ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ನೇಮಕಾತಿ 23 ಜ್ಯೂನಿಯರ್ ಪರ್ಸನಲ್ ಆಫೀಸರ್ (ನಾನ್ -ಹೈದರಾಬಾದ್ ಕರ್ನಾಟಕ) ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ.
ಆಸಕ್ತರು ಅಧಿಸೂಚನೆಯನ್ನು ಓದಿದ ನಂತರ ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಗಳನ್ನು ಹೊಂದಿದ್ದಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾರ್ಚ್ 20, 2019 ರಿಂದ ಏಪ್ರಿಲ್ 22,2019 ರ ಸಂಜೆ 5 ಗಂಟೆಯೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.
CRITERIA | DETAILS |
Name Of The Posts | ಜ್ಯೂನಿಯರ್ ಪರ್ಸನಲ್ ಆಫೀಸರ್ |
Organisation | ಕರ್ನಾಟಕ ವಿದ್ಯುತ್ ನಿಗಮ ನಿಯಮಿತ |
Educational Qualification | ಯಾವುದೇ ಪದವಿ , ಪಿಜಿ ಪದವಿ ಅಥವಾ ಡಿಪ್ಲೋಮಾ |
Job Location | ಕರ್ನಾಟಕ |
Salary Scale | 14,395/- ರಿಂದ 40,785/-ರೂ |
Application Start Date | March 20, 2019 |
Application End Date | April 22, 2019 |
ವಿದ್ಯಾರ್ಹತೆ:
ಜ್ಯೂನಿಯರ್ ಪರ್ಸನಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಹೊಂದಿರಬೇಕು ಮತ್ತು ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮಾ ವಿದ್ಯಾರ್ಹತೆಯನ್ನು ಹೊಂದಿರಬೇಕು.
ವಯೋಮಿತಿ:
ಅರ್ಜಿದಾರರು ಕನಿಷ್ಟ 18 ವರ್ಷ ವಯೋಮಿತಿಯನ್ನು ಹೊಂದಿರತಕ್ಕದ್ದು.
ಗರಿಷ್ಟ ವಯೋಮಿತಿ
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ಪ್ರವರ್ಗ-1 | 40 ವರ್ಷಗಳು |
ಇತರೆ ಹಿಂದುಳಿದ ವರ್ಗಗಳು | 38 ವರ್ಷಗಳು |
ಜನರಲ್ ಮೆರಿಟ್ | 35 ವರ್ಷಗಳು |
ಮಾಜಿ ಸೈನಿಕ | 45 ವರ್ಷಗಳು |
ವೇತನದ ವಿವರ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 14,395/- ರಿಂದ 40,785/-ರೂ ವೇತನವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಶೈಕ್ಷಣಿಕ ವಿದ್ಯಾಭ್ಯಾಸದ ಅಂಕಗಳ ಆಧಾರದ ಮೇಲೆ ಮತ್ತು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಅಭ್ಯರ್ಥಿಗಳು ಅರ್ಜಿಯ ಜೊತೆಗೆ ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ. ಸಾಮಾನ್ಯ ಅಭ್ಯರ್ಥಿಗಳು 500/- ರೂ ಮತ್ತು ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ / ಪ್ರವರ್ಗ-1 ರ ಅಭ್ಯರ್ಥಿಗಳು 250/-ರೂ ಶುಲ್ಕ ಮತ್ತು ಮಾಜಿ ಸೈನಿಕ, ಅಂಗವಿಕಲ ಅಭ್ಯರ್ಥಿಗಳು ನಾಮಿನಲ್ ಶುಲ್ಕ 50/-ರೂ ಅನ್ನು ಪಾವತಿಸಬೇಕಿರುತ್ತದೆ. ಅರ್ಜಿ ಶುಲ್ಕವನ್ನು ಪೋಸ್ಟ್ ಆಫೀಸ್ ನಲ್ಲಿ ಏಪ್ರಿಲ್ 26,2019 ರ ಮಧ್ಯಾಹ್ನ 3 ಗಂಟೆಯೊಳಗೆ ಪಾವತಿಸಬೇಕಿರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ:
ಅಭ್ಯರ್ಥಿಗಳು ಅರ್ಜಿಗಳನ್ನು ಆನ್ಲೈನ್ ನಲ್ಲಿಅಧಿಕೃತ ವೆಬ್ಸೈಟ್ http://karnatakapower.com/ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು. ಆನ್ಲೈನ್ ಹೊರತುಪಡಿಸಿ ಮತ್ಯಾವುದೇ ರೀತಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಅಭ್ಯರ್ಥಿಗಳು ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ