ವೃತ್ತಿಪರ ಕೋರ್ಸುಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ

ಕರ್ನಾಟಕ ಜರ್ಮನ್ ಟೆಕ್ನಿಕಲ್ ಟ್ರೈನಿಂಗ್ ಸೆಂಟರ್, ಬೆಂಗಳೂರು ಇದರ ಸಹಯೋಗದೊಂದಿಗೆ ಮತೀಯ ಅಲ್ಪ ಸಂಖ್ಯಾತ ಸಮುದಾಯದವರಿಗೆ ವೃತ್ತಿಪರ ಕೋರ್ಸುಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ.

ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮವು (ಕರ್ನಾಟಕ ಸರ್ಕಾರ ಸ್ವಾಮ್ಯದ ಬೆಂಗಳೂರು) ಕರ್ನಾಟಕ ಜರ್ಮನ್ ಟೆಕ್ನಿಕಲ್ ಟ್ರೈನಿಂಗ್ ಸೆಂಟರ್, ಬೆಂಗಳೂರು ಇದರ ಸಹಯೋಗದೊಂದಿಗೆ ಮತೀಯ ಅಲ್ಪ ಸಂಖ್ಯಾತ ಸಮುದಾಯಗಳಾದ ಮುಸಲ್ಮಾನ, ಕ್ರೈಸ್ತರು, ಜೈನರು, ಭೌದ್ಧರು, ಸಿಖ್ಖರು ಮತ್ತು ಪಾರ್ಸಿ ಜನಾಂಗಕ್ಕೆ ಸೇರಿದ ಮತ್ತು ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ 544 ಅಭ್ಯರ್ಥಿಗಳಿಗೆ ವೃತ್ತಿಪರ ಕೋರ್ಸುಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ.

ಕೋರ್ಸ್ ವಿವರ

ಕ್ರಮ ಸಂಖ್ಯೆಕೋರ್ಸ್ ಹೆಸರುಅಭ್ಯರ್ಥಿಗಳ ಸಂಖ್ಯೆ
01ಇನ್ಫರ್ಮೇಷನ್ ಟೆಕ್ನಾಲಜಿ100
02ವೆಲ್ಡಿಂಗ್ ಟೆಕ್ನಾಲಜಿ160
03ಎಂಬೆಡೆಡ್ ಟೆಕ್ನಾಲಜಿ40
04ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ160
05ಇಂಡಸ್ಟ್ರಿಯಲ್ ಆಟೊಮೇಷನ್20
06ಆಟೊಮೊಬೈಲ್ ಟೆಕ್ನಾಲಜಿ64

ಮೇಲ್ಕಂಡ ವೃತ್ತಿಪರ ಕೋರ್ಸುಗಳಿಗೆ ಇದೊಂದು ಉಚಿತ ತರಬೇತಿ ಕಾರ್ಯಕ್ರಮವಾಗಿದ್ದು ಕೆ.ಜಿ.ಟಿ.ಟಿ.ಐ ಸಂಸ್ಥೆಯು ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸುತ್ತದೆ.

ಕೌಶಲ್ಯ ಅಭಿವೃದ್ಧಿ ತರಬೇತಿ

ತರಬೇತಿ ನೀಡುವ ಸ್ಥಳ

ಕರ್ನಾಟಕ ಜರ್ಮನ್ ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್,
ಸಿಇಒ ಬಿಲ್ಡಿಂಗ್, ಕೌಶಲ್ಯ ಭವನ ಕ್ಯಾಂಪಸ್,
ಡೈರಿ ವೃತ್ತ , ಬನ್ನೇರುಘಟ್ಟ ರಸ್ತೆ ಬೆಂಗಳೂರು-560029

ಸಂಪರ್ಕಿಸುವ ದೂರವಾಣಿ ಸಂಖ್ಯೆ: 080-2664256 , 22114815
ಮೊಬೈಲ್ ಸಂಖ್ಯೆ: 9071390850 , 9342815004
ತರಬೇತಿಗಳು ದಿನಾಂಕ 15-05-2017 ಸೋಮವಾರದಿಂದ ಪ್ರಾರಂಭವಾಗುವುವು.

ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ

ಅರ್ಹತೆ

  • ಅಭ್ಯರ್ಥಿಯು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು.
  • ಅಭ್ಯರ್ಥಿಯು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
  • ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಪ್ರಾಶಸ್ತ್ಯ ನೀಡಲಾಗುವುದು.
  • ಎಸ್ ಎಸ್ ಎಲ್ ಸಿ (ಉತ್ತೀರ್ಣ/ಅನುತ್ತೀರ್ಣ) ವಿದ್ಯಾರ್ಹತೆ
  • ಶಾಲೆಬಿಟ್ಟ ಪ್ರಮಾಣ ಪತ್ರವನ್ನು ಹೊಂದಿರಬೇಕು.
  • ಕೋರ್ಸಿನ ಆರಂಭದಿಂದ 5 ಕೋರ್ಸುಗಳ ತರಬೇತಿಗೆ ಅಭ್ಯರ್ಥಿಯು ಬಿ.ಇ ಅಥವಾ ಎಲೆಕ್ಟ್ರಿಕಲ್/ ಮೆಕ್ಯಾನಿಕಲ್ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕು.
  • 6ನೇ ಕೋರ್ಸಿಗೆ ಕೋರ್ಸಿಗೆ ಅಭ್ಯರ್ಥಿಯು ಬಿ.ಇ ಅಥವಾ ಮೆಕ್ಯಾನಿಕಲ್/ಆಟೊಮೊಬೈಲ್ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕು.
  • ಅಭ್ಯರ್ಥಿಯು ವಾಸಸ್ಥಳ ಪುರಾವೆಗಾಗಿ ಆಧಾರ್ ಕಾರ್ಡ್, ವೋಟರ್ ಐ.ಡಿ, ಡ್ರೈವಿಂಗ್ ಲೈಸೆನ್ಸ್, ಪಡಿತರ ಚೇಟಿ ಪೈಕಿ ಯಾವುದಾದರೊಂದು ದಾಖಲೆ ಹೊಂದಿರಬೇಕು.

ಅರ್ಜಿ ಸಲ್ಲಿಕೆ

ಕರ್ನಾಟಕ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮವ ಬೆಂಗಳೂರು ನಗರ ಜಿಲ್ಲಾ ಕಛೇರಿಯಲ್ಲಿ ಅಥವಾ ಕೆ.ಜಿ.ಟಿ.ಟಿ.ಐ ನಿಂದ ಅರ್ಜಿಗಳನ್ನು ಪಡೆಯಬಹುದು ಅಥವಾ ನಿಗಮದ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಪ್ರವೇಶ ಪಡೆಯುವ ಸಮಯದಲ್ಲಿ 03 ಪಾಸ್ಪೋರ್ಟ್ ಅಳತೆಯ ಭಾವಚಿತ್ರ ನೀಡಬೇಕು.

ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು "ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, 2 ನೇ ಮಹಡಿ, ಹಮೀದ್ ಶಾ ಕಾಂಪ್ಲೆಕ್ಸ್, ಹಲಸೂರು ಗೇಟ್ ಪೊಲೀಸ್ ಸ್ಟೇಷನ್ ಹತ್ತಿರ ಬೆಂಗಳೂರು ಮತ್ತು ಕೆ.ಜಿ.ಟಿ.ಟಿ.ಐ ಇಲ್ಲಿಗೆ ದಿನಾಂಕ 05-05-2017 ರ ಒಳಗಾಗಿ ಸಲ್ಲಿಸಬೇಕು

ಹೆಚ್ಚಿನ ಮಾಹಿತಿಗಾಗಿ bengaluru.kgtti.com ಗಮನಿಸಿ

More News  

For Quick Alerts
ALLOW NOTIFICATIONS  
For Daily Alerts

English summary
The Karnataka Minorities Development Corporation Ltd. in collaboration with KGTTI will impart skill development training for 544 candidates
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+