KIMS Karwar Recruitment 2020: 36 ಬೋಧಕ ಹುದ್ದೆಗಳ ನೇಮಕಾತಿ..ನ.6ರೊಳಗೆ ಅರ್ಜಿ ಹಾಕಿ

ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕಾರವಾರ ಇಲ್ಲಿ 36 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು.

ಅರ್ಹ ಅಭ್ಯರ್ಥಿಗಳು ನವೆಂಬರ್ 6,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

ಕಿಮ್ಸ್‌ ನಲ್ಲಿ 36 ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ...ನ.6ರೊಳಗೆ ಅರ್ಜಿ ಹಾಕಿ

ಹುದ್ದೆಗಳ ವಿವರ:

ಪ್ರಾಧ್ಯಾಪಕರು/ಸೂಪರ್ ಸ್ಪೆಷಾಲಿಸ್ಟ್ - 7 ಹುದ್ದೆಗಳು
ಪ್ರಾಧ್ಯಾಪಕರು - 7 ಹುದ್ದೆಗಳು
ಸಹ ಪ್ರಾಧ್ಯಾಪಕ - 5 ಹುದ್ದೆಗಳು
ಸಹಾಯಕ ಪ್ರಾಧ್ಯಾಪಕರು - 17 ಹುದ್ದೆಗಳು
ಒಟ್ಟು 36 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ:

ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನೇಮಕಾತಿಯ ಬೋಧಕ ಹುದ್ದೆಗಳಿಗೆ ಕನಿಷ್ಟ ಅರ್ಹತೆ ಹಾಗೂ ಎಂ.ಸಿ.ಐ /ಎನ್‌.ಎಂ.ಸಿ ನಿಯಮಾವಳಿಗಳ ಪ್ರಕಾರ ಸೇವಾನುಭವ ಹೊಂದಿರಬೇಕು. ಎಂ,ಸಿ,ಐ/ಎನ್‌.ಎಂ.ಸಿ ಮಾನ್ಯತೆ ಪಡೆಯದೇ ಇರುವ ಪದವಿಯನ್ನು ಹೊಂದಿರುವ ಅಭ್ಯರ್ಥಿಯ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.

ವಯೋಮಿತಿ:

ಸಂಸ್ಥೆಯ ನೇಮಕಾತಿ ನಿಯಮಾನುಸಾರ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ವೇತನದ ವಿವರ:

ನೇಮಕಾತಿ ನಂತರ ಅಭ್ಯರ್ಥಿಗಳಿಗೆ ವೇತನವನ್ನು ಸರ್ಕಾರಿ ನಿಯಮಾವಳಿಗಳನ್ವಯ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕ ಪಾವತಿಸಬೇಕಿದ್ದು, ಸಾಮಾನ್ಯ ಅಭ್ಯರ್ಥಿಗಳು 500/-ರೂ ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ನವೆಂಬರ್ 6,2020ರೊಳಗೆ ಪಾವತಿಸಬೇಕಿರುತ್ತದೆ.

ಅರ್ಜಿ ಸಲ್ಲಿಕೆ:

ಕಾರವಾರದ ಕಿಮ್ಸ್‌ ನೇಮಕಾತಿಯ ಬೋಧನಾ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿಯನ್ನು ನವೆಂಬರ್ 6,2020ರ ಸಂಜೆ 4 ಗಂಟೆಯೊಳಗೆ ಖುದ್ದಾಗಿ ಅಥವಾ ರಿಜಿಸ್ಟರ್ ಅಂಚೆಯ ಮೂಲಕ ನಿರ್ದೇಶಕರ ಕಚೇರಿ, ಕಿಮ್ಸ್ ಕಾರವಾರ ಇಲ್ಲಿಗೆ ಅರ್ಜಿಯನ್ನು ಸಲ್ಲಿಸತಕದ್ದು ಹಾಗೂ ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ನಮೂದಿಸತಕ್ಕದ್ದು.
ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.

ಕಿಮ್ಸ್‌ ನಲ್ಲಿ 36 ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ...ನ.6ರೊಳಗೆ ಅರ್ಜಿ ಹಾಕಿ

More News  

For Quick Alerts
ALLOW NOTIFICATIONS  
For Daily Alerts

English summary
KIMS karwar recruitment 2020 notification has been released for 36 teaching posts. Interested candidates can apply before November 6.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+