KOF Raichur Recruitment 2021 : 17 ಸಹಾಯಕ ವ್ಯವಸ್ಥಾಪಕ, ಸಹಾಯಕ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ರಾಯಚೂರು ಇದರಲ್ಲಿ ಖಾಲಿ ಇರುವ 17 ಸಹಾಯಕ ವ್ಯವಸ್ಥಾಪಕರು, ಸಹಾಯಕರು ಮತ್ತು ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಜುಲೈ 23ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದಲ್ಲಿ 17 ಹುದ್ದೆಗಳ ನೇಮಕಾತಿ

ಹುದ್ದೆಗಳ ವಿವರ:

ಸಹಾಯಕ ವ್ಯವಸ್ಥಾಪಕರು (ಬೀಜ) 1 ಹುದ್ದೆ
ಸಹಾಯಕ ವ್ಯವಸ್ಥಾಪಕರು (ವಿತ್ತ) 1 ಹುದ್ದೆ
ಮಾರಾಟ ಸಹಾಯಕರು 12 ಹುದ್ದೆಗಳು
ಟೆಕ್ನಿಕಲ್ ಅಸಿಸ್ಟೆಂಟ್ 1 ಹುದ್ದೆ
ಬೆರಳಚ್ಚುಗಾರರು 1 ಹುದ್ದೆ
ಚಾಲಕರು 1 ಹುದ್ದೆ
ಒಟ್ಟು 17 ಹುದ್ದೆಗಳು

ವಿದ್ಯಾರ್ಹತೆ:

ಸ್ನಾತಕೋತ್ತರ ಪದವಿ, ಎಂ.ಕಾಂ, ಬಿ.ಕಾಂ/ಬಿಬಿಎಂ, ಐಟಿಐ, ಡಿಪ್ಲೋಮಾ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:

ಹುದ್ದೆಗಳಿಗನುಸಾರ ಕನಿಷ್ಟ 18 ರಿಂದ ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ವೇತನ:

ಸಹಾಯಕ ವ್ಯವಸ್ಥಾಪಕರು (ಬೀಜ) 40,900/- ರಿಂದ 78,200/-ರೂ, ಸಹಾಯಕ ವ್ಯವಸ್ಥಾಪಕರು (ವಿತ್ತ) 40,900/- ರಿಂದ 78,200/-ರೂ, ಮಾರಾಟ ಸಹಾಯಕರು, ಟೆಕ್ನಿಕಲ್ ಅಸಿಸ್ಟೆಂಟ್, ಬೆರಳಚ್ಚುಗಾರರು, ಚಾಲಕರು 21,400/- ರಿಂದ 42,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಪ.ಜಾ/ಪ.ಪಂ, ಪ್ರವರ್ಗ-1ರ ಹಾಗೂ ಅಂಗವಿಕಲ ಅಭ್ಯರ್ಥಿಗಳು 500/-ರೂ, ಇತರೆ ಅಭ್ಯರ್ಥಿಗಳು 1000/-ರೂ ಅರ್ಜಿ ಶುಲ್ಕವನ್ನು ಡಿಡಿ/ಪೇ ಆರ್ಡರ್ ಮೂಲಕ ಪಾವತಿಸಬಹುದು.

ಅರ್ಜಿ ಸಲ್ಲಿಕೆ:

ಒಕ್ಕೂಟದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಧಿಸೂಚನೆಯಲ್ಲಿ ನೀಡಲಾಗಿರುವ ಅರ್ಜಿ ನಮೂನೆಯಲ್ಲಿ ಅರ್ಜಿಯನ್ನು ಬೆರಳಚ್ಚು ಮಾಡಿಸಿ ಪೂರ್ಣ ವಿವರಗಳೊಂದಿಗೆ ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಜುಲೈ 23,2021ರ ಸಂಜೆ 5:30ರೊಳಗೆ ಸಲ್ಲಿಸುವುದು. ಅರ್ಜಿಗಳನ್ನು ಆಫ್‌ಲೈನ್ ನಲ್ಲಿ ಮಾತ್ರ ಸಲ್ಲಿಸುವುದು. ಆನ್‌ಲೈನ್ ನಲ್ಲಿ ಅವಕಾಶವಿರುವುದಿಲ್ಲ.

ಕಚೇರಿ ವಿಳಾಸ:
ವ್ಯವಸ್ಥಾಪಕ ನಿರ್ದೇಶಕರು,
ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ,
ಸಂಘಗಳ ಒಕ್ಕೂಟ ನಿಯಮಿತ,
ಪೋಸ್ಟ್ ಬಾಕ್ಸ್ ಸಂಖ್ಯೆ : 328
ಇಂಡಸ್ಟ್ರಿಯಲ್ ಏರಿಯಾ, ಹೈದರಾಬಾದ್ ರೋಡ್,
ರಾಯಚೂರು-584 102.

ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
KOF raichur recruitment 2021 notification has been released for 17 assistant manger, assistant and various posts.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+