ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಎಂಜಿನಿಯರಿಂಗ್ ಪದವಿ ಮತ್ತು ಕಂಪ್ಯೂಟರ್ ಪದವಿಗಳಿಸಿರುವ ಅಭ್ಯರ್ಥಿಗಳಿಗೆ ನೇರ ನೇಮಕಾತಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು.

ವಿಧಾನ ಪರಿಷತ್ತಿನಲ್ಲಿ ವಿವಿಧ ಹುದ್ದೆಗಳು
ಕ್ರ.ಸಂಹುದ್ದೆಯ ಹೆಸರುವೇತನ ಶ್ರೇಣಿಒಟ್ಟುವರ್ಗೀಕರಣ
1ಸಿಸ್ಟಂ ಮ್ಯಾನೇಜರ್44250-6060001ಸಾಮಾನ್ಯ (ಇತರೆ)
2ಸಿಸ್ಟಂ ಅನಾಲಿಸ್ಟ್36300-5385001ಸಾಮಾನ್ಯ (ಇತರೆ)
3ಸೀ.ಪ್ರೋಗ್ರಾಮರ್28100-5010002

ಪ.ಜಾ(ಇತರೆ)-01

ಸಾಮಾನ್ಯ (ಇತರೆ)-01

4ಜೂ.ಪ್ರೋಗ್ರಾಮರ್22800-4320002ಪ.ಜಾ(ಇತರೆ)-01

ಸಾಮಾನ್ಯ (ಇತರೆ)-01

5ಜೂನಿಯರ್ ಕನ್ಸೋಲ್ ಆಪರೇಟರ್
20000-36300
04
ಪ.ಜಾ(ಇತರೆ)-01

ಸಾಮಾನ್ಯ (ಇತರೆ)-01

ಪ.ಪಂ (ಇತರೆ)-01

ಸಾ.ಮಹಿಳೆ-01

6 ಕಂಪ್ಯೂಟರ್ ಆಪರೇಟರ್
16000-29600
02
ಪ.ಜಾ(ಇತರೆ)-01

ಸಾಮಾನ್ಯ (ಇತರೆ)-01

ವಿದ್ಯಾರ್ಹತೆ

  • ಕ್ರಮ ಸಂಖ್ಯೆ ಒಂದರಿಂದ ಐದರವರೆಗಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಅಂಗೀಕೃತ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ / ಇನ್ಫಾರ್ಮಶನ್ ಸೈನ್ಸ್ / ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿದ್ಯಾರ್ಹತೆಯಲ್ಲಿ ಇಂಜಿನಿಯರಿಂಗ್ ಪದವಿ ಹೊಂದಿರಬೇಕು ಮತ್ತು ಮೂರು ವರ್ಷಗಳ ಅನುಭವ ಹೊಂದಿರಬೇಕು.
  • ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿಯನ್ನು ಹೊಂದಿರಬೇಕು. ಗಣಕ ಕ್ಷೇತ್ರದಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು.

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ನಿಯಮಾವಳಿಗನುಸಾರ ಮೇಲ್ಕಂಡ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆ-1 ರ ಅರ್ಜಿಗಳನ್ನು ಸರ್ಕಾರಿ ಪುಸ್ತಕ ಮಳಿಗೆಯಿಂದ ಪಡೆದು ದ್ವಿಪ್ರತಿಯಲ್ಲಿ ಸಲ್ಲಿಸುವ ಕೊನೆಯ ದಿನಾಂಕ 10 -03 -2017 ಸಂಜೆ 4 :00 ಗಂಟೆಗೆ ನಿಗದಿಗೊಳಿಸಲಾಗಿರುತ್ತದೆ.

ಅರ್ಜಿ ಶುಲ್ಕ

  • ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸಿದ್ದಲ್ಲಿ ಪ್ರತಿ ಹುದ್ದೆಗೆ ಸಾಮಾನ್ಯ ಅಭ್ಯರ್ಥಿಗಳು ರೂ.300 /- ಗಳ ಡಿಡಿ ಅಥವಾ ಪೇ ಆರ್ಡರ್ ಅನ್ನು ಅಧಿಸೂಚನೆಯ ದಿನಾಂಕದಿಂದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ :5079 , ವಿಧಾನಸೌಧ, ಬೆಂಗಳೂರು-560001 , ಇವರ ಖರೀದಿಸಿ ಅರ್ಜಿಯಲ್ಲಿ ವಿವರದೊಂದಿಗೆ ಲಗತ್ತಿಸತಕ್ಕದ್ದು. ಒಮ್ಮೆ ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ.
  • ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿರುವುದಿಲ್ಲ.

ವಯೋಮಿತಿ

18 ವರ್ಷ ಪೂರೈಸಿರುವವರು ಅರ್ಜಿ ಸಲ್ಲಿಸಲು ಅರ್ಹರು
ಗರಿಷ್ಠ ವಯೋಮಿತಿ
ಪ.ಜಾ/ಪ.ಪಂ/ಪ್ರವರ್ಗ-1 - 40 ವರ್ಷ
ಪ್ರ.2ಎ/2ಬಿ/3ಎ/3ಬಿ - 38 ವರ್ಷ
ಸಾಮಾನ್ಯ ವರ್ಗ - 35 ವರ್ಷ
ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿ 1977 ನಿಯಮ 6(3)ರಲ್ಲಿ ತಿಳಿಸಲಾಗಿರುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

ಆಯ್ಕೆಯಾದ ಯಾವುದೇ ಅಭ್ಯರ್ಥಿಯು ನೇಮಕಾತಿ ಪ್ರಾಧಿಕಾರಕ್ಕೆ ನೇಮಿಸಿರುವ ಕೆಲಸಕ್ಕೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಯೋಗ್ಯವೆನಿಸದ ಹೊರತು ಅವರನ್ನು ಆ ಹುದ್ದೆಗೆ ನೇಮಿಸಲಾಗುವುದಿಲ್ಲ.

ಅಭ್ಯರ್ಥಿಗಳು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು.

  • ಹುಟ್ಟಿದ ತಾರೀಖಿಗೆ ಆಧಾರದ ದಾಖಲೆ ಪ್ರತಿ.
  • ಹುದ್ದೆಗೆ ಸೂಚಿಸಲಾಗಿರುವ ವಿದ್ಯಾರ್ಹತೆಗಳಿಗೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿದ ನಕಲು ಪ್ರತಿ (ಅಂಕಪಟ್ಟಿಗಳ ನಕಲು ಪ್ರತಿಗಳ ಸಮೇತ).
  • ಸರ್ಕಾರದಿಂದ ನಿಗದಿಪಡಿಸಿರುವ ನಮೂನೆಯಲ್ಲಿ ಜಾತಿ/ಪ್ರವರ್ಗ ದೃಢೀಕರಿಸುವ ಪ್ರಮಾಣ ಪತ್ರದ ನಕಲು ಪ್ರತಿ.
  • ಅರ್ಜಿ ನಮೂನೆಯಲ್ಲಿ ನಿಗದಿಪಡಿಸಿರುವ ಇಬ್ಬರು ಗಣ್ಯ ವ್ಯಕ್ತಿಗಳಿಂದ ಪಡೆದ ಇತ್ತೀಚಿನ ನಡತೆ ಪ್ರಮಾಣ ಪತ್ರ ಹಾಗೂ ಶಾಲಾ ನಡವಳಿಕೆಯ ಪ್ರಮಾಣಪತ್ರ.

ಸೂಚನೆ

ಅಭ್ಯರ್ಥಿಗಳು ಮೂಲ ಪ್ರಮಾಣ ಪತ್ರಗಳನ್ನು ಲಗತ್ತಿಸತಕ್ಕದಲ್ಲ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 -03 -2017

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ವಿಧಾನ ಪರಿಷತ್ತಿನ ಅಧಿಕೃತ ವೆಬ್ಸೈಟ್ http://www.kla.kar.nic.in/council/council.htmಯಲ್ಲಿ ಪಡೆಯಬಹುದಾಗಿದೆ.

More News  

For Quick Alerts
ALLOW NOTIFICATIONS  
For Daily Alerts

English summary
Direct Recruitment to the Various posts in computer centere in klcs vidhana soudha
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+