IOCL Recruitment 2022 : 18 ಹಿರಿಯ ಕಾನೂನು ಅಧಿಕಾರಿ ಮತ್ತು ಕಾನೂನು ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ತೈಲ ನಿಗಮ ನಿಯಮಿತದಲ್ಲಿ (IOCL) 18 ಹಿರಿಯ ಕಾನೂನು ಅಧಿಕಾರಿ ಮತ್ತು ಕಾನೂನು ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು.

ಅಧಿಸೂಚನೆಯನ್ನು ಓದಿದ ನಂತರ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಜುಲೈ 21,2022 ರಿಂದ ಆಗಸ್ಟ್ 14,2022ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಹುದ್ದೆಗಳಿಗೆ ನೀಡಲಾಗುವ ವೇತನ ಮತ್ತು ಇನ್ನಿತರೆ ಮಾಹಿತಿಗಾಗಿ ಮುಂದೆ ಓದಿ.

ಐಒಸಿಎಲ್ ನಲ್ಲಿ 18 ಕಾನೂನು ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

IOCL ನೇಮಕಾತಿ 2022 ಶೈಕ್ಷಣಿಕ ವಿದ್ಯಾರ್ಹತೆ :

ಭಾರತೀಯ ತೈಲ ನಿಗಮ ನಿಯಮಿತ (IOCL) ನೇಮಕಾತಿಯ ಹಿರಿಯ ಕಾನೂನು ಅಧಿಕಾರಿ ಮತ್ತು ಕಾನೂನು ಅಧಿಕಾರಿ ಹುದ್ದೆಗಳಿಗೆ ಕಾನೂನು ಪದವಿ, ಎಲ್‌ಎಲ್‌ಬಿ, ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್‌/ಸಂಸ್ಥೆ/ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

IOCL ನೇಮಕಾತಿ 2022 ವಯೋಮಿತಿ :

ಭಾರತೀಯ ತೈಲ ನಿಗಮ ನಿಯಮಿತ (IOCL) ನೇಮಕಾತಿಯ ಹಿರಿಯ ಕಾನೂನು ಅಧಿಕಾರಿ ಮತ್ತು ಕಾನೂನು ಅಧಿಕಾರಿ ಹುದ್ದೆಗಳಿಗೆ ಗರಿಷ್ಟ 30 ಮತ್ತು ಗರಿಷ್ಟ 33 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

IOCL ನೇಮಕಾತಿ 2022 ವೇತನದ ವಿವರ :

ಭಾರತೀಯ ತೈಲ ನಿಗಮ ನಿಯಮಿತ (IOCL) ನೇಮಕಾತಿಯ ಹಿರಿಯ ಕಾನೂನು ಅಧಿಕಾರಿ ಮತ್ತು ಕಾನೂನು ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 50,000/- ರಿಂದ 1,80,000/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

ಐಒಸಿಎಲ್ ನಲ್ಲಿ 18 ಕಾನೂನು ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

IOCL ನೇಮಕಾತಿ 2022 ಆಯ್ಕೆ ಪ್ರಕ್ರಿಯೆ :

ಭಾರತೀಯ ತೈಲ ನಿಗಮ ನಿಯಮಿತ (IOCL) ನೇಮಕಾತಿಯ ಹಿರಿಯ ಕಾನೂನು ಅಧಿಕಾರಿ ಮತ್ತು ಕಾನೂನು ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕ್ಲಾಟ್ ಪಿಜಿ ಪರೀಕ್ಷೆ, ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

IOCL ನೇಮಕಾತಿ 2022 ಅರ್ಜಿ ಶುಲ್ಕ :

ಭಾರತೀಯ ತೈಲ ನಿಗಮ ನಿಯಮಿತ (IOCL) ನೇಮಕಾತಿಯ ಹಿರಿಯ ಕಾನೂನು ಅಧಿಕಾರಿ ಮತ್ತು ಕಾನೂನು ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕದ ವಿವರ ಪಡೆಯಲು ನೇಮಕಾತಿ ಅಧಿಸೂಚನೆಯನ್ನು ಓದಬಹುದು.

IOCL ನೇಮಕಾತಿ 2022 ಅರ್ಜಿ ಸಲ್ಲಿಸುವುದು ಹೇಗೆ :

ಭಾರತೀಯ ತೈಲ ನಿಗಮ ನಿಯಮಿತ (IOCL) ನೇಮಕಾತಿಯ ಹಿರಿಯ ಕಾನೂನು ಅಧಿಕಾರಿ ಮತ್ತು ಕಾನೂನು ಅಧಿಕಾರಿ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್‌ https://iocl.com/ ಗೆ ಭೇಟಿ ನೀಡಿ. ನಂತರ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಜುಲೈ 21,2022 ರಿಂದ ಆಗಸ್ಟ್ 14,2022ರ ರಾತ್ರಿ 10 ಗಂಟೆಯೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
IOCL recruitment 2022 notification has been released for 18 senior law officer and law officer posts. Interested candidates can apply before August 14.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+