
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್), 513 ನಾನ್ ಎಕ್ಸಿಕ್ಯುಟಿವ್ ಹುದ್ದೆಗಳ ನೇಮಕಾತಿ ಅಧಿಸೂಚನೆ 2021 ಅನ್ನು ಬಿಡುಗಡೆ ಮಾಡಿದೆ. ಐಓಸಿಎಲ್ ಕಾರ್ಯನಿರ್ವಾಹಕೇತರ ಹುದ್ದೆಗಳಿಗೆ ಆನ್‌ಲೈನ್ ಅಪ್ಲಿಕೇಶನ್-ಕಮ್-ನೋಂದಣಿ ಪ್ರಕ್ರಿಯೆಯು ಸೆಪ್ಟೆಂಬರ್ 21, 2021 ರಿಂದ ಪ್ರಾರಂಭವಾಗಿ ಅಕ್ಟೋಬರ್ 12,2021ರ ಸಂಜೆ 5:00 ಗಂಟೆಗೆ ಮುಕ್ತಾಯವಾಗಲಿದೆ. ಈ ನಿಗದಿತ ಕಾಲಾವಕಾಶದೊಳಗೆ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಐಒಸಿಎಲ್ ನೇಮಕಾತಿ 2021 ಖಾಲಿ ಹುದ್ದೆಗಳ ವಿವರ:
ಜೂನಿಯರ್ ಎಂಜಿನಿಯರಿಂಗ್ ಸಹಾಯಕ - 479 ಹುದ್ದೆಗಳು
ಜೂನಿಯರ್ ಕ್ವಾಲಿಟಿ ಕಂಟ್ರೋಲ್ ವಿಶ್ಲೇಷಕ - 29 ಹುದ್ದೆಗಳು
ಜೂನಿಯರ್ ಮೆಟೀರಿಯಲ್ ಅಸಿಸ್ಟೆಂಟ್/ಟೆಕ್ನಿಕಲ್ ಅಸಿಸ್ಟೆಂಟ್ - 04 ಹುದ್ದೆಗಳು
ಜೂನಿಯರ್ ನರ್ಸಿಂಗ್ ಅಸಿಸ್ಟೆಂಟ್ - 01 ಹುದ್ದೆ
ಒಟ್ಟು - 513 ಹುದ್ದೆಗಳು
ಐಒಸಿಎಲ್ ನೇಮಕಾತಿ 2021 ಅರ್ಹತೆಗಳು :
ಐಒಸಿಎಲ್ ನೇಮಕಾತಿ 2021 ರ ಮೂಲಕ ನಾನ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗೆ 10 ನೇ ತರಗತಿ/ಮೆಟ್ರಿಕ್ಯುಲೇಷನ್ ಜೊತೆಗೆ ಸಂಬಂಧಿತ ಟ್ರೇಡ್ ನಲ್ಲಿ ಐಟಿಐ ಉತ್ತೀರ್ಣರಾಗಿರಬೇಕು ಮತ್ತು ಸಂಬಂಧಿತ ವಿಭಾಗಗಳಲ್ಲಿ ಬಿಎಸ್ಸಿ (ಪಿಸಿಎಂ)/ಡಿಪ್ಲೊಮಾ ಹೊಂದಿರಬೇಕು; ಸಂಬಂಧಿತ ವಿಷಯದಲ್ಲಿ ಬಿಎಸ್ಸಿ; ಐಒಸಿಎಲ್ ನೇಮಕಾತಿ 2021ರ ಅಧಿಸೂಚನೆಯಲ್ಲಿ ವಿವರಿಸಿರುವಂತೆ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷದ ನಂತರದ ಅರ್ಹತೆಯ ಅನುಭವದೊಂದಿಗೆ ಸಂಬಂಧಿತ ಎಂಜಿನಿಯರಿಂಗ್ ವಿಭಾಗಗಳಲ್ಲಿ ಡಿಪ್ಲೊಮಾ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಐಒಸಿಎಲ್ ನೇಮಕಾತಿ 2021 ವಯೋಮಿತಿ:
ಐಒಸಿಎಲ್ ನೇಮಕಾತಿ 2021 ರ ಮೂಲಕ ನಾನ್-ಎಕ್ಸಿಕ್ಯುಟಿವ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೆಪ್ಟೆಂಬರ್ 30, 2021 ರ ವೇಳೆಗೆ ಕನಿಷ್ಟ 18 ವರ್ಷ ತುಂಬಿರಬೇಕು ಮತ್ತು ಗರಿಷ್ಟ 26 ವರ್ಷ ವಯೋಮಿತಿಯೊಳಗಿರಬೇಕು. ಐಓಸಿಎಲ್ ಕಾರ್ಯನಿರ್ವಾಹಕೇತರ ಅಧಿಸೂಚನೆ 2021 ರಲ್ಲಿ ತಿಳಿಸಿರುವಂತೆ ಕ್ರಮವಾಗಿ 3 ವರ್ಷಗಳವರೆಗೆ (OBC-NCL) ಮತ್ತು 5 ವರ್ಷಗಳವರೆಗೆ (SC/ST) ವಯೋಮಿತಿ ಸಡಿಲಿಕೆ ನೀಡಲಾಗಿರುತ್ತದೆ.
ಐಒಸಿಎಲ್ ನೇಮಕಾತಿ 2021 ವೇತನ:
ಐಒಸಿಎಲ್ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ ನಾನ್-ಎಕ್ಸಿಕ್ಯುಟಿವ್ ಉದ್ಯೋಗಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,000 ದಿಂದ 1,05,000/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.
ಐಒಸಿಎಲ್ ನೇಮಕಾತಿ 2021 ಆಯ್ಕೆ ಪ್ರಕ್ರಿಯೆ:
ಐಒಸಿಎಲ್ ನೇಮಕಾತಿ 2021ರ ಮೂಲಕ ನಾನ್-ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಲಿಖಿತ ಪರೀಕ್ಷೆ ಮತ್ತು ಕೌಶಲ್ಯ/ಪ್ರಾವೀಣ್ಯತೆ/ದೈಹಿಕ ಪರೀಕ್ಷೆ (ಎಸ್‌ಪಿಪಿಟಿ) ಮೂಲಕ ಮಾಡಲಾಗುವುದು.
ಐಒಸಿಎಲ್ ನೇಮಕಾತಿ 2021 ಅರ್ಜಿ ಶುಲ್ಕ:
ಐಒಸಿಎಲ್ ನೇಮಕಾತಿ 2021ರ ಮೂಲಕ ನಾನ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಮೊತ್ತ ರೂ. 150 ಅನ್ನು ಅರ್ಜಿ ಶುಲ್ಕವಾಗಿ ಎಸ್‌ಬಿಐ ಇ-ಕಲೆಕ್ಟ್ ಮೋಡ್ ಮೂಲಕ ಪಾವತಿಸಬೇಕಿರುತ್ತದೆ. ಆದಾಗ್ಯೂ ಲೇಖನದ ಕೊನೆಯಲ್ಲಿ ನೀಡಿರುವ ಅಧಿಕೃತ ಐಒಸಿಎಲ್ ನೇಮಕಾತಿ 2021 ಅಧಿಸೂಚನೆಯಲ್ಲಿ ಉಲ್ಲೇಖಿಸಿರುವಂತೆ ಎಸ್‌ಸಿ/ಎಸ್‌ಟಿ ಮತ್ತು ಕಾಯ್ದಿರಿಸಿದವರಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ.
ಐಒಸಿಎಲ್ ನೇಮಕಾತಿ 2021 ಅರ್ಜಿ ಸಲ್ಲಿಕೆ:
ಐಒಸಿಎಲ್ ನೇಮಕಾತಿ 2021ರ ನಾನ್-ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://iocl.com/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಅಕ್ಟೋಬರ್ 12,2021ರ ಸಂಜೆ 5 ಗಂಟೆಯೊಳಗೆ ಅರ್ಜಿಯನ್ನು ಹಾಕಬಹುದು.
ಐಒಸಿಎಲ್ 2021ರ ನಾನ್ ಎಕ್ಸಿಕ್ಯುಟಿವ್ ಹುದ್ದೆಗಳ ನೇಮಕಾತಿಯ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications











