ಭಾರತೀಯ ಸೇನೆ ನೇಮಕಾತಿ 2019 : ಆಸಕ್ತರು ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ

ಭಾರತೀಯ ಸೇನೆಗೆ ಸೇರಲು ಇಚ್ಛಿಸುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಸೇನೆಯು ಸಿಪಾಯಿ ಫಾರ್ಮಾ ವಿಭಾಗದಲ್ಲಿನ ಸೈನಿಕ ಹುದ್ದೆಗಳ ನೇಮಕಾತಿ ಮಾಡಲು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ರ‍್ಯಾಲಿ ನಡೆಸಲಿದೆ. ಫಾರ್ಮಾಕ್ಯುಟಿಕಲ್‌ ವಿಷಯದಲ್ಲಿ ಡಿಪ್ಲೊಮಾ ಅಥವಾ ಪದವಿ ಪಡೆದ ಅಭ್ಯರ್ಥಿಗಳು ಈ ರ್ಯಾಲಿಯಲ್ಲಿ ಪಾಲ್ಗೊಳ್ಳಬಹುದು.

ಫಾರ್ಮಾ ಸಿಪಾಯಿ ವಿಭಾಗಕ್ಕೆ ನಡೆಸಲಾಗುವ ನೇಮಕಾತಿಯ ರ‍್ಯಾಲಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದು. ಈ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಸಿದ್ಧರಿದ್ದೀರಾ ಹಾಗಿದ್ದರೆ ಏನೆಲ್ಲಾ ಅರ್ಹತೆಗಳಿರಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

ಭಾರತೀಯ ಸೇನೆ ನಡೆಸುವ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಇಂದೇ ಅರ್ಜಿ ಹಾಕಿ

ಶೈಕ್ಷಣಿಕ ವಿದ್ಯಾರ್ಹತೆ:

ಶೈಕ್ಷಣಿಕ ವಿದ್ಯಾರ್ಹತೆ:

ಪಿಯುಸಿ ವಿದ್ಯಾರ್ಹತೆಯೊಂದಿಗೆ ರಾಜ್ಯ ಫಾರ್ಮಾಕ್ಯುಟಿಕಲ್‌ ಕೌನ್ಸಿಲ್‌/ಭಾರತೀಯ ಫಾರ್ಮಸಿ ಕೌನ್ಸಿಲ್‌ನಲ್ಲಿ ನೋಂದಣಿಯಾದ ಸಂಸ್ಥೆಯಿಂದ ಕನಿಷ್ಠ 55% ರಷ್ಟು ಅಂಕದೊಂದಿಗೆ ಡಿ ಫಾರ್ಮಾವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಶೇಕಡ 50%ರಷ್ಟು ಅಂಕದೊಂದಿಗೆ ಬಿ ಫಾರ್ಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳೂ ಕೂಡ ಅರ್ಜಿಯನ್ನು ಸಲ್ಲಿಸಬಹುದು.

 

ವಯೋಮಿತಿ ಏನಿರಬೇಕು:

ವಯೋಮಿತಿ ಏನಿರಬೇಕು:

ಕನಿಷ್ಠ 19 ರಿಂದ ಗರಿಷ್ಠ 25 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಳ್ಳಬಹುದು. ಅಂದರೆ, ಅಕ್ಟೋಬರ್‌ 1, 1994ರಿಂದ ಸೆಪ್ಟೆಂಬರ್‌ 30, 2000ರ ನಡುವೆ ಜನಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

 

 

ದೈಹಿಕ ಅರ್ಹತೆಗಳೇನಿರಬೇಕು ? :

ದೈಹಿಕ ಅರ್ಹತೆಗಳೇನಿರಬೇಕು ? :

ಅಭ್ಯರ್ಥಿಯು ಕನಿಷ್ಠ ಎತ್ತರ 166 ಸೆಂ.ಮೀ., ತೂಕ 50 ಕೆ.ಜಿ ಮತ್ತು ಎದೆಯ ಸುತ್ತಳತೆ 77 ಸೆಂ.ಮಿ. (5 ಸೆಂ.ಮೀ. ವಿಸ್ತರಣೆ ಸಾಮರ್ಥ್ಯ‌) ಇರಬೇಕು.

 

ರ್ಯಾಲಿಯಲ್ಲಿ ಭಾಗವಹಿಸುವುದು ಹೇಗೆ ? :

ರ್ಯಾಲಿಯಲ್ಲಿ ಭಾಗವಹಿಸುವುದು ಹೇಗೆ ? :

ಸೆಪ್ಟೆಂಬರ್‌ 29 ರಿಂದ ಅಕ್ಟೋಬರ್ 4ರ ವರೆಗೆ ನಡೆಯುವ ಈ ರ್ಯಾಲಿಯಲ್ಲಿ ಭಾಗವಹಿಸಲಿಚ್ಛಿಸುವ ಪುರುಷ ಅಭ್ಯರ್ಥಿಗಳು ಮೊದಲಿಗೆ ಆನ್‌ಲೈನ್‌ನಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕಿರುತ್ತದೆ. ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅಭ್ಯರ್ಥಿಗಳು ಸೆಪ್ಟೆಂಬರ್‌ 22ರೊಳಗೆ ನೊಂದಣಿ ಮಾಡಿಕೊಳ್ಳಬಹುದು. ಈ ರೀತಿ ಹೆಸರು ನೋಂದಾಯಿಸಿದ ಅಭ್ಯರ್ಥಿಗಳ ಇಮೇಲ್‌ಗೆ ರ‍್ಯಾಲಿಯಲ್ಲಿ ಭಾಗವಹಿಸಲು ಪ್ರವೇಶ ಪತ್ರವನ್ನು ಸೆಪ್ಟೆಂಬರ್‌ 23ರ ನಂತರ ಕಳುಹಿಸಿಕೊಡಲಾಗುತ್ತದೆ.

ಆನ್‌ಲೈನ್‌ನಲ್ಲಿ ನೋಂದಾಯಿಸಿ ಕೊಳ್ಳದ ಅಭ್ಯರ್ಥಿಗಳು ರ‍್ಯಾಲಿಯಲ್ಲಿ ಭಾಗವಹಿಸುವಂತಿಲ್ಲ ಎಂದು ಭಾರತೀಯ ಸೇನೆಯು ತಿಳಿಸಿದೆ.

 

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ? :

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ? :

ರ‍್ಯಾಲಿಯಲ್ಲಿ ಫಿಸಿಕಲ್‌ ಫಿಟ್ನೆಸ್‌ ಟೆಸ್ಟ್‌, ಫಿಸಿಕಲ್‌ ಮೆಷರ್‌ಮೆಂಟ್‌ ಟೆಸ್ಟ್‌ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಬಳಿಕ ನಿಗದಿಪಡಿಸಿದ ಸ್ಥಳ,ದಿನಾಂಕದಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಅಭ್ಯರ್ಥಿಯು ಎಂದು ರ್ಯಾಲಿಯಲ್ಲಿ ಭಾಗವಹಿಸಬೇಕು ಎಂಬ ಮಾಹಿತಿಯನ್ನು ಪ್ರವೇಶ ಪತ್ರದಲ್ಲಿ ನೀಡಲಾಗಿರುತ್ತದೆ.

ಪ್ರಮುಖ ಅಂಶಗಳು :

ಪ್ರಮುಖ ಅಂಶಗಳು :

ಆನ್‌ಲೈನ್‌ ಮೂಲಕ ಹೆಸರು ನೊಂದಣಿಗೆ ಕೊನೆ ದಿನಾಂಕ: ಸೆಪ್ಟೆಂಬರ್‌ 22, 2019
ರ್ಯಾಲಿ ನಡೆಯುವ ದಿನಾಂಕ: ಸೆಪ್ಟೆಂಬರ್‌ 29ರಿಂದ ಅಕ್ಟೋಬರ್‌ 04, 2019
ರ್ಯಾಲಿ ನಡೆಯುವ ಸ್ಥಳ: ಜಿಲ್ಲಾ ಕ್ರೀಡಾಂಗಣ, ಮೆನ್ಸ್‌ ಕಾಂಪೌಂಡ್‌, ಮಡಿಕೇರಿ.
ಸಹಾಯವಾಣಿ: 080-2950001

ಅಧಿಕೃತ ವೆಬ್‌ಸೈಟ್‌ :http://www.joinindianarmy.nic.in

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ

More News  

For Quick Alerts
ALLOW NOTIFICATIONS  
For Daily Alerts

English summary
Indian army recruitment 2019 notification has been released on official website. Rally will be held in madikeri for recruitment of D pharma candidates
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+