ಕರ್ನಾಟಕ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಅಭಿಯಂತರರು (ಅಸಿಸ್ಟೆಂಟ್ ಇಂಜಿನಿಯರ್) ಮತ್ತು ಕಿರಿಯ ಅಭಿಯಂತರರು (ಜ್ಯೂನಿಯರ್ ಇಂಜಿನಿಯರ್) ಹುದ್ದೆಗಳಿಗೆ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ್ದ ದಿನಾಂಕವನ್ನು ವಿಸ್ತರಿಸಲಾಗಿದೆ.
500 ಅಸಿಸ್ಟೆಂಟ್ ಇಂಜಿನಿಯರ್ ಮತ್ತು 289 ಜೂನಿಯರ್ ಇಂಜಿನಿಯರ್ ಸೇರಿದಂದರೆ ಒಟ್ಟು 889 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಹಿಂದೆ ಅರ್ಜಿ ಸಲ್ಲಿಸಲು ಜುಲೈ 22 ರವರೆಗೆ ಮಾತ್ರ ಕಾಲಾವಕಾಶ ನೀಡಲಾಗಿತ್ತು, ಆದರೆ ಈಗ ಜುಲೈ 31 ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಅರ್ಹತೆ ರೋಸ್ಟರ್ ಪರಿಗಣಿಸಿ ಕೆಪಿಎಸ್ಸಿ ನೇರ ನೇಮಕಾತಿ ನಡೆಸಲಿದೆ.
ಹುದ್ದೆಗಳ ವಿವರ
ಒಟ್ಟು 500 ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳಿದ್ದು ಇವುಗಳಲ್ಲಿ 429 ಸಿವಿಲ್ ಇಂಜಿನಿಯರ್, 71 ಮೆಕ್ಯಾನಿಕಲ್ ಇಂಜಿನಿಯರ್ ಹುದ್ದೆಗಳಾಗಿವೆ. ಸ್ಥಳೀಯ ವೃಂಧದಲ್ಲಿ (ಹೈದರಾಬಾದ್-ಕರ್ನಾಟಕ) 100 ಹುದ್ದೆಗಳಿದ್ದು 98 ಸಿವಿಲ್ ಇಂಜಿನಿಯರ್ ಮತ್ತು 2 ಮೆಕ್ಯಾನಿಕಲ್ ಇಂಜಿನಿಯರ್ ಹುದ್ದೆ ಸೇರಿವೆ.
ವೇತನ ಶ್ರೇಣಿ: ಅಸಿಸ್ಟೆಂಟ್ ಇಂಜಿನಿಯರ್ -ರೂ.22800-43200/-
ಜೂನಿಯರ್ ಇಂಜಿನಿಯರ್ ವಿಭಾಗದಲ್ಲಿ ಒಟ್ಟು 289 ಹುದ್ದೆಗಳಿವೆ. ಅವುಗಳಲ್ಲಿ 200 ಸಿವಿಲ್ ಇಂಜಿನಿಯರ್ ಮತ್ತು 159 ಮೆಕ್ಯಾನಿಕಲ್ ಇಂಜಿನಿಯರ್ ಹುದ್ದೆ ಸೇರಿವೆ. ಇವುಗಳಲ್ಲೇ 87 ಸಿವಿಲ್ ಮತ್ತು 2 ಮೆಕ್ಯಾನಿಕಲ್ ಇಂಜಿನಿಯರ್ ಹುದ್ದೆಗಳಿವೆ.
ವೇತನ ಶ್ರೇಣಿ: ಜೂನಿಯರ್ ಇಂಜಿನಿಯರ್-ರೂ.16000-29600/-
ಅರ್ಜಿ ಶುಲ್ಕ
- ಸಾಮಾನ್ಯ ಅಭ್ಯರ್ಥಿಗಳಿಗೆ ರೂ.300/-
- ಹಿಂದೂಳಿದ ವರ್ಗದ ಅಭ್ಯರ್ಥಿಗಳಿಗೆ ರೂ.150/-
- ಎಸ್ಸಿ, ಎಸ್ಟಿ, ಪ್ರವರ್ಗ-1, ಮಾಜಿ ಸೈನಿಕ ಮತ್ತಉ ಅಂಗವಿಕಲ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಪ್ರಮುಖ ದಿನಾಂಕಗಳು
- ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ: 31-07-2017 (ರಾತ್ರಿ 11:45 ರವರೆಗೆ)
- ಇ-ಅಂಚೆ ಕಛೇರಿಯಲ್ಲಿ ಶುಲ್ಕ ಸಂದಾಯ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕ ಮತ್ತು ಸಮಯ: 01-08-2017 (ಅಂಚೆ ಕಛೇರಿಯ ವ್ಯವಹಾರದ ವೇಳೆಯೊಳಗೆ)
ಹೆಚ್ಚಿನ ಮಾಹಿತಿಗಾಗಿ www.kpsc.kar.nic.in ಗಮನಿಸಿ


Click it and Unblock the Notifications











