KIMS: ವಿವಿಧ 13 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿಯಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಖಾಲಿ ಇರುವ 13 ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳುವುದಾಗಿ ಪ್ರಕಟಣೆ ಹೊರಡಿಸಿದೆ.

ಕಿಮ್ಸ್ ನಲ್ಲಿ 13 ಹುದ್ದೆಗಳ ನೇಮಕಾತಿ

ಹೈದರಾಬಾದ್ ಕರ್ನಾಟಕ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳು ಮಾತ್ರ ಸಂಸ್ಥೆಯ ವೆಬ್‌ಸೈಟ್ ನಲ್ಲಿ ಅರ್ಜಿ ಫಾರ್ಮ್ ಡೌನ್‌ಲೋಡ್ ಮಾಡಿಕೊಂಡು ಏಪ್ರಿಲ್ 24,2020 ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ನಿರ್ದೇಶಕರು, ಕಿಮ್ಸ್ ಹುಬ್ಬಳ್ಳಿ ಇವರ ಹೆಸರಿಗೆ ತಲುಪುವಂತೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:

ಟೆನ್ಯೂರ-ಸೀನಿಯರ್ ರೆಸಿಡೆಂಟ್/ಟ್ಯೂಟರ್- 8 ಹುದ್ದೆಗಳು
ಆರ್‌.ಹೆಚ್‌.ಟಿ.ಸಿ -ಲೇಡಿ ಮೆಡಿಕಲ್ ಆಫೀಸರ್ -1 ಹುದ್ದೆ
ಜಿ.ಡಿ.ಎಂ.ಓ /ಸೀನಿಯರ್ ಸ್ಪೆಷಲಿಸ್ಟ್- 3 ಹುದ್ದೆಗಳು
ರೇಡಿಯಾಲಜಿಸ್ಟ್ -1 ಹುದ್ದೆ
ಒಟ್ಟು - 13 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅಂಗೀಕೃತ ಸಂಸ್ಥೆಯಿಂದ ಎಂ.ಬಿ.ಬಿ.ಎಸ್/ಎಂ.ಡಿ/ಎಮ್‌.ಎಸ್‌. ಪದವಿಯನ್ನು ಹೊಂದಿರಬೇಕು.

ವಯೋಮಿತಿ:

ಏಪ್ರಿಲ್ 24,2020 ಅನ್ವಯ ಗರಿಷ್ಟ 35 ವರ್ಷದೊಳಗಿನ ಸಾಮಾನ್ಯ ಅಭ್ಯರ್ಥಿಗಳು, ಗರಿಷ್ಟ 38 ವರ್ಷದೊಳಗಿನ ಪ್ರವರ್ಗ-2ಎ/2ಬಿ/3ಎ/3ಬಿಯೊಳಗಿನ ಅಭ್ಯರ್ಥಿಗಳು ಮತ್ತು ಗರಿಷ್ಟ 40 ವರ್ಷದೊಳಗಿನ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ /ಪ್ರವರ್ಗ-1ರ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನದ ವಿವರ:

ಟೆನ್ಯೂರ-ಸೀನಿಯರ್ ರೆಸಿಡೆಂಟ್/ಟ್ಯೂಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 45,000/-ರೂ, ಆರ್‌.ಹೆಚ್‌.ಟಿ.ಸಿ -ಲೇಡಿ ಮೆಡಿಕಲ್ ಆಫೀಸರ್, ರೇಡಿಯಾಲಜಿಸ್ಟ್ ಮತ್ತು ಜಿ.ಡಿ.ಎಂ.ಓ /ಸೀನಿಯರ್ ಸ್ಪೆಷಲಿಸ್ಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 52,650/- ರಿಂದ 97,100/-ರೂ ವೇತನವನ್ನು ನೀಡಲಾಗುವುದು.

ಶುಲ್ಕದ ವಿವರ:

ಗ್ರೂಪ್ 'ಎ' ವೃಂದ ಅಭ್ಯರ್ಥಿಗಳು 500/-ರೂಗಳ ಡಿ.ಡಿ, ಸಾಮಾನ್ಯ ಅರ್ಹತೆ ಮತ್ತು ಪ್ರವರ್ಗಗಳ ಅಭ್ಯರ್ಥಿಗಳು 200/-ರೂ ಹಾಗೂ ಪರಿಶಿಷ್ಟ ಪಂಗಡ/ಪ್ರವರ್ಗ-1ಗಳ ಅಭ್ಯರ್ಥಿಗಳು 100/-ರೂಗಳ ಡಿ.ಡಿಯನ್ನು ನಿರ್ದೇಶಕರು, ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಹುಬ್ಬಳ್ಳಿ ಇವರ ಹೆಸರಿಗೆ ಪಡೆದು ಅರ್ಜಿ ಜೊತೆಗೆ ಸಲ್ಲಿಸತಕ್ಕದ್ದು.

ಅರ್ಜಿ ಸಲ್ಲಿಸುವುದು ಹೇಗೆ:

ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ http://kimshubballi.org/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಂಸ್ಥೆಯ ಕಚೇರಿಗೆ ಏಪ್ರಿಲ್ 24,2020ರ ಸಾಯಂಕಾಲ 5 ಗಂಟೆಯೊಳಗೆ ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಸುವಾಗ ಲಕೋಟೆಯ ಮೇಲೆ ದಪ್ಪ ಅಕ್ಷರದಲ್ಲಿ ಹುದ್ದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು.

ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಪ್ರಕಟಣೆಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
KIMS hubballi recruitment 2020 notification released for the recruitment of 13 various posts. Interested candidates can apply before 24th April 2020.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+