ಕೆಪಿಸಿಎಲ್ ಡ್ರೈವರ್ ಹುದ್ದೆ ನೇಮಕಾತಿ: ಹೆಚ್ಚುವರಿ ಹುದ್ದೆಗಳ ಸೇರ್ಪಡೆ

ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ನೇಮಕಾತಿ ಪ್ರಕ್ರಿಯೆಯಲ್ಲಿ ಅಸಿಸ್ಟಂಟ್ ಆಪರೇಟಿವ್ ಡ್ರೈವರ್ ಹುದ್ದೆಗೆ ಪ್ರಕಟಿಸಿರುವ 9 ಹುದ್ದೆಗಳ ಜೊತೆಗೆ ಹೆಚ್ಚುವರಿಯಾಗಿ 10 ಹುದ್ದೆಗಳನ್ನು ಸೇರಿಸಿ ಪರಿಷ್ಕೃತ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಲಾಗಿದೆ

ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ನೇಮಕಾತಿ ಪ್ರಕ್ರಿಯೆಯಲ್ಲಿ ಮಿಕ್ಕುಳಿದ ವೃಂದ ಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಸಿಸ್ಟಂಟ್ ಆಪರೇಟಿವ್ (ಡ್ರೈವರ್) ಹುದ್ದೆಗೆ ಪ್ರಕಟಿಸಿರುವ 09 ಹುದ್ದೆಗಳ ಜೊತೆಗೆ ಹೆಚ್ಚುವರಿಯಾಗಿ 10 ಹುದ್ದೆಗಳನ್ನು ಸೇರಿಸಿ ಪರಿಷ್ಕೃತ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಲಾಗಿದೆ.

ಈ ಹಿಂದೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪುನಃ ಅರ್ಜಿ ಸಲ್ಲಿಸಬೇಕಾಗಿಲ್ಲ. ಆದರೆ ಹೊಸದಾಗಿ ಸೇರಿರುವ ಪ್ರವರ್ಗಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಆನ್ಲೈನ್ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ 03-11-2017 (ಸಂಜೆ 5.00 ರವರೆಗೆ)

ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದಲ್ಲಿ 43 ಹುದ್ದೆಗಳ ನೇಮಕಾತಿಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದಲ್ಲಿ 43 ಹುದ್ದೆಗಳ ನೇಮಕಾತಿ

ಕೆಪಿಸಿಎಲ್ ಹೆಚ್ಚುವರಿ ಹುದ್ದೆಗಳ ಸೇರ್ಪಡೆ

ಹುದ್ದೆಯ ವಿವರ

ಅಸಿಸ್ಟಂಟ್ ಆಪರೇಟಿವ್ ಡ್ರೈವರ್- 19 ಹುದ್ದೆಗಳು

ವೇತನ ಶ್ರೇಣಿ:ರೂ.8390-22845/-

ವಿದ್ಯಾರ್ಹತೆ

ಎಸ್ ಎಸ್ ಎಲ್ ಸಿ/ಸಮಾನಾಂತರ (ರೆಗ್ಯುಲರ್ ಕೋರ್ಸ್) ಮತ್ತು ಲಘು ವಾಹನ ಚಾಲನಾ ಪರವಾನಗಿ (ಎಲ್ಎಂವಿ)ಮತ್ತು ಸಾರ್ವಜನಿಕ/ಖಾಸಗಿ ಕಂಪನಿ/ಸಂಸ್ಥೆಗಳಲ್ಲಿ ಲಘು ವಾಹನ ಚಾಲನೆ (ಎಲ್ಎಂವಿ)ಯಲ್ಲಿ ಎರಡು ವರ್ಷಗಳ ಅನುಭವ.

ಟಿಪ್ಪಣಿ

ಬಾಹ್ಯ ಅಥವಾ ಮುಕ್ತ ವಿಶ್ವವಿದ್ಯಾನಿಲಯ ಅಥವಾ ಮುಕ್ತ ಶಾಲೆಯಿಂದ ಪಡೆದ ಎಸ್ ಎಸ್ ಎಲ್ ಸಿ/10 ನೇ ತರಗತಿ (ಬ್ರಿಡ್ಜ್ ಕೋರ್ಸ್)ಗಳು ಅರ್ಹವಲ್ಲ.

ವಯೋಮಿತಿ

ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು ಮತ್ತು ಈ ಕೆಳಗಿನಂತೆ ವರ್ಗಾವಾರು ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.

ಸಾಮಾನ್ಯ ವರ್ಗ :35 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ, 3ಬಿ :38 ವರ್ಷಗಳು ಪ.ಜಾ/ಪ.ಪಂ/ಪ್ರವರ್ಗ-1: 40 ವರ್ಷಗಳು, ಮಾಜಿ ಸೈನಿಕ 45 ವರ್ಷಗಳು.

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಕೆಪಿಸಿಎಲ್ ವೆಬ್ಸೈಟ್ ನಲ್ಲಿ ಆನ್-ಲೈನ್ ಮೂಲಕ ಮಾತ್ರ ಸಲ್ಲಿಸತಕ್ಕದ್ದು.

ಐಒಸಿಎಲ್: 354 ಟ್ರೇಡ್ ಅಪ್ರೆಂಟಿಸ್ ನೇಮಕಾತಿ ಐಒಸಿಎಲ್: 354 ಟ್ರೇಡ್ ಅಪ್ರೆಂಟಿಸ್ ನೇಮಕಾತಿ

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ.500/- +15 ಪೋಸ್ಟಲ್ ಸರ್ವಿಸ್ ಚಾರ್ಜಸ್
  • ಪ.ಜಾ/ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.400/- +15 ಪೋಸ್ಟಲ್ ಸರ್ವಿಸ್ ಚಾರ್ಜಸ್
  • ಮಾಜಿ ಸೈನಿಕರಿಗೆ ರೂ.50/-

ಶುಲ್ಕವನ್ನು ಕಂಪ್ಯೂಟರೈಸ್ಡ್ ಪೋಸ್ಟ್ ಆಫೀಸ್ ಮೂಲಕ ಪಾವತಿಸುವುದು.

ಆಯ್ಕೆ ವಿಧಾನ

ಪ್ರಾಯೋಗಿಕ ಪರೀಕ್ಷೆಯಲ್ಲಿ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Karnataka Power Corporation Ltd., (KPCL) additional posts added to the assistant operative driver posts.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X