ಜಿಲ್ಲಾ ಪಂಚಾಯತ್ ಕೊಪ್ಪಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಗ್ರಾಮ ಪಂಚಾಯತ್ ಕಾರ್ಯದರ್ಶಿ ಗ್ರೇಡ್ 2 ಬ್ಯಾಕ್ ಲಾಗ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 3, 2018 ಕೊನೆಯ ದಿನಾಂಕ.

ಜಿಲ್ಲಾ ಪಂಚಾಯತ್ ಕೊಪ್ಪಳ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| ವರ್ಗ | ಡೀಟೆಲ್ಸ್ |
| ಹುದ್ದೆ ಹೆಸರು | ಗ್ರೇಡ್ 2 ಕಾರ್ಯದರ್ಶಿ |
| ಸಂಸ್ಥೆ | ಜಿಲ್ಲಾ ಪಂಚಾಯತ್ ಕೊಪ್ಪಳ |
| ಸ್ಥಳ | ಕೊಪ್ಪಳ |
| ವಿದ್ಯಾರ್ಹತೆ | ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು |
| ಕೌಶಲ್ಯ | ಕ್ಲರಿಕಲ್ ವರ್ಕ್ |
| ಇಂಡಸ್ಟ್ರಿ | ಜಿಲ್ಲಾ ಪಂಚಾಯತ್ |
| ಅನುಭವ | ತಿಳಿಸಿಲ್ಲ |
| ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೊನೆಯ ದಿನಾಂಕ | ಜುಲೈ 3, 2018 |
ಅರ್ಜಿ ಸಲ್ಲಿಕೆ ಹೇಗೆ:
ನಿಗದಿತ ಅರ್ಜಿಯನ್ನು ಭರ್ತಿಮಾಡಿ ನೇರವಾಗಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಕಾರ್ಯಾಲಯ ಜಿಲ್ಲಾ ಪಂಚಾತ್, ಜಿಲ್ಲಾ ಆಡಳಿತ ಭವನ, ಹೊಸಪೇಟ್ ರೋಡ್, ಕೊಪ್ಪಳದಲ್ಲಿ ದ್ವಿ ಪ್ರತಿಯಲ್ಲಿ ಸಲ್ಲಿಸಲು ತಿಳಿಸಿದೆ. ಅರ್ಜಿಗಳನ್ನ ಖುದ್ದಾಗಿ ಅಥವಾ ನೊಂದಾಯಿತ ಅಂಚೆ ಮೂಲಕ ಸಲ್ಲಿಸಲು ಮಾತ್ರ ಅವಕಾಶವಿರುತ್ತದೆ. ಅಂಚೆ ಮೂಲಕ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಲಕೋಟೆಯ ಮೇಲೆ ದಪ್ಪ ಅಕ್ಷರದಲ್ಲಿ ಪರಿಶಿಷ್ಟ ಜಾತಿ ಮಹಿಳಾ ಅಭ್ಯರ್ಥಿ ಗ್ರೇಡ್ -2 ಕಾರ್ಯದರ್ಶಿ ಹುದ್ದೆಗೆ ನೇಮಕಾತಿ ಎಂದು ಬರೆದಿರಬೇಕು.
ಹೆಚ್ಚಿನ ಮಾಹಿತಿಗೆ ಈ ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
ಅರ್ಜಿ ಕಳುಹಿಸಬೇಕಾದ ವಿಳಾಸ:
ಅರ್ಜಿ ಕವರ್ ಮೇಲೆ ಹುದ್ದೆಯ ಹೆಸರು ನಮೂದಿಸಿ, ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ಯಾಲಯ
ಜಿಲ್ಲಾ ಪಂಚಾಯತ್
ಜಿಲ್ಲಾ ಆಡಳಿತ ಭವನ
ಕೊಪ್ಪಳ


Click it and Unblock the Notifications











