Indian Navy Recruitment : 217 ಟ್ರೇಡ್ಸ್‌ಮೆನ್ ಮೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಕ್ಷಣಾ ಸಚಿವಾಲಯದ ಅಡಿಯಲ್ಲಿರುವ ಭಾರತೀಯ ನೌಕಾಪಡೆ ಯಲ್ಲಿ ಖಾಲಿ ಇರುವ ಇನ್ನೂರ ಹದಿನೇಳು (217) ಟ್ರೇಡ್ಸ್‌ಮ್ಯಾನ್ ಮೇಟ್/ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಗ್ರೂಪ್ ಸಿ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಅನುಭವಿ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭಾರತದಾದ್ಯಂತ ಪೂರ್ಣ ಸಮಯದ ಆಧಾರದ ಮೇಲೆ ಪೋಸ್ಟ್ ಮಾಡಲಾಗುತ್ತದೆ. ಭಾರತೀಯ ನೌಕಾಪಡೆಯ ಟ್ರೇಡ್ಸ್‌ಮ್ಯಾನ್ ಮೇಟ್ 2021 ಹುದ್ದೆಗಳಿಗೆ ಆಫ್‌ಲೈನ್ ಅರ್ಜಿ ಪ್ರಕ್ರಿಯೆಯು ಸೆಪ್ಟೆಂಬರ್ 18, 2021 ರಿಂದ ನವೆಂಬರ್ 2, 2021ರ ವರೆಗೆ ನಡೆಯಲಿದೆ.

ಭಾರತೀಯ ನೌಕಾಪಡೆಯಲ್ಲಿ 217 ಹುದ್ದೆಗಳ ನೇಮಕಾತಿ

ಭಾರತೀಯ ನೌಕಾಪಡೆ ಗ್ರೂಪ್ ಸಿ ನೇಮಕಾತಿ 2021 ಖಾಲಿ ಹುದ್ದೆಗಳ ವಿವರ:

ಪಶ್ಚಿಮ ನೌಕಾ ಕಮಾಂಡ್ 89 ಹುದ್ದೆಗಳು
ಪೂರ್ವ ನೌಕಾ ಕಮಾಂಡ್ 60 ಹುದ್ದೆಗಳು
ಅಂಡಮಾನ್ ಮತ್ತು ನಿಕೋಬಾರ್ ನೌಕಾ ಕಮಾಂಡ್ 50 ಹುದ್ದೆಗಳು
ದಕ್ಷಿಣ ನೌಕಾ ಕಮಾಂಡ್ 18 ಹುದ್ದೆಗಳು
ಒಟ್ಟು 217 ಹುದ್ದೆಗಳು

ಭಾರತೀಯ ನೌಕಾಪಡೆ ಗ್ರೂಪ್ ಸಿ ನೇಮಕಾತಿ 2021 ವಿದ್ಯಾರ್ಹತೆ :

ಭಾರತೀಯ ನೌಕಾಪಡೆಯ ಟ್ರೇಡ್ಸ್‌ಮ್ಯಾನ್ ಮೇಟ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಟ್ರಿಕ್ಯುಲೇಷನ್/10 ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆಯಿಂದ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪ್ರಮಾಣಪತ್ರದೊಂದಿಗೆ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಭಾರತೀಯ ನೌಕಾಪಡೆ ಗ್ರೂಪ್ ಸಿ ನೇಮಕಾತಿ 2021 ವಯೋಮಿತಿ:

ಭಾರತೀಯ ನೌಕಾಪಡೆ ನೇಮಕಾತಿ 2021ರ ಮೂಲಕ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆಯಲ್ಲಿ ನಿಗದಿಪಡಿಸಿರುವಂತೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕದಂದು ಗರಿಷ್ಟ 56 ವರ್ಷ ವಯೋಮಿತಿಯೊಳಗಿರಬೇಕು.

ಭಾರತೀಯ ನೌಕಾಪಡೆ ಗ್ರೂಪ್ ಸಿ ನೇಮಕಾತಿ 2021 ಆಯ್ಕೆ ಪ್ರಕ್ರಿಯೆ:

ಭಾರತೀಯ ನೌಕಾಪಡೆಯ ಟ್ರೇಡ್ಸ್‌ಮ್ಯಾನ್ ಮೇಟ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಅರ್ಜಿಯನ್ನು ಕಿರುಪಟ್ಟಿ ಮಾಡಿ ನಂತರ ಸಂದರ್ಶನ ಮತ್ತು ಲಿಖಿತ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು.

ಭಾರತೀಯ ನೌಕಾಪಡೆ ಗ್ರೂಪ್ ಸಿ ನೇಮಕಾತಿ 2021 ವೇತನ:

ಭಾರತೀಯ ನೌಕಾಪಡೆಯ ಟ್ರೇಡ್ಸ್‌ಮ್ಯಾನ್ ಮೇಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಸಾರ ತಿಂಗಳಿಗೆ 18,000/- ರಿಂದ 56,900/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

ಭಾರತೀಯ ನೌಕಾಪಡೆ ಗ್ರೂಪ್ ಸಿ ನೇಮಕಾತಿ 2021 ಅರ್ಜಿ ಶುಲ್ಕ:

ಭಾರತೀಯ ನೌಕಾಪಡೆ ಗ್ರೂಪ್ ಸಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕಕ್ಕೆ ಸಂಬಂಧಿಸಿದ ವಿವರಗಳಿಗಾಗಿ ಲೇಖನದ ಕೊನೆಯಲ್ಲಿ ನೀಡಿರುವ ಅಧಿಕೃತ ಅಧಿಸೂಚನೆ 2021 ಅನ್ನು ನೋಡಿ.

ಭಾರತೀಯ ನೌಕಾಪಡೆ ಗ್ರೂಪ್ ಸಿ ನೇಮಕಾತಿ 2021 ಅರ್ಜಿ ಸಲ್ಲಿಕೆ :

ಭಾರತೀಯ ನೌಕಾಪಡೆಯ ಟ್ರೇಡ್ಸ್‌ಮ್ಯಾನ್ ಮೇಟ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿರುವ ನಿಗದತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ "ನೌಕಾಪಡೆಯ ಮುಖ್ಯಸ್ಥರು, ನಾಗರಿಕ ಮಾನವಶಕ್ತಿ ಯೋಜನೆ ಮತ್ತು ನೇಮಕಾತಿ ನಿರ್ದೇಶನಾಲಯ, ಕೊಠಡಿ ಸಂಖ್ಯೆ: 007, ನೆಲ ಮಹಡಿ, ತಲ್ಕಾಟೋರಾ ಒಳಾಂಗಣ ಕ್ರೀಡಾಂಗಣ, ಅನೆಕ್ಸ್ ಕಟ್ಟಡ, ನವದೆಹಲಿ -110001" ಇಲ್ಲಿಗೆ ನವೆಂಬರ್ 2, 2021ರೊಳಗೆ ಅರ್ಜಿಯನ್ನು ತಲುಪಿಸಬೇಕಿರುತ್ತದೆ.

ಭಾರತೀಯ ನೌಕಾಪಡೆ ಗ್ರೂಪ್ ಸಿ ಹುದ್ದೆಗಳಿಗೆ ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
Indian navy recruitment 2021 notification has been released for 217 tradesman mate posts. Interested candidates can apply through offline before November 2.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+