ಹೆಚ್ ಎ ಎಲ್ ನಲ್ಲಿ ಟೆಕ್ನಿಷಿಯನ್ ಮತ್ತು ಸೆಕ್ಯೂರಿಟಿ ಗಾರ್ಡ್ ಹುದ್ದೆಗಳ ನೇಮಕಾತಿ

ಹೆಚ್ ಎ ಎಲ್ 2017 ನೇಮಕಾತಿಯಡಿಯಲ್ಲಿ ಖಾಲಿಯಿರುವ ಟೆಕ್ನಿಷಿಯನ್, ಸೆಕ್ಯೂರಿಟಿ ಗಾರ್ಡ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ

ಹೆಚ್ ಎ ಎಲ್ 2017 ನೇಮಕಾತಿಯಡಿಯಲ್ಲಿ ಖಾಲಿಯಿರುವ ಟೆಕ್ನಿಷಿಯನ್, ಸೆಕ್ಯೂರಿಟಿ ಗಾರ್ಡ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಮಾರ್ಚ್ 10 ರ ಒಳಗೆ ಅರ್ಜಿಗಳನ್ನು ಸಲ್ಲಿಸಬೇಕಾಗಿ ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಿದೆ.

ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ಬೆಂಗಳೂರಿನಲ್ಲಿ ಇರುವ ಏಷ್ಯಾ ಖಂಡದ ಅತಿ ದೊಡ್ಡ ವಾಯುಯಾನ ಸಂಸ್ಥಗಳಲ್ಲಿ ಒಂದು. 1940ರಲ್ಲಿ ಸ್ಥಾಪನೆಗೊಂಡ ಇದು, ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ (Ministry of Defence) ಉತ್ಪಾದನಾ (Production) ಇಲಾಖೆಯ ಅಡಿಯಲ್ಲಿ ಕೆಲಸ ಮಾಡುತ್ತದೆ. ಸಾವಿರಾರು ನೌಕರರನ್ನು ಹೊಂದಿದ್ದು, ಯುದ್ಧ ವಿಮಾನ, ಹೆಲಿಕಾಪ್ಟರ್ ಇತ್ಯಾದಿಗಳು ಮತ್ತು ಅವುಗಳ ಭಾಗಗಳ ತಯಾರಿಕೆಯಲ್ಲಿ ನಿರತವಾಗಿದೆ. ದೇಶಾದ್ಯಂತ ಏಳಕ್ಕೂ ಹೆಚ್ಚು ಶಾಖೆ ಹೊಂದಿದ್ದು ಬೆಂಗಳೂರಿನ ಶಾಖೆಯಲ್ಲಿ ಕಾರ್ಯ ನಿರ್ವಹಿಸಲು ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಹೆಚ್ ಎ ಎಲ್ ನಲ್ಲಿ ನೇಮಕಾತಿ

ಹುದ್ದೆಗಳ ವಿವರ

ಟೆಕ್ನಿಷಿಯನ್ (ಪೈಂಟರ್) -04
ಟೆಕ್ನಿಷಿಯನ್ (ಗ್ರೈಂಡರ್)-04
ಸೆಕ್ಯೂರಿಟಿ ಗಾರ್ಡ್-20
ಟೆಕ್ನಿಷಿಯನ್ (ಫಿಟ್ಟರ್)-05
ಏರ್ ಕ್ರಾಫ್ಟ್ ಟೆಕ್ನಿಷಿಯನ್ (ಮಾಜಿ ಸೈನಿಕ)-17

ವಿದ್ಯಾರ್ಹತೆ

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಿಂದ 12/ಐಟಿಐ +ಎನ್ಎಸಿ /ಎನ್ಸಿಟಿವಿಟಿ ಹೊಂದಿರಬೇಕು.

ವಯೋಮಿತಿ

ಅಭ್ಯರ್ಥಿಗಳು 28 ವರ್ಷ ಮೀರಿರಬಾರದು (01-02-2017 ಕ್ಕೆ ಅನ್ವಯವಾಗುವಂತೆ).
ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳಿಗೆ ಹೆಚ್ ಎ ಎಲ್ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಗಳ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ

1. ಹೆಚ್ ಎ ಎಲ್ ಅಧಿಕೃತ ವೆಬ್ಸೈಟ್ http://hal-india.com ವಿಳಾಸಕ್ಕೆ ಭೇಟಿ ನೀಡಿ.
2. ವೆಬ್ಸೈಟ್ ನಲ್ಲಿ ಪ್ರಕಟವಾಗಿರುವ ಜಾಹೀರಾತನ್ನು ಗಮನವಿಟ್ಟು ಸಂಪೂರ್ಣವಾಗಿ ಓದಿ.
3.ಆನ್ಲೈನ್ ಅರ್ಜಿಯಲ್ಲಿ ಶೈಕ್ಷಣಿಕ ಮತ್ತು ವೈಯಕ್ತಿಕ ದಾಖಲೆಗಳ ವಿವರವನ್ನು ತಪ್ಪಿಲ್ಲದಂತೆ ತುಂಬಿ, ಹಾಗೂ ನಿಮ್ಮ ಇತ್ತೀಚಿನ ಭಾವಚಿತ್ರ ಮತ್ತು ಸಹಿಯ ಸ್ಕ್ಯಾನ್ ಇಮೇಜ್ ಅನ್ನು ಅಪ್ಲೋಡ್ ಮಾಡಿ.
4. ಅರ್ಜಿಯನ್ನು ತುಂಬಿದ ನಂತರ ಒಮ್ಮೆ ಪರಿಶೀಲಿಸಿ.
5.ಅರ್ಜಿಯ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದ ನಂತರ ಸೇವ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
6.ಪ್ರಿಂಟ್ ತೆಗೆದ ಅರ್ಜಿಯ ಜೊತೆ ವೆಬ್ಸೈಟ್ ನಲ್ಲಿ ಕೇಳಲಾಗಿರುವ ಎಲ್ಲಾ ಸೂಕ್ತ ದಾಖಲೆಗಳನ್ನು ಅದರೊಂದಿಗೆ ಲಗತ್ತಿಸಿ ಅಂಚೆ ಮೂಲಕ ಹೆಚ್ ಎ ಎಲ್ ವಿಳಾಸಕ್ಕೆ ಕೊನೆಯ ದಿನಾಂಕದ ಒಳಗೆ ತಲುಪಿಸಿ.

ಅಂಚೆ ವಿಳಾಸ

The Senior Manager (HR) Hindustan Aeronautics Limited , Bangalore Complex LCA Tejas Division , P B No .3791 Marathahalli Post , Bangalore -560037

ಪ್ರಮುಖ ದಿನಾಂಕಗಳು

ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-03-2017
ಅಂಚೆ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-03-2017

ಹೆಚ್ಚಿನ ಮಾಹಿತಿಗಾಗಿ www.hal-india.com

More News  

For Quick Alerts
ALLOW NOTIFICATIONS  
For Daily Alerts

English summary
HAL invites applications to fill 50 available posts of technicians and security guard
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+