ಇಸ್ರೋದಲ್ಲಿ 182 ಹುದ್ದೆಗಳು ಖಾಲಿ ಇವೆ… ಆಸಕ್ತರು ಇಂದೇ ಅರ್ಜಿ ಹಾಕಿ

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಭಾರತದಲ್ಲೆಡೆ ಒಟ್ಟು 182ಟೆಕ್ನೀಶಿಯನ್, ಅಸಿಸ್ಟೆಂಟ್ ಮತ್ತು ಡ್ರೈವರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು.

ಇಸ್ರೋದಲ್ಲಿ ಉದ್ಯೋಗಾವಕಾಶ.. ಅರ್ಜಿ ಹಾಕಲು ಮಾರ್ಚ್ 6 ಕೊನೆಯ ದಿನ

ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಮಾರ್ಚ್ 6,2020 ರೊಳಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಯಾವೆಲ್ಲಾ ಉದ್ಯೋಗಗಳು ಖಾಲಿ ಮತ್ತು ಎಷ್ಟು ವೇತನವನ್ನು ನೀಡಲಾಗುವುದು ಎನ್ನುವ ಇನ್ನಿತರೆ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

ಯಾವೆಲ್ಲಾ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ ?

ಯಾವೆಲ್ಲಾ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ ?

ಟೆಕ್ನೀಶಿಯನ್ - ಬಿ - 99 ಹುದ್ದೆಗಳು
ಡ್ರಾಫ್ಟ್ಸ್‌ಮೆನ್ - ಬಿ - 3 ಹುದ್ದೆಗಳು
ಟೆಕ್ನಿಕಲ್ ಅಸಿಸ್ಟೆಂಟ್ - 41 ಹುದ್ದೆಗಳು
ಲೈಬ್ರರಿ ಅಸಿಸ್ಟೆಂಟ್ - 4 ಹುದ್ದೆಗಳು
ಸೈಂಟಿಫಿಕ್ ಅಸಿಸ್ಟೆಂಟ್ - 7 ಹುದ್ದೆಗಳು
ಹಿಂದಿ ಟೈಪಿಸ್ಟ್ - 2 ಹುದ್ದೆಗಳು
ಕ್ಯಾಟರಿಂಗ್ ಅಟೆಂಡೆಂಟ್ - ಎ - 5 ಹುದ್ದೆಗಳು
ಕುಕ್ - 5 ಹುದ್ದೆಗಳು
ಫೈಯರ್‌ಮೆನ್ ಎ - 4 ಹುದ್ದೆಗಳು
ಲೈಟ್ ವೆಹಿಕಲ್ ಡ್ರೈವರ್ - ಎ - 4 ಹುದ್ದೆಗಳು
ಹೆವಿ ವೆಹಿಕಲ್ ಡ್ರೈವರ್ - ಎ -5 ಹುದ್ದೆಗಳು
ಒಟ್ಟು - 182 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ ಏನಿರಬೇಕು ?

ಶೈಕ್ಷಣಿಕ ವಿದ್ಯಾರ್ಹತೆ ಏನಿರಬೇಕು ?

ಇಸ್ರೋದಲ್ಲಿ ಉದ್ಯೋಗಕ್ಕೆ ಸೇರಲು ಎಸ್‌ಎಸ್‌ಸಿ/ಎಸ್‌ಎಸ್‌ಎಲ್‌ಸಿ/ಮೆಟ್ರಿಕ್ಯುಲೇಷನ್ + ಜೊತೆಗೆ ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಐಟಿಐ/ಎನ್‌ಟಿ/ಎನ್‌ಎಸಿ ವಿದ್ಯಾರ್ಹತೆ;

ಮೆಕ್ಯಾನಿಕಲ್/ಇಲೆಕ್ಟ್ರಾನಿಕ್ಸ್/ಕಂಪ್ಯೂಟರ್ ಸೈನ್ಸ್/ಆಟೋಮೊಬೈಲ್/ಇನ್‌ಸ್ಟ್ರುಮೆಂಟೇಶನ್/ಇಲೆಕ್ಟ್ರಿಕಲ್/ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ; ಪದವಿ + ಸ್ನಾತಕೋತ್ತರ ಪದವಿ; ಎಂ.ಎಸ್ಸಿ;

ಹುದ್ದೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಬಿ.ಎಸ್ಸಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ /ಸಂಸ್ಥೆ / ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ ಎಷ್ಟಿರಬೇಕು ?

ವಯೋಮಿತಿ ಎಷ್ಟಿರಬೇಕು ?

ಮಾರ್ಚ್ 6,2020ರ ಅನ್ವಯ ಹುದ್ದೆಗಳಿಗನುಸಾರ ಕನಿಷ್ಟ 18 ರಿಂದ ಗರಿಷ್ಠ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ. 

ವೇತನವೆಷ್ಟು ?

ವೇತನವೆಷ್ಟು ?

ಅಸಿಸ್ಟೆಂಟ್ ಹುದ್ದೆಗಳಿಗೆ ತಿಂಗಳಿಗೆ 44,900/-ರೂ, ಟೈಪಿಸ್ಟ್ ಹುದ್ದೆಗಳಿಗೆ ತಿಂಗಳಿಗೆ 25,500/-ರೂ, ಡ್ರಾಫ್ಟ್ಸ್‌ಮೆನ್ ಹುದ್ದೆಗಳಿಗೆ ತಿಂಗಳಿಗೆ 21,700/-ರೂ, ಫೈರ್‌ಮೆನ್,ಕುಕ್ ಮತ್ತು ಡ್ರೈವರ್ ಹುದ್ದೆಗಳಿಗೆ ತಿಂಗಳಿಗೆ 19,900/-ರೂ ಮತ್ತು ಕ್ಯಾಟರಿಂಗ್ ಅಟೆಂಡೆಂಟ್ ಹುದ್ದೆಗಳಿಗೆ ತಿಂಗಳಿಗೆ 18,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ವಿಧಾನ ಮತ್ತು ಅರ್ಜಿ ಶುಲ್ಕ ಎಷ್ಟು ?

ಆಯ್ಕೆ ವಿಧಾನ ಮತ್ತು ಅರ್ಜಿ ಶುಲ್ಕ ಎಷ್ಟು ?

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಗಳ ಆಯ್ಕೆ ಮಾಡಲಾಗುವುದು. 

ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, ಸಾಮಾನ್ಯ / ಓಬಿಸಿ/ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳು 250/- ರೂ. ಶುಲ್ಕವನ್ನು ಆನ್‌ಲೈನ್ ಮೂಲಕ ಅಥವಾ ಹತ್ತಿರದ ಎಸ್‌ಬಿಐ ಶಾಖೆಗಳಲ್ಲಿ ಪಾವತಿಸಬಹುದು.

ಮಹಿಳೆ/ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಮಾಜಿ ಸೈನಿಕ/ಅಂಗವಿಕಲ ಅಭ್ಯರ್ಥಿಗಳು ಸಂಪೂರ್ಣ ಶುಲ್ಕ ವಿನಾಯಿತಿ ಹೊಂದಿರುತ್ತಾರೆ.

ಅರ್ಜಿ ಸಲ್ಲಿಕೆ ಮತ್ತು ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಮತ್ತು ಪ್ರಮುಖ ದಿನಾಂಕಗಳು:

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಇಸ್ರೋ ಅಧಿಕೃತ ವೆಬ್‌ಸೈಟ್‌ https://www.isro.gov.in/ ಗೆ ಭೇಟಿ ನೀಡಿ ಅಧಿಸೂಚನೆಯನ್ನು ಓದಿಕೊಂಡು ನಂತರ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಮಾರ್ಚ್ 6,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಆರಂಭ ದಿನಾಂಕ: ಫೆಬ್ರವರಿ 15,2020

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 6,2020

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಮಾರ್ಚ್ 7,2020

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
ISRO recruitment 2020 notification has been released on official website for the recruitment of 182 technicians, assistants and other posts. Interested candidates can apply through online before 6th March 2020.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+