ಐಒಸಿಎಲ್: ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಲಿಮಿಟೆಡ್‌ (ಐಒಸಿಎಲ್)ನಲ್ಲಿ ಜೂನಿಯರ್ ಇಂಜಿನಿಯರ್, ಮೆಟೀರಿಯಲ್ ಅಸಿಸ್ಟೆಂಟ್, ನರ್ಸಿಂಗ್ ಅಸಿಸ್ಟೆಂಟ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಲಿಮಿಟೆಡ್‌ (ಐಒಸಿಎಲ್ ) ನಲ್ಲಿ ವಿವಿಧ ವಿಭಾಗಗಳಲ್ಲಿ ಅವಶ್ಯವಿರುವ ಹುದ್ದೆಗಳ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಜೂನಿಯರ್ ಇಂಜಿನಿಯರ್, ಮೆಟೀರಿಯಲ್ ಅಸಿಸ್ಟೆಂಟ್, ನರ್ಸಿಂಗ್ ಅಸಿಸ್ಟೆಂಟ್ ಸೇರಿದಂತೆ ಒಟ್ಟು 58 ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಲು ಜನವರಿ 20 ಕೊನೆಯ ದಿನವಾಗಿದೆ.

ಐಒಸಿಎಲ್ ನೇಮಕಾತಿ

ಹುದ್ದೆಗಳ ವಿವರ

ಡಿಪ್ಲೋಮ, ಬಿಎಸ್ಸಿ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದ್ದು, ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಐಒಸಿಎಲ್ ನೇಮಕಾತಿ

ವಿದ್ಯಾರ್ಹತೆ

ಕೆಮಿಕಲ್‌, ರಿಫೈನರಿ, ಎಲೆಕ್ಟ್ರಿಕಲ್‌, ಮೆಕ್ಯಾನಿಕಲ್‌, ಇನ್‌ಸ್ಟ್ರುಮೆಂಟೇಶನ್‌, ಇನ್‌ಸ್ಟ್ರುಮೆಂಟೇಶನ್‌ ಆ್ಯಂಡ್‌ ಕಂಟ್ರೋಲ್‌ ಅಥವಾ ಇನ್‌ಸ್ಟ್ರುಮೆಂಟೇಶನ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ ವಿಷಯಗಳಲ್ಲಿ ಮೂರು ವರ್ಷದ ಡಿಪ್ಲೊಮಾ ಕೋರ್ಸ್‌ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಕ್ವಾಲಿಟಿ ಕಂಟ್ರೋಲ್ ಅನಾಲಿಸ್ಟ್ ಹುದ್ದೆಗೆ ಬಿಎಸ್ಸಿ ಪದವೀಧರರು ಅರ್ಜಿ ಸಲ್ಲಿಸಬಹುದು.

ಜೂನಿಯರ್ ನರ್ಸಿಂಗ್ ಅಸಿಸ್ಟೆಂಟ್ ಹುದ್ದೆಗೆ ಬಿಎಸ್ಸಿ ನರ್ಸಿಂಗ್ ಪೂರೈಸಿದ ಅಭ್ಯರ್ಥಿಗಳು ಅಥವಾ ಡಿಪ್ಲೋಮ ಇನ್ ನರ್ಸಿಂಗ್ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ವಯೋಮಿತಿ

ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ 26 ವರ್ಷ ಮೀರಿರಬಾರದು. ಮೀಸಲಾತಿ ನಿಯಮಾನುಸಾರ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು 150 ರೂ. ಶುಲ್ಕ ಪಾವತಿಸಬೇಕು. ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಇತರೆ ಎಲ್ಲಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ನೀಡಲಾಗಿದೆ.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆಗೆ ಕೊನೆ ದಿನ: 20-01-2018
  • ಲಿಖಿತ ಪರೀಕ್ಷೆ: 04-02-2018
  • ಪರೀಕ್ಷಾ ಫಲಿತಾಂಶ: 12-02-2018

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Indian Oil Corporation Limited (IOCL) has released an official employment notification calling out for aspirants to apply for various posts in Engineering, Nursing and other departments.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+