ಕಂದಾಯ ಇಲಾಖೆಯಲ್ಲಿ 5 ಸಾಫ್ಟ್‌ವೇರ್ ಡೆವಲಪರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು.
ಅಧಿಸೂಚನೆಯನ್ನು ಓದಿದ ನಂತರ ಅರ್ಹ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಫೆಬ್ರವರಿ 11,2022ರೊಳಗೆ ಅರ್ಜಿಯನ್ನು ಹಾಕಬಹುದು. ಅಭ್ಯರ್ಥಿಗಳು ಹುದ್ದೆಗಳಿಗೆ ನೀಡಲಾಗುವ ವೇತನ ಮತ್ತು ಇನ್ನಿತರೆ ಮಾಹಿತಿಗಾಗಿ ಮುಂದೆ ಓದಿ.

Karnataka Revenue Department ನೇಮಕಾತಿ 2022 ಶೈಕ್ಷಣಿಕ ವಿದ್ಯಾರ್ಹತೆ :
ಕಂದಾಯ ಇಲಾಖೆ ನೇಮಕಾತಿಯ ಸಾಫ್ಟ್‌ವೇರ್ ಡೆವಲಪರ್ ಹುದ್ದೆಗಳಿಗೆ ಬಿ.ಇ/ಬಿ.ಟೆಕ್ ಅಥವಾ ಎಂಸಿಎ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಮತ್ತು ವೃತ್ತಿಯಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
Karnataka Revenue Department ನೇಮಕಾತಿ 2022 ವಯೋಮಿತಿ :
ಕಂದಾಯ ಇಲಾಖೆ ನೇಮಕಾತಿಯ ಸಾಫ್ಟ್‌ವೇರ್ ಡೆವಲಪರ್ ಹುದ್ದೆಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Karnataka Revenue Department ನೇಮಕಾತಿ 2022 ವೇತನದ ವಿವರ :
ಕಂದಾಯ ಇಲಾಖೆ ನೇಮಕಾತಿಯ ಸಾಫ್ಟ್‌ವೇರ್ ಡೆವಲಪರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 80,000/-ರೂ ವೇತನವನ್ನು ನೀಡಲಾಗುವುದು.
Karnataka Revenue Department ನೇಮಕಾತಿ 2022 ಆಯ್ಕೆ ಪ್ರಕ್ರಿಯೆ :
ಕಂದಾಯ ಇಲಾಖೆ ನೇಮಕಾತಿಯ ಸಾಫ್ಟ್‌ವೇರ್ ಡೆವಲಪರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
Karnataka Revenue Department ನೇಮಕಾತಿ 2022 ಅರ್ಜಿ ಶುಲ್ಕ :
ಕಂದಾಯ ಇಲಾಖೆ ನೇಮಕಾತಿಯ ಸಾಫ್ಟ್‌ವೇರ್ ಡೆವಲಪರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಅರ್ಜಿ ಶುಲ್ಕದ ವಿವರ ತಿಳಿಯಲು ನೇಮಕಾತಿ ಅಧಿಸೂಚನೆಯನ್ನು ಓದಬಹುದು.
Karnataka Revenue Department ನೇಮಕಾತಿ 2022 ಅರ್ಜಿ ಸಲ್ಲಿಕೆ :
ಕಂದಾಯ ಇಲಾಖೆ ನೇಮಕಾತಿಯ ಸಾಫ್ಟ್‌ವೇರ್ ಡೆವಲಪರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಫೆಬ್ರವರಿ 11,2022ರ ಸಂಜೆ 5:30ರೊಳಗೆ ಖುದ್ದಾಗಿ/ಅಂಚೆ ಮೂಲಕ/ಕೊರಿಯರ್ ಮೂಲಕ/ಇ-ಮೇಲ್ ಮೂಲಕ ಅರ್ಜಿಯನ್ನು ತಲುಪಿಸಬಹುದು.
ಕಚೇರಿ ವಿಳಾಸ:
ನಿರ್ದೇಶಕರು,
ಅಟಲ್‌ಜೀ ಜನಸ್ನೇಹಿ ನಿರ್ದೇಶನಾಲಯ,
ಎಸ್‌ಎಸ್‌ಎಲ್‌ಆರ್ ಕಟ್ಟಡ,
ಕೆ.ಆರ್.ಸರ್ಕಲ್,
ಬೆಂಗಳೂರು-560001.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ ಮತ್ತು ನೇಮಕಾತಿ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.



Click it and Unblock the Notifications











