರ್ಷ ದಿಂದ ಗರಿಷ್ಟ 21 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ :

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ / ವೈದ್ಯಕೀಯ ಪರೀಕ್ಷೆ / ಫಿಸಿಕಲ್ ಫಿಟ್ನೆಸ್ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಬಹುದು. ಅಧಿಸೂಚನೆಯನ್ನು ಓದಿದ ಅಭ್ಯರ್ಥಿಗಳು ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿದ್ದಲ್ಲಿ ನೇಮಕಾತಿಗಾಗಿ ನಡೆಯುವ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಜೂನ್ 8,2019 ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ನಂತರ ಅಂಬಾಲ, ಲಕ್ನೌ,ಜಬಲ್‌ಪುರ್,ಬೆಂಗಳೂರು ಮತ್ತು ಶಿಲ್ಲಾಂಗ್ ಗಳಲ್ಲಿ ನಡೆಸುವ ರ್ಯಾಲಿಯಲ್ಲಿ ನೊಂದಾಯಿತ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು.

 

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Indian army recruitment 2019 notification has been released on official website for the recruitment of 100 soldier GD posts. Interested candidates can register through online before 8th june 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X