ಕರ್ನಾಟಕ ಕಾರಾಗೃಹ ಇಲಾಖೆ 662 ಜೈಲರ್ ಮತ್ತು ವಾರ್ಡರ್ ಹುದ್ದೆಗಳಿಗೆ ಅರ್ಜಿ ಹಾಕಿ

ಕರ್ನಾಟಕ ಕಾರಾಗೃಹ ಇಲಾಖೆಯಲ್ಲಿ 662 ಜೈಲರ್ ಮತ್ತು ವಾರ್ಡರ್ ಹುದ್ದೆಗಳ ನೇರ ನೇಮಕಾತಿಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು, ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.ಆಸಕ್ತ ಅರ್ಹ ಅಭ್ಯರ್ಥಿಗಳು ಮಾರ್ಚ್ 9,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಕರ್ನಾಟಕ ಕಾರಾಗೃಹ ಇಲಾಖೆಯಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ಜೈಲರ್ ಮತ್ತು ವಾರ್ಡರ್
Organisation ಕರ್ನಾಟಕ ಕಾರಾಗೃಹ ಇಲಾಖೆ
Educational Qualification ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ,ಎಸ್‌.ಎಸ್‌.ಎಲ್‌.ಸಿ / 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ
Job Location ಕರ್ನಾಟಕ
Salary Scale ಜೈಲರ್ - ತಿಂಗಳಿಗೆ 33,450/- ರಿಂದ 62,600/-ರೂ ಮತ್ತು ವಾರ್ಡರ್ - 21,400/- ರಿಂದ 42000/-ರೂ ವೇತನ
Application Start Date February 21, 2019
Application End Date March 9, 2019

ವಿದ್ಯಾರ್ಹತೆ:

ಜೈಲರ್ ಹುದ್ದೆ: ಈ ಹುದ್ದೆಗೆ ಕನಿಷ್ಟ ಯಾವುದಾದರೂ ಒಂದು ಬ್ಯಾಚುಲರ್ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು. ಸೋಶಿಯಾಲಜಿ ಅಥವಾ ಸೈಕಾಲಜಿ ಅಥವಾ ಕ್ರಿಮಿನಾಲಜಿ ಅಥವಾ ಕರೆಕ್ಷನಲ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಅಥವಾ ತತ್ಸಮಾನ ವಿಷಯದಲ್ಲಿ ಬ್ಯಾಚುಲರ್ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು.
ವಾರ್ಡರ್ ಹುದ್ದೆ: ಈ ಹುದ್ದೆಗೆ ಎಸ್‌.ಎಸ್‌.ಎಲ್‌.ಸಿ / 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು.

ಖಾಲಿ ಹುದ್ದೆಗಳ ವಿವರ:

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
ಜೈಲರ್ 12
ವಾರ್ಡರ್ 650
ಒಟ್ಟು 662

ವಯೋಮಿತಿ:

ಈ ಹುದ್ದೆಗಳಿಗೆ ಸಲ್ಲಿಸಲು ಮಾರ್ಚ್ 9,2019ರ ಅನ್ವಯ ಸಾಮಾನ್ಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಟ 20 ವರ್ಷ ವಯಸ್ಸಾಗಿರಬೇಕು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 28 ವರ್ಷಗಳು ಮತ್ತು ಇತರೆ ಅಭ್ಯರ್ಥಿಗಳಿಗೆ 26 ವರ್ಷವಯೋಮತಿಯನ್ನು ಹೊಂದಿರಬೇಕು. ವಯೋಮಿತಿ ಸಡಿಲಿಕೆಯ ವಿವರವನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿರುತ್ತದೆ.

ವೇತನದ ವಿವರ:

ಜೈಲರ್ ಹುದ್ದೆಗಳಿಗೆ ಅಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ
33,450/- ರಿಂದ 62,600/-ರೂ ಮತ್ತು ವಾರ್ಡರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 21,400/- ರಿಂದ 42000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ವಿಧಾನ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೇಹದಾರ್ಢ್ಯತೆ ಪರೀಕ್ಷೆ,ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಸಾಮಾನ್ಯ ವರ್ಗ, ಪ್ರವರ್ಗ 2A,2B,3A,3B ಗೆ ಸೇರಿದ ಅಭ್ಯರ್ಥಿಗಳಿಗೆ250/-ರೂ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ -1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ 100/-ರೂ

ಅರ್ಜಿ ಶುಲ್ಕವನ್ನು ಪಾವತಿಸಲು ಮಾರ್ಚ್11,2019 ಕೊನೆಯ ದಿನವಾಗಿರುತ್ತದೆ.

ಸೂಚನೆ: ಡಿಡಿ. ಪೋಸ್ಟಲ್ ಆರ್ಡರ್ , ಮನಿ ಆರ್ಡರ್ ಇವುಗಳನ್ನು ಸ್ವೀಕರಿಸಲಾಗುವುದಿಲ್ಲ. ಶುಲ್ಕವನ್ನು ಪಾವತಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಮಾರ್ಚ್ 11,2019 ರ ನಂತರ ಶುಲ್ಕವನ್ನು ಸಂದಾಯ ಮಾಡಲು ಅವಕಾಶವಿರುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿದಾರ ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಇಲಾಖೆಯ ಅಧಿಕೃತ ವೆಬ್‌ಸೈಟ್ https://www.ksp.gov.in/ ನಲ್ಲಿ ನೀಡಲಾಗಿರುವ ಮಾಹಿತಿಸೂಚಿ/ ಸೂಚನೆಗಳನ್ನು ಜಾಗರೂಕತೆಯಿಂದ ಓದಿಕೊಂಡು ಭರ್ತಿ ಮಾಡಬೇಕು. ಇಲಾಖೆಯ ಅಧಿಕೃತ ವೆಬ್‌ಸೈಟ್ ನಲ್ಲಿನ cureent recruitment ನಲ್ಲಿ ನೀಡಲಾಗಿರುವ ಸೂಚನೆಗಳನ್ನು ಓದಿಕೊಂಡು ಯಾವುದೇ ತಪ್ಪು ಮಾಹಿತಿಯನ್ನು ನೀಡದೇ ಆನ್-ಲೈನ್‌ನಲ್ಲಿ ಲಭ್ಯವಿರುವ ಅರ್ಜಿಯನ್ನು ಭರ್ತಿ ಮಾಡತಕ್ಕದ್ದು. ತಪ್ಪು ಮಾಹಿತಿಗಳನ್ನು ನಿಡಿ ಅರ್ಜಿ ಸಲ್ಲಿಸಿದ್ದಲ್ಲಿ ಅಂತಹವರ ವಿರುದ್ಧ ಕಾನೂನಿನನ್ವಯ ನೇಮಕಾತಿ ಸಮಿತಿಯು ಸೂಕ್ತ ಕ್ರಮ ಕೈಗೊಳ್ಳುವುದು. ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಅರ್ಜಿದಾರ ಒಂದು ಬಿಳಿ ಹಾಳೆಯ ಮೇಲೆ ಪಾಸ್‌ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರ. ಸಹಿ ಮತ್ತು ಗುರುತಿನ ಚೀಟಿಯನ್ನು ಕಂಪ್ಯೂಟರ್ ಮುಖೇನ ಅಪ್‌ಲೋಡ್ ಮಾಡಬೇಕು.ಇಲ್ಲವಾದಲ್ಲಿ ಅಂತಹ ಅರ್ಜಿದಾರರು ಆನ್‌ಲೈನ್‌ನಲ್ಲಿ ಅರ್ಜಿಯನ್ನು ತುಂಬಿ ಮುಂದುವರೆಯಲು ಸಾಧ್ಯವಾಗುವುದಿಲ್ಲ. ಅರ್ಜಿದಾರ ನೀಡಿರುವ ವಿವರಗಳು ಎಲ್ಲಾ ರೀತಿಯಿಂದಲೂ ಸಮರ್ಪಕವಾಗಿದ್ದಲ್ಲಿ ಮಾತ್ರ ಚಲನ್ ಮುದ್ರಿಸಬಹುದು. ಚಲನ್ ಮುದ್ರಿಸಲು ಜನರೇಟ್ ಚಲನ್ ಬಟನ್ ಮೇಲೆ ಕ್ಲಿಕ್ ಮಾಡಿದಾಗ ತ್ರಿಪ್ರತಿ ಬ್ಯಾಂಕ್ ಚಲನ್ ಸೃಜನೆಯಾಗುತ್ತದೆ. ಆ ಚಲನ್‌ನಲ್ಲಿ ಅರ್ಜಿಯ ಸಂಖ್ಯೆಯೊಂದಿಗೆ, ನಿಮ್ಮ ಭಾವಚಿತ್ರ,ಪ್ರವರ್ಗ,ಮೀಸಲಾತಿಗಳ ವಿವರ ಮತ್ತು ಪಾವತಿಸಬೇಕಾಗಿರುವ ನಿಗದಿತ ಶುಲ್ಕಗಳ ವಿವರಗಳು ಇರುತ್ತವೆ. ಆ ಚಲನ್ ಪ್ರತಿಯನ್ನು ಮುದ್ರಿಸಿ / ಪ್ರಿಂಟ್ ಮಾಡಿಕೊಳ್ಳತಕ್ಕದ್ದು.

ಶುಲ್ಕ ಪಾವತಿಸುವ ವಿಧಾನ:

ನಂತರ ಅರ್ಜಿದಾರ ಮುದ್ರಿಸಿಕೊಳ್ಳಲಾದ ಚಲನ್‌ನಲ್ಲಿ ನಮೂದಾಗಿರುವ ಒಟ್ಟು ಶುಲ್ಕವನ್ನು ನಗದು ರೂಪದಲ್ಲಿ ಸ್ಥಳೀಯ ಅಂಚೆ ಕಛೇರಿಗಳಲ್ಲಿ ಅಥವಾ ಹೆಚ್.ಡಿ.ಎಫ್‌.ಸಿ ಬ್ಯಾಂಕಿನ ಅಧಿಕೃತ ಶಾಖೆಗಳಲ್ಲಿ ನಗದು ರೂಪದಲ್ಲಿ ಅಥವಾ ಆನ್‌ಲೈನ್ ಮೂಲಕ ಪಾವತಿಸಿ ನಂತರ ಚಲನ್‌ನ 'ಅಭ್ಯರ್ಥಿ ಪ್ರತಿ' ಯನ್ನು ಇಟ್ಟುಕೊಂಡಿರತಕ್ಕದ್ದು.

ಅಭ್ಯರ್ಥಿಯು ಶುಲ್ಕ ಪಾವತಿಸಿದ ಎರಡು ದಿನಗಳ ನಂತರ ಪುನಃ ಇಲಾಖೆಯ ಅಧಿಕೃತ ವೆಬ್‌ಸೈಟ್ https://www.ksp.gov.in/ ಅಥವಾ http://www.karnatakaprisons.in/indexkannada.html ನಲ್ಲಿ My Application ಅನ್ನು ಕ್ಲಿಕ್ ಮಾಡಿ. ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿದ ನಂತರ ಅರ್ಜಿ ತೆರೆಯುತ್ತದೆ ಹಾಗೂ ಅಭ್ಯರ್ಥಿಯು ಭರ್ತಿ ಮಾಡಿರುವ ಎಲ್ಲಾ ವಿವರಗಳನ್ನು ಒಳಗೊಂಡಂತೆ ಅರ್ಜಿಯು ಸೃಜನೆಯಾಗುತ್ತದೆ. ಸದರಿ ಅರ್ಜಿಯ ಪ್ರತಿಯನ್ನು ಪ್ರಿಂಟ್ ಮಾಡಿಟ್ಟುಕೊಳ್ಳತಕ್ಕದ್ದು. ಅರ್ಜಿ ಪ್ರತಿ ಮತ್ತು ಅರ್ಜಿ ಸಂಖ್ಯೆಯು ಮುಂದಿನ ನೇಮಕಾತಿ ಪ್ರಕ್ರಿಯೆಯ ಎಲ್ಲಾ ಹಂತಗಳಿಗೆ ಅವಶ್ಯಕವಾಗಿರುತ್ತದೆ.

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Karnataka Prisons Department recruitment notification has been released on official website for recruitmen of 662 jailor and Warder Posts. Interested eligible candidates can apply through online before 9th march 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X