ಯುಪಿಎಸ್ ಸಿ ನೇಮಕಾತಿ: ಸಿಬಿಐ ಸಾರ್ವಜನಿಕ ಅಭಿಯೋಜಕರ ಹುದ್ದೆ ಸಂದರ್ಶನಕ್ಕೆ ಹೆಸರು ಪ್ರಕಟ

Posted By:

ಕೇಂದ್ರಾ ಲೋಕಾ ಸೇವಾ ಆಯೋಗವು ಪ್ರೊಸೆಕ್ಯೂಟರ್ಸ್ ಇನ್ ಸಿಬಿಐ, ಡಿಪಾರ್ಟ್ ಮೆಂಟ್ ಆಫ್ ಪರ್ಸನಲ್, ಪಬ್ಲಿಕ್ ಗ್ರೀವೆಂಸಸ್ ಆಂಡ್ ಪೆಂಶನ್ ಪ್ರಕಟಪಡಿಸಿದ್ದ 47 ಹುದ್ದೆಗಳ ಫಲಿತಾಂಶ ಪ್ರಕಟಿಸಿದ್ದು, ಇದೀಗ ಸಂದರ್ಶನ ಪಟ್ಟಿಯನ್ನ ಬಿಡುಗಡೆಗೊಳಿಸಿದೆ

ಸಿಬಿಐ ಸಾರ್ವಜನಿಕ ಅಭಿಯೋಜಕರು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಈಗಾಗಲೇ ಸಂದರ್ಶನಕ್ಕೆ ಶಾರ್ಟ್ ಲಿಸ್ಟ್ ತಯಾರು ಮಾಡಿದ್ದು, ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನ ಪ್ರಕಟಿಸಲಾಗಿದೆ. ಸಂದರ್ಶನಕ್ಕೆ ಆಯ್ಕೆ ಯಾದ ಅಭ್ಯರ್ಥಿಗಳು ಮೇ 7 ರಿಂದ ಮೇ 14ರವರೆಗೆ ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಆಯಾಯ ಅಭ್ಯರ್ಥಿಗೆ ಒಂದೊಂದು ದಿನ ನಿಗದಿ ಗೊಳಿಸಲಾಗಿದೆ. ಸಂದರ್ಶನಕ್ಕೆ ಆಯ್ಕೆಯಾದವರ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವ ವೇಳೆ ಎಲ್ಲಾ ಒರಿಜಿನಲ್ ಸರ್ಟಿಫಿಕೇಟ್ ಹಾಗೂ ಡಾಕ್ಯುಮೆಂಟ್ ಪ್ರತಿಗಳ ಜತೆ ಹಾಜರಾಗಬೇಕಾಗಿದೆ. ಯಾವೆಲ್ಲಾ ಡಾಕ್ಯುಮೆಂಟ್ಸ್ ಎಂದ್ರೆ ವಿದ್ಯಾರ್ಹತೆ ಸರ್ಟಿಫಿಕೇಟ್, ಅನುಭವ, ವಯೋಮಿತಿ, ಮೀಸಲಾತಿ ಪ್ರಮಾಣಪತ್ರಗಳು ಹಾಗೂ ಇನ್ನಿತ್ತರ ಪ್ರಮಾಣ ಪತ್ರಗಳನ್ನ ಕೊಂಡೋಯ್ಯಬೇಕಾಗಿದೆ.

ಸಂದರ್ಶನಕ್ಕೆ ಹಾಜರಾಗುವ ವೇಳೆ ಮೇಲೆ ಹೇಳಿರುವ ಎಲ್ಲಾ ದಾಖಲೆಗಳನ್ನ ಪ್ರಸ್ತುತಪಡಿಸಬೇಕು. ಒಂದು ವೇಳೆ ಹಾಜರುಪಡಿಸುವಲ್ಲಿ ವಿಫಲವಾದ್ರೆ ಅಂತಹ ಅಭ್ಯರ್ಥಿಗಳನ್ನ ರದ್ದು ಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಂದರ್ಶನದ ವೇಳೆ ಮೊಬೈಲ್ ಹಾಗೂ ಇನ್ನಿತ್ತರ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನ ಕೊಂಡೊಯ್ಯಬಾರದು. ಒಂದು ವೇಳೆ ಕೊಂಡೊಯ್ದರೆ ಅಂತಹ ಅಭ್ಯರ್ಥಿಯನ್ನ ಕಸ್ಟಡಿಗೆ ಒಪ್ಪಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಂದರ್ಶನ ನಡೆಯುವ ಸ್ಥಳ

ಯುಪಿಎಸ್ ಸಿ ಕಛೇರಿ
ಧೋಲ್ಪುರ್ ಆಫೀಸ್
ಶಹಜಹಾನ್ ರೋಡ್
ನವದೆಹಲಿ - 110069

ಸಂದರ್ಶನದ ಕುರಿತು ಹೆಚ್ಚಿನ ಕಂಪ್ಲೀಟ್ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ

English summary
Interview details about 47 posts of public prosecutors in cbi, department of personnel and training, ministry of personnel, public grievances and pensions.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia