Kolar District Court Recruitment 2022 : 32 ಜವಾನ ಮತ್ತು ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೋಲಾರ ಜಿಲ್ಲೆಯಲ್ಲಿ ಕಾರ್ಯನಿವರ್ಹಹಿಸುತ್ತಿರುವ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ 32 ಜವಾನ ಮತ್ತು ಶೀಘ್ರಲಿಪಿಗಾರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು.

ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಜೂನ್ 27,2022 ರಿಂದ ಜುಲೈ 26,2022ರೊಳಗೆ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

ಕೋಲಾರ ಜಿಲ್ಲಾ ನ್ಯಾಯಲಯದಲ್ಲಿ ಉದ್ಯೋಗಾವಕಾಶ.. ಜು.26ರೊಳಗೆ ಅರ್ಜಿ ಹಾಕಿ

ಹುದ್ದೆಗಳ ವಿವರ :

ಜವಾನ - 22 ಹುದ್ದೆಗಳು
ಶೀಘ್ರಲಿಪಿಗಾರ - 10 ಹುದ್ದೆಗಳು
ಒಟ್ಟು 32 ಹುದ್ದೆಗಳು

ವಿದ್ಯಾರ್ಹತೆ :

ಶೀಘ್ರಲಿಪಿಗಾರ ಹುದ್ದೆಗಳಿಗೆ ಪದವಿಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣ ಅಥವಾ ಮೂರು ವರ್ಷಗಳ ಡಿಪ್ಲೋಮಾ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸುವ ಕನ್ನಡ ಮತ್ತು ಇಂಗ್ಲೀಷ್ ಬೆರಳಚ್ಚು ಮತ್ತು ಶೀಘ್ರಲಿಪಿಯಲ್ಲಿ ಹಿರಿಯ ದರ್ಜೆ ಪರೀಕ್ಷೆ ಉತ್ತೀರ್ಣತೆ ಅಥವಾ ಡಿಪ್ಲೋಮಾ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಜವಾನ ಹುದ್ದೆಗಳಿಗೆ 10ನೇ ತರಗತಿಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಜೊತೆಗೆ ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.

ಕೋಲಾರ ಜಿಲ್ಲಾ ನ್ಯಾಯಲಯದಲ್ಲಿ ಉದ್ಯೋಗಾವಕಾಶ.. ಜು.26ರೊಳಗೆ ಅರ್ಜಿ ಹಾಕಿ

ಹುದ್ದೆಗಳಿಗೆ ನೀಡಲಾಗುವ ವೇತನದ ವಿವರ :

ಹುದ್ದೆಗಳ ಹೆಸರು - ವೇತನ (ತಿಂಗಳಿಗೆ)
ಶೀಘ್ರಲಿಪಿಗಾರ -ತಿಂಗಳಿಗೆ 27,650/- ರಿಂದ 52,650/-ರೂ
ಜವಾನ ರೂ.17000/- ರಿಂದ 28950/-ರೂ

ವಯೋಮಿತಿ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜುಲೈ 26,2022ರ ಅನ್ವಯ ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಟ 35 ವರ್ಷ, ಪ್ರವರ್ಗ-2A,ಪ್ರವರ್ಗ-2B,ಪ್ರವರ್ಗ-3A ಮತ್ತು ಪ್ರವರ್ಗ 3B ಯ ಗರಿಷ್ಠ 38 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ರ ಗರಿಷ್ಠ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ವಯೋಮಿತಿ ಸಡಿಲಿಕೆಯ ವಿವರವನ್ನು ತಿಳಿಯಲು ಅಧಿಸೂಚನೆಯನ್ನು ಓದಬಹುದು.

ಆಯ್ಕೆಯ ವಿಧಾನ :

ಶೀಘ್ರಲಿಪಿಗಾರ ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಇಂಗ್ಲೀಷ್ ಭಾಷೆಗಳಲ್ಲಿ ಒಂದು ನಿಮಿಷಕ್ಕೆ 120 ಶಬ್ದಗಳಂತೆ 5 ನಿಮಿಷಗಳ ಉಕ್ತಲೇಖನ ನೀಡಿ ನಂತರ 45 ನಿಮಿಷಗಳ ಅವಧಿಯಲ್ಲಿ ಬೆರಳಚ್ಚು ಯಂತ್ರದ ಮೇಲೆ ಲಿಪ್ಯಂತರ ಮಾಡಲು ಹೇಳಲಾಗುವುದು. ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಒಂದು ನಿಮಿಷಕ್ಕೆ 260 ಅಕ್ಷರಗಳ ವೇಗದಲ್ಲಿ 5 ನಿಮಿಷಗಳ ಉಕ್ತಲೇಖನ ನೀಡಲಾಗುವುದು ಅದನ್ನು ಬೆರಳಚ್ಚು ಯಂತ್ರ/ಕಂಪ್ಯೂಟರ್ ಮೇಲೆ 45 ನಿಮಿಷದಲ್ಲಿ ಲಿಪ್ಯಂತರ ಮಾಡಬೇಕು.

ಸಿಪಾಯಿ ಹುದ್ದೆಗಳಿಗೆ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಪಡೆದ ಸರಾಸರಿ ಅಂಕಗಳ ಆಧಾರದ ಮೇಲೆ ಒಂದು ಹುದ್ದೆಗೆ 1:10 ಅನುಪಾತದಂತೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನಕ್ಕೆ ಒಟ್ಟು 10 ಅಂಕಗಳನ್ನು ನಿಗಧಿಪಡಿಸಲಾಗಿದೆ. ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು ೧೦ನೇ ತರಗತಿಯ್ಲಿ ಪಡೆದ ಅಂಕಗಳನ್ನು ಸಂದರ್ಶನಕ್ಕೆ ಕರೆಯಲು ಮಾತ್ರ ಪರಿಗಣಿಸಲಾಗುವುದು.

ನಿಗದಿತ ಅರ್ಜಿ ಶುಲ್ಕ :

ಸಾಮಾನ್ಯ, ಪ್ರವರ್ಗ 2A,2B,3A,3Bಗೆ ಸೇರಿದ ಅಭ್ಯರ್ಥಿಗಳು 200/-ರೂ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳು 100/-ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ.

ಅರ್ಜಿ ಶುಲ್ಕ ಪಾವತಿಸಬೇಕಾದ ವಿಧಾನ :

ನಿಗದಿತ ಶುಲ್ಕವನ್ನು ನ್ಯಾಯಾಲಯದ ವೆಬ್ ಸೈಟ್ https://districts.ecourts.gov.in/kolar-onlinerecruitment ನಲ್ಲಿ ನೀಡಲಾದ ಲಿಂಕ್ ಮುಖಾಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ State Bank Collect ಮೂಲಕ Online Payment ಅನ್ನು net banking/credit card/ debit card/challan downloadಸೌಲಭ್ಯದ ಮೂಲಕ ಪಾವತಿ ಮಾಡಬಹುದಾಗಿದೆ.

ಈ ರೀತಿ net banking/credit card/ debit card/challan download ಸೌಲಭ್ಯದ ಮೂಲಕ ಶುಲ್ಕ ಪಾವತಿ ಮಾಡಲು ಇಚ್ಛಿಸದ ಅಭ್ಯರ್ಥಿಗಳು ಚಲನ್ ಪ್ರತಿಯನ್ನು ಅಧಿಕೃತ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಂಡು ಅದರ ಪ್ರಿಂಟೌಟ್ ಅನ್ನು ಪಡೆದುಕೊಂಡು ಎಸ್.ಬಿ.ಐ ನ ಯಾವುದೇ ಶಾಖೆಗೆ ಜುಲೈ 28,2022ರೊಳಗೆ ಹಾಜರುಪಡಿಸಿ ಶುಲ್ಕವನ್ನು ಪಾವತಿಸತಕ್ಕದ್ದು.
ಈ ಮೇಲಿನ ವಿಧಾನಗಳನ್ನು ಹೊರತು ಪಡಿಸಿ ಯಾವುದೇ ಡಿಮಾಂಡ್ ಡ್ರಾಫ್ಟ್, ಪೋಸ್ಟಲ್ ಆರ್ಡರ್, ನಗದು, ಮನಿ ಆರ್ಡರ್ ಇವುಗಳ ರೂಪದಲ್ಲಿ ಶುಲ್ಕವನ್ನು ಸ್ವೀಕರಿಸಲಾಗುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ :

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಬಾಗಲಕೋಟೆ ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್ https://districts.ecourts.gov.in/kolar-onlinerecruitment ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಜೂನ್ 27,2022 ರಿಂದ ಜುಲೈ 26,2022ರ ರಾತ್ರಿ 11:59ರೊಳಗೆ ಮಾತ್ರ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ. ಆನ್‌ಲೈನ್ ಹೊರತುಪಡಿಸಿ ಇತರೆ ಯಾವುದೇ ವಿಧಾನದಲ್ಲಿ ಕಳುಹಿಸಿದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.

For Quick Alerts
ALLOW NOTIFICATIONS  
For Daily Alerts

English summary
District court of kolar recruitment 2022 notification has been released for 32 peon and stenographer posts. Interested candidates can apply before July 26.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X