ಜವಾಹರ ಲಾಲ್ ವಿಶ್ವವಿದ್ಯಾನಿಲಯ ನೇಮಕಾತಿ 2019 ವಿವಿಧ 73 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಖಾಲಿ ಇರುವ ಕಿರಿಯ ಸಹಾಯಕ ಮತ್ತು ಬೆರಳಚ್ಚುಗಾರರು, ಶೀಘ್ರಲಿಪಿಗಾರರು , ಮಲ್ಟಿಟಾಸ್ಕ್ ಸಿಬ್ಬಂದಿಗಳು ಮತ್ತು ಆಪ್ತ ಸಹಾಯಕ ಹುದ್ದೆಗಳಿಗೆ ಅರ್ಜಿಯನ್ನು ಫೆಬ್ರವರಿ 4.2019ರೊಳಗೆ ಸಲ್ಲಿಸಬಹುದು.

| CRITERIA | DETAILS |
| Name Of The Posts | ಕಿರಿಯ ಸಹಾಯಕ & ಬೆರಳಚ್ಚುಗಾರ, ಶೀಘ್ರಲಿಪಿಗಾರ, ಮಲ್ಟಿಟಾಸ್ಕ್ ಸಿಬ್ಬಂದಿ ಮತ್ತು ಆಪ್ತ ಸಹಾಯಕ |
| Organisation | ಜವಾಹರ ಲಾಲ್ ವಿಶ್ವವಿದ್ಯಾನಿಲಯ |
| Educational Qualification | 10ನೇ ತರಗತಿ, 12ನೇ ತರಗತಿ,ಐಟಿಐ ಅಥವಾ ಸಮಾನ ಅರ್ಹತೆ |
| Job Location | ದೆಹಲಿ |
| Salary Scale | ಆಪ್ತ ಸಹಾಯಕ - 35,400/- ರಿಂದ 1,12,400/-ರೂ, ಶೀಘ್ರಲಿಪಿಗಾರ -25,500/- ರಿಂದ 81,100/-ರೂ, ಕಿರಿಯ ಸಹಾಯಕ ಮತ್ತು ಬೆರಳಚ್ಚುಗಾರ - 19,900/- ರಿಂದ 63,200/- ರೂ ಹಾಗೂ ಆಫೀಸ್ ಅಟೆಂಡೆಂಟ್ (ಮಲ್ಟಿ ಟಾಸ್ಕಿಂಗ್ ಸ್ಟಾಫ್) - 18,000/- ರಿಂದ56,900/-ರೂ ವೇತನ |
| Application Start Date | January 5, 2019 |
| Application End Date | February 4, 2019 |
ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ, 12ನೇ ತರಗತಿ,ಐಟಿಐ ಅಥವಾ ಸಮಾನ ಅರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಪಡೆದಿರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಗರಿಷ್ಠ 35ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವೇತನದ ವಿವರ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೀಡಲಾಗುವ ವೇತನದ ವಿವರ ಇಂತಿವೆ. ಆಪ್ತ ಸಹಾಯಕ ಹುದ್ದೆಗಳಿಗೆ 35,400/- ರಿಂದ 1,12,400/-ರೂ, ಶೀಘ್ರಲಿಪಿಗಾರ ಹುದ್ದೆಗಳಿಗೆ 25,500/- ರಿಂದ 81,100/-ರೂ, ಕಿರಿಯ ಸಹಾಯಕ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ 19,900/- ರಿಂದ 63,200/- ರೂ ಹಾಗೂ ಆಫೀಸ್ ಅಟೆಂಡೆಂಟ್ (ಮಲ್ಟಿ ಟಾಸ್ಕಿಂಗ್ ಸ್ಟಾಫ್) ಹುದ್ದೆಗಳಿಗೆ 18,000/- ರಿಂದ56,900/-ರೂ ವೇತನವನ್ನು ನೀಡಲಾಗುತ್ತದೆ.
ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆಮಾಡಲಾಗುತ್ತದೆ.
ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











